ರೈತರ ಪರ ಸರ್ಕಾರಕ್ಕೆ ಬೆಂಬಲ: ಲಕ್ಷ್ಮಣ್

ಕೆಆರ್ ಪುರ,ಮೇ.೭- ರೈತ ಪರ ಸರ್ಕಾರಕ್ಕೆ ಸದಾ ಪೋತ್ಸಾಹ ರೈತ ವಿರುದ್ಧ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆ ನೀಡುತ್ತೇವೆ ಎಂದು ರತ್ನ ಭಾರತ ರೈತ ಸಮಾಜದ ರಾಜ್ಯಾಧ್ಯಕ್ಷ ಲಕ್ಷ್ಮಣ್ ಅವರು ತಿಳಿಸಿದರು.
ಕೆಆರ್ ಪುರದ ತಮ್ಮ ಕಚೇರಿ ಯಲ್ಲಿ ವಿವಿಧ ಭಾಗಕ್ಕೆ ಅಧ್ಯಕ್ಷರು, ಕಾರ್ಯದರ್ಶಿಗಳನೇಮಕ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿ, ರತ್ನ ಭಾರತ ರೈತ ಸಮಾಜ ರೈತ ಕುಟುಂಬದಿಂದ ಬಂದವರನ್ನು ಸದಾ ಪೋತ್ಸಾಹಿಸುತ್ತದೆ ಅಂತೆಯೇ ಇಂದು ಆವಲಹಳ್ಳಿ, ಕೋಲಾರ, ಚಿಕ್ಕಮಂಗಳೂರು ಭಾಗಕ್ಕೆ ವಿವಿಧ ಭಾಗಕ್ಕೆ ರೈತ ಕುಟುಂಬದವರನ್ನು ಸಂಘಟನೆಗೆ ಸೇರಿಸಿಕೊಳ್ಳಲಾಗಿದೆ ಎಂದರು.
ರೈತರಿಗೆ ಸೇವೆ ಮಾಡುವು ಉದ್ದೇಶ ಇದ್ದರೆ ಮಾತ್ರ, ನಮ್ಮ ಸಂಘಟನೆಗೆ ಬನ್ನಿ ಸಂಘಟನೆಗೆ ಕಳಂಕ ಬಾರದಂತೆ ಕೆಲಸ ಮಾಡಿ ಎಂದು ನೂತನವಾಗಿ ಆಯ್ಕೆಯಾದವರಿಗೆ ಎಂದು ಕಿವಿಮಾತು ಹೇಳಿದರುಚೌಕಟ್ಟಿನಲ್ಲಿ ಅನ್ಯಾಯ ಆದಾಗ ಹೋರಾಟ ಮಾಡಬೇಕು, ಕೃಷಿ ಪ್ರಧಾನ ದೇಶದಲ್ಲಿ ಕೃಷಿಕರಿಗೆ ಹೆಚ್ಚು ಒತ್ತು ನೀಡಬೇಕು. ಬಿಜೆಪಿ ಇದ್ದಾಗ ಮಾಡಿದ ಬದಲಾವಣೆಯನ್ನು ಪಟ್ಟಿ ಮಾಡಿದ್ದು ನೀತಿ ಸಂಹಿತೆ ಮುಗಿದ ಕೂಡಲೆ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ರೈತರಿಗೆ ಅನುಕೂಲವಾಗುವಂತೆ ಕೆಲಸ ಮಾಡುತ್ತೇವೆ ಎಂದರು.
ಆವಲಹಳ್ಳಿ ಗ್ರಾಮದ ಅಧ್ಯಕ್ಷರ ನಾಗಿ ಜಯದೀಪ್, ಹಂಚರಹಳ್ಳಿ ಗ್ರಾಮ ಅಧ್ಯಕ್ಷರಾಗಿ ರಾವತ್ ಪ್ರಸಾದ್, ಬೆ.ನ.ಉಪಾಧ್ಯಕ್ಷ ಶಿವಕುಮಾರ್, ಕೋಲಾರ ಜಿಲ್ಲಾ ಕಾರ್ಯದರ್ಶಿಯಾಗಿ ಶ್ರೀಧರ್ ಕಾಫಿ ಬೆಳೆ ಮಾದರಿಯಾಗಿ ಅವರನ್ನು ಚಿಕ್ಕಮಂಗಳೂರು ತಾಲ್ಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ.ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾಧ್ಯಕ್ಷ ನಂದೀಶ್ ಗೌಡ, ಬೆ.ನ. ಜಿಲ್ಲಾಧ್ಯಕ್ಷ ನಾಗರಾಜ್, ಗೌರವ ಅಧ್ಯಕ್ಷ ಇಟ್ಬಾಲ್ ಅಹಮ್ಮದ್ ಖಾನ್, ಸುಧಾಕರ್, ಶಿವಕುಮಾರ್ ಮತ್ತಿತರರಿದ್ದರು.