ರೈತರ ಪರಿಹಾರಕ್ಕೆ ಜೆಡಿಎಸ್ ಮನವಿ

ಕಲಬುರಗಿ ನ 24: ಅಕಾಲಿಕ ಮಳೆಗೆ ಬೆಳೆ ಹಾನಿ ಉಂಟಾದ ರೈತರ ಪ್ರತಿ ಎಕರೆ ಜಮೀನಿಗೆ 50 ಸಾವಿರ ರೂ ಪರಿಹಾರ ನೀಡುವದು ಸೇರಿದಂತೆ ವಿವಿಧ ಬೇಡಿಕೆಗಳ ಮನವಿಯನ್ನು ಇಂದು ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಜನ ಸಂಕಷ್ಟದಲ್ಲಿದಾಗ ಬಿಜೆಪಿಯವರು ಜನಸ್ವರಾಜ್ ಯಾತ್ರೆ ಆರಂಭಿಸಿದ್ದು ಖಂಡನೀಯ.ಮನೆ ಕಳೆದು ಕೊಂಡವರಿಗೆ 5 ಲಕ್ಷ ರೂ,ಪ್ರವಾಹಕ್ಕೆ ಸಿಲುಕಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡುವಂತೆ ಕೋರಿ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಾಮರಾವ ಸೂರನ್,ಅಲಿಂ ಇನಾಮದಾರ,ಮನೋಹರ ಪೋದ್ದಾರ,ಕೃಷ್ಣಾರೆಡ್ಡಿ,sಶಿವಾಜಿ ಸೂರ್ಯವಂಶಿ,ಶಂಕರ ಕಟ್ಟಿಸಂಗಾವಿ,ಶಿವಾನಂದ ದ್ಯಾಮಗೊಂಡ,ಆನಂದ ಪಾಟೀಲ ಲಿಂಗನವಾಡಿ,ಮಲಿಕ್ ನಾಗನಹಳ್ಳಿ,ಪಾರ್ವತಿ ಪುರಾಣಿಕ,ಮಹಾನಂದಾ ಪಡಶೆಟ್ಟಿ,ಶಕುಂತಲಾ ಪಾಟೀಲ ಸೇರಿದಂತೆ ಹಲವರಿದ್ದರು.