ರೈತರ ಪರವಾಗಿ ನಿಜವಾಗಿಯೂ ಕೆಲಸ ಮಾಡಿದ್ದು ಜೆಡಿಎಸ್:ರಾಜುಗೌಡ

ತಾಳಿಕೋಟೆ:ಸೆ.21: ರಾಜ್ಯದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸಾಕಷ್ಟು ಇದ್ದರೂ ಕೂಡಾ ರೈತರ ಪರ ಕಾಳಜಿ ಉಳ್ಳ ಪಕ್ಷ ಜೆಡಿಎಸ್ ಪಕ್ಷ ಒಂದಾಗಿದೆ ನಿಜವಾಗಲು ರೈತರ ಪರವಾಗಿ ಕೆಲಸಗಳನ್ನು ಮಾಡಿದ್ದು ಜೆಡಿಎಸ್ ಪಕ್ಷವಾಗಿದೆ ಎಂದು ಜ್ಯಾತ್ಯಾತೀತ ಜನತಾದಳ(ಜೆಡಿಎಸ್)ಪಕ್ಷದ ದೇವರ ಹಿಪ್ಪರಗಿ ಮತಕ್ಷೇತ್ರದ ನಾಯಕ ರಾಜುಗೌಡ ಪಾಟೀಲ(ಕು.ಸಾಲವಾಡಗಿ) ಅವರು ನುಡಿದರು.
ಸೋಮವಾರರಂದು ತಾಲೂಕಿನ ಬೇಕಿನಾಳ ಗ್ರಾಮದಲ್ಲಿ ಆಯೋಜಿಸಲಾದ ದೇವರಹಿಪ್ಪರಗಿ ಮತಕ್ಷೇತ್ರದ ಜೆಡಿಎಸ್ ಕಾರ್ಯಕಾರಣಿ ಸಭೆ ಹಾಗೂ ವಿವಿಧ ಪಕ್ಷದ ತೊರೆದು ಜೆಡಿಎಸ್ ಪಕ್ಷಕ್ಕೆ ಕಾರ್ಯಕರ್ತರ ಸೇರ್ಪಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ರಾಜ್ಯದಲ್ಲಿ ರೈತರಿಗೆ ಬೆಂಬಲ ಬೆಲೆ ಒದಗಿಸುವಂತಹ ಕಾರ್ಯವನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾಡಿದ್ದಾರೆ ದೇಶದಲ್ಲಿ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಅವರ ಸಂಕಷ್ಟಕ್ಕೆ ನಿಂತಂತ ಏಕೈಕ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಿದ್ದಾರೆ ರಾಜ್ಯದಲ್ಲಿ ಹೊಸ ಬದಲಾವಣೆಯನ್ನು ತರಬೇಕಾಗಿದ್ದರೆ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಬೇಕಾಗಿದೆ ಕಾರ್ಯಕರ್ತರೆಲ್ಲರೂ ಒಗ್ಗಟ್ಟಾಗಿ ಮುಂಬರುವ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದ ಅವರು ನೀರಾವರಿ ಕನಸು ಜೆಡಿಎಸ್ ಪಕ್ಷದ್ದಾಗಿದೆ ಈ ಹಿಂದೆ ಪ್ರಧಾನ ಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡ ಅವರು 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಆಲಮಟ್ಟಿ ಡ್ಯಾಂನ್ನು ಎತ್ತರಿಸಿ ಈ ಭಾಗಕ್ಕೆ ನೀರು ಸಿಗುವಂತೆ ಮಾಡಿದ್ದಾರೆ ಆದರೆ ಸದ್ಯ ನಿರ್ಮಾಣ ಹಂತದಲ್ಲಿರುವ ಬೂದಿಹಾಳ-ಫೀರಾಪೂರ ಏತ ನೀರಾವರಿ ಯೋಜನೆಯು ಅವೈಜ್ಞಾನಿಕವಾಗಿದೆ ಈ ಹಿಂದೆ ಸದರಿ ಯೋಜನೆ ಓಫನ್ ಕಾಲುವೆಗಳು ಇದ್ದವು ಅವುಗಳನ್ನು ಬದಲಾವಣೆ ಮಾಡಿ ಪೈಪಲೈನ್ ಮೂಲಕ ನೀರು ಕೊಡುತ್ತೇವೆಂದು ಸಾವಿರಾರು ಕೋಟಿ ರೂ. ಹಾಳು ಮಾಡುತ್ತಿದ್ದಾರೆ ಇಂತಹದ್ದೇ ಯೋಜನೆ ಜಮಖಂಡಿ ಹತ್ತಿರ ಮಾಡಲಾಗಿದೆ ರೈತರ ಜಮೀನುಗಳಿಗೆ ನೀರು ಬರದ ಕಾರಣ ಎಲ್ಲ ಪೈಪಲೈನ್‍ಗಳನ್ನು ಕಿತ್ತು ಹಾಕಿ ಮತ್ತೇ ಓಫನ್ ಕಾಲುವೆಗಳನ್ನು ಮಾಡುತ್ತಿದ್ದಾರೆ ಕಣ್ಣುಮುಂದೆ ನಿದರ್ಶನವಿದ್ದರೂ ಕೂಡಾ ಕಾಮಗಾರಿಯನ್ನು ಮಾಡುತ್ತಿರುವದು ಯಾಕೆ? ಎಂಬುದು ಎಲ್ಲರಿಗೂ ತಿಳಿದ ವಿಷಯವಾಗಿದೆ ಎಂದ ಅವರು ದೇವರ ಹಿಪ್ಪರಗಿ ಮತಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಭಲಗೊಳ್ಳುತ್ತಿದೆ ಇದಕ್ಕೆ ಕಾರಣ ಕಾರ್ಯಕರ್ತರ ಶ್ರಮವೇ ಮುಖ್ಯವಾಗಿದೆ ಈ ಹಿಂದೆ ಕಾಂಗ್ರೇಸ್‍ನವರು ಕಾಂಗ್ರೇಸ್ ನಡಿಗೆ ಕೃಷ್ಣೆಯ ಕಡೆಗೆ ಪಾದಯಾತ್ರೆ ಮಾಡಿದರು ವರ್ಷಕ್ಕೆ 10 ಸಾವಿರ ಕೋಟಿ ರೂ. ಕೊಡುತ್ತೇವೆ ಎಂದರು ಆದರೆ ಐದು ವರ್ಷ ಪೂರ್ಣ ಆಡಳಿತ ಮಾಡಿದರೂ 1 ರೂ ಕೊಡಲಿಲ್ಲಾ ಇಂತಹ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯ ಮತ್ತು ನಮ್ಮ ವಿಜಯಪೂರ ಜಿಲ್ಲೆ ಉದ್ದಾರವಾಗಲು ಸಾದ್ಯವಿಲ್ಲಾ ಅದಕ್ಕಾಗಿ ಪ್ರಾದೇಶಿಕ ಪಕ್ಷ ಜೆಡಿಎಸ್ ರಾಜ್ಯಕ್ಕೆ ಅತ್ಯವಶ್ಯವಾಗಿ ಬೇಕಾಗಿದೆ ಎಲ್ಲ ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸುವದರೊಂದಿಗೆ ಮುಂದಿನ ಚುನಾವಣೆಗೆ ಸಜ್ಜಾಗಬೇಕೆಂದರು.
ಜೆಡಿಎಸ್ ಪಕ್ಷದ ತಾಲೂಕಾ ಕಾರ್ಯಾಧ್ಯಕ್ಷ ಮಡುಸೌಕಾರ ಬಿರಾದಾರ ಅವರು ಮಾತನಾಡಿ ಜೆಡಿಎಸ್‍ನ ನಾಯಕ ರಾಜುಗೌಡ ಪಾಟೀಲ ಅವರ ಹಿಂದೆ ಕೆಲಸ ಮಾಡುವವರು ಹೃದಯವಂತ ಕಾರ್ಯಕರ್ತರಾಗಿದ್ದಾರೆ 15 ವರ್ಷಗಳಿಂದ ಕಾರ್ಯಕರ್ತರನ್ನು ಕಟ್ಟಿಕೊಂಡು ಹಗಲಿರುಳು ದುಡಿಯುತ್ತಾ ಸಾಗಿದ್ದಾರೆ ಈ ಹಿಂದಿನ ಚುನಾವಣೆಯಲ್ಲಿ ಈ ಕ್ಷೆತ್ರದಲ್ಲಿ ಜೆಡಿಎಸ್ ಪಕ್ಷ ಸೋಲಲು ಕಾರಣವೇನೆಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳುವದರೊಂದಿಗೆ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಪ್ರತಿ ಮನೆ ಮನೆಗೆ ಹೋಗಿ ಜೆಡಿಎಸ್ ನಾಯಕ ರಾಜುಗೌಡರ ಗೆಲುವಿಗಾಗಿ ಮತದ ಬಿಕ್ಷೆಯನ್ನು ಎಲ್ಲ ನಿಷ್ಠಾವಂತ ಕಾರ್ಯಕರ್ತರು ಕೇಳಬೇಕಾಗಿದೆ ಕ್ಷೇತ್ರದಲ್ಲಿ ಎರಡು ಪಕ್ಷಗಳು ಮಾಡಿರುವ ಅವಾಂತರ ಸಾಕಾಗಿದೆ ಬ್ರೀಟಿಷರ್ ಆಡಳಿತಕ್ಕಿಂತಲೂ ಅಭಿವೃದ್ದಿಯಲ್ಲಿ ಕ್ರೂರವಾಗಿ ನಡೆದುಕೊಂಡಿರುವದು ಕಣ್ಣುಮುಂದೆ ಕಾಣುತ್ತಿದೆ ಈ ಕ್ಷೇತ್ರಕ್ಕೆ ಸ್ವಾತಂತ್ರ್ಯವೆಂಬುದು ಸಿಗಬೇಕಾದರೆ 2023ರಲ್ಲಿ ರಾಜುಗೌಡರನ್ನು ಗೆಲ್ಲಿಸುವ ಮೂಲಕ ಸಮಾನತೆಯನ್ನು ತರಬೇಕಾಗಿದೆ ಎಂದರು.
ಜೆಡಿಎಸ್ ಮುಖಂಡ ಕಾಶೀಂಸಾಬ ನಾಯ್ಕೋಡಿ ಮಾತನಾಡಿ ಕಳೆದ ಭಾರಿಯ ಚುನಾವಣೆಯಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿಯ ಒಳ ಒಪ್ಪಂದದಿಂದ ಇಲ್ಲಿ ಬಿಜೆಪಿ ಪಕ್ಷ ಗೆದ್ದಿದೆ ಮುಸ್ಲಿಂ ಸಮಾಜ ನಾಯಕರುಗಳು ರಾಜುಗೌಡ ಪಾಟೀಲ ಅವರು ಗೆಲ್ಲಬಾರದೆಂಬ ಉದ್ದೇಶದಿಂದ ಕಾಂಗ್ರೇಸ್ ಮತ್ತು ಬಿಜೆಪಿ ಅವರ ಕಡೆಯಿಂದ ದುಡ್ಡು ಪಡೆದು ಮುಸ್ಲಿಂ ಸಮಾಜವನ್ನು ದಾರಿ ತಪ್ಪಿಸುವಂತಹ ಕಾರ್ಯವನ್ನು ಮಾಡಿದ್ದಾರೆ ಆದರೆ ಎಲ್ಲ ಮುಸ್ಲಿಂ ಸಮಾಜದ ಬಾಂದವರು ಈ ಭಾರಿ ಜಾಗೃತರಾಗಿದ್ದಾರೆ ಹಣ ಎಂದೂ ಶಾಸ್ವತವಲ್ಲಾ ವ್ಯಕ್ತಿ ಶಾಶ್ವತವೆಂದು ರಾಜುಗೌಡರ ಬೆಂಬಲಕ್ಕೆ ನಿಂತಿದ್ದಾರೆ ಮುಂಬರುವ ಚುನಾವಣೆಯಲ್ಲಿ ರಾಜುಗೌಡರು 30 ಸಾವಿರ ಮತಗಳ ಅಂತರದಿಂದ ಗೆಲ್ಲಿಸುವಂತಹ ಕಾರ್ಯ ಕಾರ್ಯಕರ್ತರೆಲ್ಲರೂ ಮಾಡಲಿದ್ದೇವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಬಸನಗೌಡ ಮಾಡಗಿ ಅವರು ಮಾತನಾಡಿ ನಮ್ಮ ಜಿಲ್ಲೆಯಲ್ಲಿಯೇ ಡ್ಯಾಂ ಇದ್ದರೂ ಕೂಡಾ ಕುಡಿಯುವ ನೀರಿಗೂ ತಾಪತ್ರೆಯ ಅನುಭವಿಸುವಂತಹ ಸಂದರ್ಬಗಳು ಸಾಕಷ್ಟು ಬಂದಿದ್ದವು ಆ ಸಮಯದಲ್ಲಿ ವಿಜಯಪೂರ ಜಿಲ್ಲೆಯ ನೀರಾವರಿಯಾಗಬೇಕೆಂಬ ಉದ್ದೇಶದಿಂದ ಆಗಿನ ಪ್ರಧಾನಿ ಎಚ್.ಡಿ.ದೇವೇಗೌಡರು 9 ಸಾವಿರ ಕೋಟಿ ರೂ. ಬಿಡುಗಡೆ ಮಾಡಿ ಆಲಮಟ್ಟಿ ಡ್ಯಾಂ ಎತ್ತರಿಸುವಂತಹ ಕಾರ್ಯ ಮಾಡಿದರು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸದ್ಯ ಕಾಲುವೆಗಳಲ್ಲಿ ನೀರು ಹರಿಯುತ್ತಿದೆ ಎಂದರೆ ಅದು ಜೆಡಿಎಸ್ ಕೊಟ್ಟ ಕೊಡುಗೆಯಾಗಿದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ಈ ರಾಜ್ಯದ ರೈತರ 25 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದ್ದಾರೆ ಮಹಿಳೆಯರಿಗೆ ವಯಸ್ಕರಿಗೆ ಸಿಗುತ್ತಿದ್ದ ಪಿಂಚಣಿಯನ್ನು 1 ಸಾವಿರ ರೂ. ಏರಿಸುವ ಮೂಲಕ ಹೊಸ ಆಯಾಮವನ್ನು ತಂದಿದ್ದಾರೆಂದರು.
ಜೆಡಿಎಸ್ ಮುಖಂಡರುಗಳಾದ ಸಾಯಬಣ್ಣ ಬಾಗೇವಾಡಿ, ಬಸನಗೌಡ ಬಿರಾದಾರ, ರಮೇಶ ಹಂಡಿ ಅವರು ಮಾತನಾಡಿದರು.
ಇದೇ ಸಮಯದಲ್ಲಿ ಕಾಂಗ್ರೇಸ್ ಮತ್ತು ಬಿಜೆಪಿ ಪಕ್ಷ ತೋರೆದ ನೂರಾರು ಕಾರ್ಯಕರ್ತರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಕಾರ್ಯಕ್ರಮಕ್ಕೂ ಮುಂಚೆ ಕನ್ನಢಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು.
ಈ ಸಮಯದಲ್ಲಿ ಜೆಡಿಎಸ್ ಮುಖಂಡರುಗಳಾದ ಶೇಖರಗೌಡ ಪಾಟೀಲ, ಮಶಾಕಸಾಬ ಚೌದ್ರಿ, ಬಾಸ್ಕರ ಗುಡಿಮನಿ, ಗುರನಗೌಡ ಪಾಟೀಲ, ಶರಣು ಧರಿ, ಮುನ್ನಾ ಮುಳಖೇಡ, ರಾಘು ಗುಡಿಮನಿ, ಹಣಮಂತಗೌಡ ಹಳದಿಮನಿ, ಸುನೀಲ ಮಾಗಿ, ಮಹಿಳಾ ಘಟಕದ ಅಧ್ಯಕ್ಷೆ ರೇಣುಕಾ ಅಂಗಡಿ, ಅರವಿಂದ ಹಾಲಣ್ಣವರ, ಬಿಜ್ಜು ನೀರಲಗಿ, ವಿಶ್ವನಾಥ ಬಿದರಕುಂದಿ, ವಿರೇಶಗೌಡ ಪಾಟೀಲ, ಹುಸೇನಬಾಷಾ ಮುಲ್ಲಾ, ರಿಯಾಜ ನಾಯ್ಕೋಡಿ, ಈರಗಂಟಿ ಬಡಿಗೇರ, ಪುಷ್ಪಾ ಲಕ್ಕುಂಡಿಮಠ, ಮಹಾಂತಗೌಡ ಪಾಟೀಲ, ಮುರುಗೇಶ ತಾಳಿಕೋಟಿ, ಯಲ್ಲಪ್ಪ ಕನ್ನೂರ, ದಸ್ತಗೀರ ದಳವಾಯಿ, ಮೈಹಿಬೂಬ ಪಟೇಲ, ಮಹಿಬೂಬ ಚಟ್ನಳ್ಳಿ, ಮುತ್ತು ಮುಗಳಿ, ಮೊದಲಾದವರು ಇದ್ದರು.ರಮೇಶ ಹಂಡಿ ನಿರೂಪಿಸಿ ವಂದಿಸಿದರು.