ರೈತರ ಪಂಪ್‍ಸೆಟ್ ಕಳವು ನಿಯಂತ್ರಿಸಿ

ಭಾಲ್ಕಿ:ಆ.11: ಇಲ್ಲಿಯ ನೂತನ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಮತ್ತು ನಗರ ಪೆÇಲೀಸ್ ಠಾಣೆಯ ನೂತನ ಸಿಪಿಐ ಅಂಬರೀಶ್ ಅವರನ್ನು ಜಿಲ್ಲಾ ರೈತ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ನೂತನ ಪೆÇಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ, ತಾಲೂಕಿನಲ್ಲಿ ನಿರಂತರವಾಗಿ ರೈತರ ಪಂಪ್‍ಸೆಟ್, ಮೋಟಾರ್ ಕಳವು ಆಗುತ್ತಿವೆ. ಇದರಿಂದ ರೈತರು ಆತಂಕಕ್ಕೆ ಸಿಲುಕಿದ್ದಾರೆ.

ಕಣಜಿ, ಜೋಳದಾಪಕಾ ಸೇರಿ ವಿವಿಧ ಹೊಲಗಳಲ್ಲಿ ಅಳವಡಿಸಿದ ರೈತರ ಪಂಪ್‍ಸೆಟ್ ಕಳವು ಆಗಿವೆ. ಸಾವಿರಾರೂ ರೂ ನಷ್ಟ ಅನುಭವಿಸುತ್ತಿದ್ದಾರೆ. ಇದರ ಜತೆಗೆ ಸಕಾಲಕ್ಕೆ ಬೆಳೆಗಳಿಗೆ ನೀರು ಬಿಡಲಾಗದೇ ರೈತರು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ.

ಕೂಡಲೇ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರೈತರ ಪಂಪ್‍ಸೆಟ್ ಕಳವಿಗೆ ಕಡಿವಾಣ ಹಾಕುವುದರ ಜತೆಗೆ ಕಳ್ಳತನ ಮಾಡುವವರನ್ನು ಶಿಕ್ಷೆಗೆ ಒಳಪಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕು ರೈತ ಸಂಘದ ಅಧ್ಯಕ್ಷ ಬಾಬುರಾವ ಜೋಳದಾಪಕಾ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾರ್, ಪ್ರಮುಖರಾದ ಶೇಷಾರಾವ ಕಣಜಿ, ದತ್ತಾ ಚಿಮ್ಮಾಂಜಿ, ನಾಗಶೆಟ್ಟಿ ಖಂದಾರೆ, ಶಾಂತವೀರ ಪಾಟೀಲ್ ಸೇರಿದಂತೆ ಹಲವರು ಇದ್ದರು.