ರೈತರ ನೆರವಿಗೆ ಧಾವಿಸಿದ ಸಂಜೀವನ ಯಾಕಪೂರ್

ಚಿಂಚೋಳಿ,ಮೇ30- ತಾಲೂಕಿನ ದೇಗಲಮಡಿ ಗ್ರಾಮದ ರೈತರಾದ ರಘುನಾಥ ದೇಸಾಯಿ ಅವರು, ಬೆಳೆದ ಕಲ್ಲಂಗಡಿ ಹಣ್ಣು ಲಾಕ್‍ಡೌನ್ ಹಿನ್ನಲೆಯಲ್ಲಿ ಮಾರುಕಟ್ಟೆಗೆ ಸಾಗಿಸಲಾಗದೆ ತೀವ್ರ ಹಾನಿ ಅನುಭವಿಸುತ್ತಿರುವ ವಿಷಯವನ್ನು ಅರಿತು ಸಂಕಷ್ಟಕ್ಕೆ ಸಿಲುಕಿರುವ ರೈತನ ನೆರವಿಗೆ ಮುಂದಾದವರು ಜೆಡಿಎಸ್ ಮುಖಂಡ ಸಂಜೀವನ ಯಾಕಪೂರ ಅವರು.
ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಮತ್ತು ಮಾರುಕಟ್ಟೆ ಸಿಗದೇ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ, ರಾಜ್ಯ ಸರ್ಕಾರ ರೈತರ ನೆರವಿಗೆ ಬಾರದಿರುವುದು ಖಂಡನೀಯ ಎಂದರು.
ಸಂಕಷ್ಟಕ್ಕೆ ಸಿಲುಕಿರುವ ದೇಗಲಮಡಿ ಗ್ರಾಮದ ರೈತರಾದ ರಘುನಾಥ ದೇಸಾಯಿ ಅವರ ಹೊಲಕ್ಕೆ ತೆರಳಿದ ಯಾಕಪೂರ ಅವರು, ಅವರು ಬೆಳೆದ ಎರಡು ಎಕರೆ ಕಲ್ಲಂಗಡಿ ಹಣ್ಣುಗಳನ್ನು ಖರೀದಿ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತಾಲೂಕು ಬಹುತೇಕ ರೈತರು ತಮ್ಮ ತಮ್ಮ ಹೊಲದಲ್ಲಿ ಕಲ್ಲಂಗಡಿ ಯನ್ನು ಬೆಳೆದಿದ್ದಾರೆ ಅವರ ಕಲ್ಲಂಗಡಿಹಣ್ಣು ಗಳನ್ನು ಸ್ವತಃ ಸರ್ಕಾರವೇ ಖರಿದಿಸಬೇಕು ಮತ್ತು ಸೂಕ್ತ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು. .
ಚಿಂಚೋಳಿ ತಾಲೂಕಿನ ರೈತರು ಬಹಳಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ, ನನ್ನ ವೈಯಕ್ತಿ ಸಹಾಯ ಸಹಾಕಾರ ಇದ್ದೆ ಇರುತ್ತದೆ.
ಖರಿದಿ ಮಾಡಿರುವ ಕಲ್ಲಂಗಡಿ ಗಳನ್ನು ಯಾಕಪೂರ ಅವರು, ಚಿಂಚೋಳಿ ತಾಲೂಕಿನ ರುಸ್ತಮ್ಪುರ್. ಹೂವಿನಬಾವಿ. ತಡ್ಕೊಳ್ಳಿ. ಗಂಜಿಗೆರೆ. ಪಸ್ತಪೂರ್.ಮೋಘ. ಸಾಸರ್ಗಾವ್. ರಣಪುರ. ಗ್ರಾಮದ ಜನರಿಗೆ ಉಚಿತವಾಗಿ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ. ರಘು ದೇಸಾಯಿ. ಬಸವರಾಜ ಮೋಘಾ. ಹಣಮಂತರೆಡ್ಡಿ ಬಕ್ಕಾ. ರಾಜು ದೋಟಿಕೋಳ. ಶೇಖರ್. ಅರವಿಂದ ಜೋತಗೊಂಡ. ಪ್ರಕಾಶರೆಡ್ಡಿ. ಪವನಪಾಟೀಲ. ಪವನ ಯಾಳಗಿ. ಸನ್ನಿ. ಅಂಬರೇಶ. ಚಂದ್ರಕಾಂತ. ನಾನಸಾಹೇಬ ಜಾಗೀರದಾರ. ಈಶ್ವರ ವಾಲಿಕಾರ. ಹಣಮಂತರಾವ ದೇಶಪಾಂಡೆ. ಅನೀಲ. ಶ್ರೀಕಾಂತ. ರಘು ಹುವಿನಬಾವಿ. ತುಕ್ಕಾರಾಮ. ಸಂತೋಷ ತಾಡಪಳ್ಳಿ. ಸಿದ್ದಣ್ಣಾ. ಬಸವರಾಜ ಭಾಲಿ. ಅನೀಲಕುಮಾರ. ಉಪಸ್ಥಿತರಿದ್ದರು.