ರೈತರ ನಡೆ ವಿಧಾನಸೌಧ ಕಡೆ ಪೂರ್ವಭಾವಿ ಸಭೆ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಸೆ.07: ರೈತರ ನಡೆ ವಿಧಾನಸೌಧ ಕಡೆ ಎಂಬ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ದೇವರ ಮನಿ ಮಹೇಶ್ ಅವರ ಅಧ್ಯಕ್ಷತೆಯಲ್ಲಿ  ಹಮ್ಮಿಕೊಳ್ಳಲಾಯಿತು.
 ಈ ಸಭೆಯನ್ನು ಕುರಿತು ರಾಜ್ಯ ಉಪಾಧ್ಯಕ್ಷರಾದ ದೇವರ ಮನಿ ಮಹೇಶ್ ಮಾತನಾಡಿ ಇದೇ 12 ರಂದು ಅಧೀವೇಶನ ನಡೆಯಲಿದೆ, ಕೊಟ್ಟೂರು ತಾಲೂಕಾಗಿ ಮೂರು ವರ್ಷವಾಗಿದ್ದು ರೈತರು ಕೂಡ್ಲಿಗಿಯ ಹಳೆಯ ತಾಲೂಕು ಕಛೇರಿಗೆ ಓಡಾಡಲು ತೊಂದರೆ ಆಗುತ್ತದೆ ಆದಷ್ಟು ಬೇಗ ಎಲ್ಲಾ ಇಲಾಖೆಗಳು ಕೊಟ್ಟೂರಿನಲ್ಲಿ ಆರಂಭವಾಗಬೇಕು, ಹಾಗೂ ತುಂಗಾಭದ್ರ ನದಿಯಿಂದ ಏತ ನೀರಾವರಿ ಮುಖಾಂತರ ಕೆರೆಗಳಿಗೆ ನೀರು ತುಂಬಿಸಬೇಕು. ಕೇಂದ್ರ ಸರ್ಕಾರ ಹಿಂಪಡೆದ ಮೂರು ಕೃಷಿ ಕಾನೂನುಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು. ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ವಿದ್ಯುತ್ ಖಾಸಗಿಕರಣ ಬಿಲ್ಲನ್ನು ಹಿಂಪಡೆಯಬೇಕು ಹಾಗೂ ರೈತರ ಪಂಪ್ಸೆಟ್ ಗಳಿಗೆ ಮೀಟರ್ ಅಳವಡಿಸುವ ಕಾರ್ಯವನ್ನು  ನಿಲ್ಲಿಸಲು ಹಾಗೂ ಅನೇಕ ರೈತರು ಸಮಸ್ಯೆಯ  ಬಗ್ಗೆ ಚರ್ಚೆ ಮಾಡಲು ವಿಧಾನಸೌಧದ ಕಡೆ ಹೋಗಲು ಸಜ್ಜಾಗಬೇಕು ಎಂದು ತಿಳಿಸಿದರು.
 ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
 ಜಿಲ್ಲಾ ಉಪಾಧ್ಯಕ್ಷರಾಗಿ ಮರಳು ಸಿದ್ದಪ್ಪ, ಜಿಲ್ಲಾ ಗೌರವ ಅಧ್ಯಕ್ಷರಾಗಿ ಕೊಟ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕೊಟ್ರಯ್ಯ, ಕೊಟ್ಟೂರು ತಾಲೂಕು ಅಧ್ಯಕ್ಷರಾಗಿ ನಾಗರಾಜ್,  ಉಪಾಧ್ಯಕ್ಷರಾಗಿ ಹೊನ್ನೂರ್ ಸಾಬ್, ಕೊಟ್ಟೂರು ಘಟಕದ ಅಧ್ಯಕ್ಷರಾಗಿ ಸಿದ್ದೇಶ್, ಗೌರವ ಅಧ್ಯಕ್ಷರಾಗಿ ಗೋಣೆಪ್ಪ , ಕೊಟ್ಟೂರು ತಾಲೂಕು ಪ್ರಧಾನ ಕಾರ್ಯದರ್ಶಿಯಾಗಿ ಜಂಬಣ್ಣ, ಕೊಟ್ಟೂರು ತಾಲೂಕು ಘಟಕದ ಕಾರ್ಯದರ್ಶಿ ಯಾಗಿ ಪ್ರಕಾಶ್, ಅಯ್ಯನಹಳ್ಳಿ ಗ್ರಾಮ ಘಟಕದ ಅಧ್ಯಕ್ಷರಾಗಿ ಅಜ್ಜಯ್ಯ , ಉಪಾಧ್ಯಕ್ಷರಾಗಿ ನಾಗಪ್ಪ,  ಮತ್ತಿತರರ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತ್ತು. ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ರೈತ ಮುಖಂಡರು ಸೇರಿದ್ದರು.

Attachments area