ರೈತರ ದೆಹಲಿ ಚಲೋ ಪುನಾರಂಭ

ಪಟಿಯಾಲ,ಮಾ.೬- ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಾತರಿ, ರೈತರು ಮತ್ತು ರೈತ ಕಾರ್ಮಿಕರಿಗೆ ಪಿಂಚಣಿ, ಕೃಷಿ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರ ಸರ್ಕಾರ ಒತ್ತಾಯಿಸಲು ಮಾರ್ಚ್ ೧೦ ರಂದು ದೇಶಾದ್ಯಂತ ನಾಲ್ಕು ಗಂಟೆಗಳ “ರೈಲು ರೋಕೋಗೆ” ರೈತ ನಾಯಕರು ಕರೆ ನೀಡಿದ್ದಾರೆ.ಈ ನಡುವೆ ವಿವಿದ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಸ್ಥಗಿತಗೊಂಡಿದ್ದ ರೈತರ ದೆಹಲಿ ಚಲೋ ಪಾದಯಾತ್ರೆ ಇಂದಿನಿಂದ ಪುನಃ ಆರಂಭವಾಗಿದ್ದು ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.ದೆಹಲಿ ಪೊಲೀಸರು ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳಲ್ಲಿ ಹಾಗೂ ರೈಲು ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ.ಪಟಿಯಾಲ ಜಿಲ್ಲೆಯಲ್ಲಿ ಪಂಜಾಬ್-ಹರಿಯಾಣ ಶಂಭು ಗಡಿ ಬಳಿ ರೈತರು ದೆಹಲಿ ಚಲೋ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ರೈತರು ಮತ್ತು ಪೊಲೀಸರನ್ನು ಗಾಯಗೊಳಿಸಿದ ಘರ್ಷಣೆಯ ನಂತರ ಪಂಜಾಬ್-ಹರಿಯಾಣ ಗಡಿಯಲ್ಲಿ ದಿನಗಳನ್ನು ಕಳೆದ ನಂತರ ಪ್ರತಿಭಟನಾ ನಿರತ ರೈತರು ಇಂದಿನಿಂದ ‘ದಿಲ್ಲಿ ಚಲೋ’ ಮೆರವಣಿಗೆ ಪುನರಾರಂಭಿಸಿದ್ದಾರೆ. ದೇಶಾದ್ಯಂತ ಪ್ರತಿಭಟನಾಕಾರರು ಬಸ್ಸುಗಳು ಮತ್ತು ರೈಲುಗಳಲ್ಲಿ ದೆಹಲಿಗೆ ಆಗಮಿಸಲಿದ್ದಾರೆ.
ರೈತ ಆಂದೋಲನವನ್ನು ಮುನ್ನಡೆಸುತ್ತಿರುವ ಕಿಸಾನ್ ಮಜ್ದೂರ್ ಮೋರ್ಚಾ ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಎರಡು ಛತ್ರಿ ಸಂಸ್ಥೆಗಳು ದೇಶಾದ್ಯಂತದ ರೈತರಿಗೆ ದೆಹಲಿ ತಲುಪಲು ಕರೆ ನೀಡಿದ್ದು ದೇಶದ ವಿವಿಧ ಭಾಗಗಳಿಂದ ರೈತರು ದೆಹಲಿಯತ್ತ ಆಗಮಿಸುತ್ತಿದ್ದಾರೆ.
“ದೆಹಲಿಗೆ ಜಾಥಾದಿಂದ ಹಿಂದೆ ಸರಿದಿಲ್ಲ. ಗಡಿಯಲ್ಲಿ ನಮ್ಮ ಬಲವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ದೆಹಲಿಯ ಎಲ್ಲಾ ಕಡೆಯಿಂದ ರೈತರು ದೆಹಲಿಗೆ ಆಗಮಿಸುತ್ತಿದ್ದು ಬರುತ್ತಾರೆ. ರೈಲು, ಬಸ್ಸು, ವಿಮಾನದಲ್ಲಿ ದೇಶ ಸಂಚರಿಸಿ ಅವರಿಗೆ ಅಲ್ಲಿ ಕುಳಿತುಕೊಳ್ಳಲು ಸರ್ಕಾರ ಅವಕಾಶ ನೀಡುತ್ತದೋ ಇಲ್ಲವೋ ಎಂಬುದನ್ನು ನೋಡುತ್ತೇವೆ. ಮಾರ್ಚ್ ೧೦ ರಂದು ದೇಶಾದ್ಯಂತ ಮಧ್ಯಾಹ್ನ ೧೨ ರಿಂದ ಸಂಜೆ ೪ ರವರೆಗೆ ‘ರೈಲ್ ರೋಕೋ’ ಪ್ರತಿಭಟನೆ ನಡೆಸುತ್ತೇವೆ ಎಂದು ರೈತ ಮುಖಂಡ ಜಗಜಿತ್ ಸಿಂಗ್ ಹೇಳಿದ್ದಾರೆ.

ಭದ್ರತಾ ವ್ಯವಸ್ಥೆ
ವಿವಿಧ ರೈತ ಸಂಘಟನೆಗಳು ನೀಡಿದ ‘ದೆಹಲಿ ಚಲೋ’ ಮಾರ್ಚ್ ಕರೆ ಗಮನದಲ್ಲಿಟ್ಟುಕೊಂಡು, ದೆಹಲಿ ಪೊಲೀಸರು ಟಿಕ್ರಿ, ಸಿಂಘು ಮತ್ತು ಘಾಜಿಪುರ ಗಡಿಗಳು, ಹಾಗೆಯೇ ರೈಲ್ವೆ ಮತ್ತು ಮೆಟ್ರೋ ನಿಲ್ದಾಣಗಳು ಮತ್ತು ಬಸ್ ನಿಲ್ದಾಣಗಳಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿದ್ದಾರೆ.
ಈ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಪೊಲೀಸರು ತಮ್ಮ ಸಿಬ್ಬಂದಿಗೆ ಸೂಚಿಸಿದ್ದಾರೆ. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರಯಾಣಿಕರಿಗೆ ತಾತ್ಕಾಲಿಕವಾಗಿ ತಡೆಗಳನ್ನು ತೆಗೆದುಹಾಕಿದ್ದೇವೆ. ಪೊಲೀಸ್ ಮತ್ತು ಅರೆಸೇನಾಪಡೆಯ ಸಿಬ್ಬಂದಿಯ ನಿಯೋಜನೆ ನಿಯೋಜನೆ ಮಾಡಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.