ರೈತರ ಜೋತೆ ಪಾಕ್ಷಿಕ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು, ಜು.21 ತಾಲೂಕಿನ ದೇವ ಸಮುದ್ರ ಹೋಬಳಿಯಲ್ಲಿ ಇಲ್ಲಿತನಕ ಉತ್ತಮವಾದ ಮಳೆಯಾಗಿದ್ದು, ಆ ಭಾಗದ ರೈತರಲ್ಲಿ ಮಂದಹಾಸ ಮೂಡಿದ್ದು, ಬಿತ್ತನೆ ಕಾರ್ಯ ಭರದಿಂದ ಸಾಗುತ್ತದೆ. ಆದರೆ ಕಸಬಾ ಹೋಬಳಿಯಲ್ಲಿ ಮಳೆ ಕಡಿಮೆಯಾಗಿದ್ದು, ಕೊಂಡ್ಲಹಳ್ಳಿ, ಬಿಜಿಕೆರೆ, ಕೋನ ಸಾಗರ ತುಮಕೂರ್ಲಹಳ್ಳಿ ಗ್ರಾಮ ಪಂಚಾಯಿತಿ ಹಳ್ಳಿಗಳಲ್ಲಿಗೆ ಮಳೆ ಕಡಿಮೆಯಾಗಿದೆ, ಈ ಭಾಗಗಳಲ್ಲಿ ಬಿತ್ತನೆ ಕಾರ್ಯ ಕುಂಟುತ್ತಾ ಸಾಗುತ್ತಿದೆ ಎಂದು ಕೃಷಿ ಸಹಾಯಕ ನಿರ್ದೇಶಕರಾದ ಉಮೇಶ್ ತಿಳಿಸಿದರು.
ಅವರು ಪಟ್ಟಣದ ಕೃಷಿ ಇಲಾಖೆಯಲ್ಲಿ ಅಯೋಜಿಸಿದ್ದ ರೈತರೊಂದಿಗೆ ಪಾಕ್ಷಿಕ ಸಭೆಯಲ್ಲಿ ಮಾತನಾಡುತ್ತಾ, ಈ ಭಾಗದಲ್ಲಿ ಬರಗಾಲ ಅತಿ ಯಾಗಿದ್ದು ಅದರ ಜೊತೆ ಅತಿವೃಷ್ಟಿ ಯು ಸಂಭವಿಸುತ್ತಿದೆ.
ನವೆಂಬರ್ ತಿಂಗಳಲ್ಲಿ ಮಳೆ ಅತಿಯಾಗಿ ಬೀಳುವ ದರಿಂದ ಉತ್ತಮವಾದ ಬೆಳೆ ಬರದೇ ದನಕರುಗಳಿಗೆ ಮೇವು ಸಹ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ 32 ಸಾವಿರ ಹೆಕ್ಟೇರ್ ಖುಷ್ಕಿ ಭೂಮಿ ಇದ್ದು, ಬಹುತೇಕ ವಾಣಿಜ್ಯ ಬೆಳೆಯಾದ ಶೇಂಗಾ (ಕಡಲೆ ಕಾಯಿ) ಬೆಳೆಯನ್ನು ಇಲ್ಲಿನ ರೈತರು ಅವಲಂಬಿದರಾಗಿರುತ್ತಾರೆ.
ಕೃಷಿ ಸಂಶೋಧನಾ ಕೇಂದ್ರ ದಿಂದ ನೂತನ ಶೇಂಗಾ ತಳಿಯಾದ ಜಿ2 ಮತ್ತು 5-2 ಶೇಂಗಾ ತಳಿ ಯ 100 ಕಿಟ್ಸ  ಮತ್ತು 50 ಕಿಟ್ಸ ತೊಗರಿ  ಉಚಿತವಾಗಿ ಬಂದಿವೆ. ಅವುಗಳನ್ನು ವಿತರಣೆಯನ್ನು ಲಾಟರಿ ಮೂಲಕ ಮಾಡಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕರಾದ ಪರಮೇಶ್ವರಪ್ಪ, ಟೆಕ್ನಿಕಲ್ ಗಿರೀಶ್,  ನಿರಂಜನ್, ರೈತ ಮುಖಂಡರಾದ ದಾನಪ್ಪ, ಚಂದ್ರಣ್ಣ ಇನ್ನು ಮುಂತಾವರಿದರು.
ಕಾರ್ಯ ಕ್ರಮದಲ್ಲಿ ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು.