ರೈತರ ಜೊತೆ ನಾಳೆ ಸಭೆ ತೋಮರ್ ಸ್ವಾಗತ

ನವದೆಹಲಿ, ಡಿ. ೨೮- ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಲು ಕೈಗೊಂಡಿರುವ ನಿರ್ಧಾರವನ್ನು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಸ್ವಾಗತಿಸಿದ್ದಾರೆ.
ಒಂದೇ ತಿಂಗಳಿಂದ ದೆಹಲಿ ಹೊರವಲಯದಲ್ಲಿ ರೈತರು ನಡೆಸುತ್ತಿರುವ ಹೋರಟಕ್ಕೆ ಪರಿಹಾರ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆಂಗ್ಲ ದೈನಿಕವೊಂದಕ್ಕೆ ಸಂದರ್ಶನ ನೀಡಿರುವ ಅವರು, ನೂತನ ಕೃಷಿ ಕಾಯ್ದೆಗಳ ವಸ್ತು ಸ್ಥಿತಿಯ ಬಗ್ಗೆ ರೈತರಿಗೆ ಅರಿವಿದ್ದು. ನಾಳೆ ನಡೆಯಲಿರುವ ಮಾತುಕತೆ ವೇಳೆ ಹಗ್ಗಜಗ್ಗಾಟಕ್ಕೆ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ.
ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಲು ತಾವು ಪತ್ರ ಬರೆದಿದ್ದು, ಇದು ಉತ್ತಮ ಕ್ರಮವಾಗಿದ್ದು, ನಾಳೆ ಅವರೊಂದಿಗೆ ಸಮಾಲೋಚನೆ ನಡೆಸಿ ನೂತನ ಕೃಷಿ ಕಾಯ್ದೆಗಳ ಬಗ್ಗೆ ರೈತರಿಗಿರುವ ಸಂಶಯಗಳ ಬಗ್ಗೆ ಮನವರಿಕೆ ಮಾಡಿಕೊಟ್ಟು ಸಂಧಾನದ ಮೂಲಕ ಪರಿಹಾರ ಕೊಂಡು ಕೊಳ್ಳಲಾಗುವುದು ಎಂದರು.
ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದ ೪೦ ರೈತ ಸಂಘಟನೆಗಳು ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲು ತೀರ್ಮಾನಿಸಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಮೂರು ಕೃಷಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸಿದೆ.
ಕೊರೆವ ಚಳಿಯನ್ನು ಲೆಕ್ಕಿಸದೆ ರೈತರು ದೆಹಲಿ ಗಡಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ, ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವಿಚಾರ ಅಂತರರಾಷ್ಟ್ರೀಯ iಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ನಾಳೆ ನಡೆಯಲಿರುವ ರೈತರೊಂದಿಗೆ ಮಹತ್ವದ ಮಾತುಕತೆ ಕುತೂಹಲ ಕೆರಳಿಸಿದ್ದು, ಸಮಸ್ಯಗೆ ಪರಿಹಾರ ಸಿಗುವ ಆಶಭಾವ ಮೂಡಿದೆ.