ರೈತರ ಜಮೀನು ಬೇಗ ಸರ್ವೇ ಮಾಡಲು ಆಗ್ರಹ

????????????????????????????????????

ಭಾಲ್ಕಿ:ಮಾ.24: ತಾಲೂಕಿನ ರೈತರು ತಮ್ಮ ಜಮೀನಿನ ಹದ್ದುಬಸ್ತ (ಚೆಕ್‍ಬಂದಿ)ನಿಗದಿ ಮಾಡಲು ಶುಲ್ಕ ತುಂಬಿದ ರೈತರ ಜಮೀನು ಬೇಗನೆ ಮೋಜಣಿ ಮಾಡಲು ಆಗ್ರಹಿಸಿ ಜಿಲ್ಲಾ ರೈತ ಸಂಘ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಡಿಎಲ್‍ಆರ್‍ಗೆ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದ್ದಾರೆ.

ವ್ಯಾಜ್ಯಕೊಳಗಾದ ಭೂಮಿಯನ್ನು ಸರ್ವೇ ಮಾಡಿ ಪರಿಹಾರ ಕಂಡುಕೊಳ್ಳುವ ತವಕದಲ್ಲಿರುವ ರೈತರು ನಿಗದಿತ ಶುಲ್ಕ ಪಾವತಿಸಿ ಅರ್ಜೀ ಸಲ್ಲಿಸಿದರೂ ಸರ್ವೇ ಕಛೇರಿಯವರು ಭೂ ಮೋಜಣಿ ಮಾಡದೆ ವಿನಾ ಕಾರಣ ವಿಳಂಬ ಮಾಡುತ್ತಿದ್ದಾರೆ.ಇದರಿಂದ ರೈತರ ಮಧ್ಯೆ ವಿವಾದವುಂಟಾಗಿ ಕೊಲೆ,ಸುಲಿಗೆಗಳು ನಡೆಯುತ್ತಿವೆ.ವಿನಾಕಾರಣ ರೈತರು ಸರ್ವೇ ಕಛೇರಿಗಳಿಗೆ ಅಲೆದಾಡಿದರೂ ಕಛೇರಿಯವರು ಕ್ಯಾರೆ ಎನ್ನುತ್ತಿಲ್ಲ.ಮಳೆಗಾಲದಲ್ಲಿ ಬೆಳೆಯಿದೆ ಎಂದು ಸಬೂಬ ಹೇಳಿ ಸರ್ವೇ ಕಾರ್ಯ ಮುಂದೂಡುತ್ತಿದ್ದಾರೆ.ಅಲ್ಲದೆ ಸಿಬ್ಬಂದಿ ಕೊರತೆ ಇದೆ ಎಂದು ರೈತರ ಮನವಿಗೆ ಸ್ಪಂದಿಸುತ್ತಿಲ್ಲ.ಇದರಿಂದ ರೈತರಿಗೆ ತೊಂದರೆಯಾಗುತ್ತಲಿದೆ.

ಕಾರಣ ಈಗಲಾದರೂ ಸರ್ವೇ ಕಛೇರಿಯವರು ಎಚ್ಚೆತ್ತುಕೊಂಡು ಮೇ ತಿಂಗಳ ಒಳಗಾಗಿ ಎಲ್ಲ ರೈತರ ಜಮೀನು ಅಳತೆ ಮಾಡಬೇಕು.ಇಲ್ಲದಿದ್ದರೆ ಕಛೇರಿಗೆ ಬಿಗ ಜಡಿದು ಧರಣಿ ಸತ್ಯಾಗ್ರಹ ನಡೆಸಲಾಗುತ್ತದೆ ಎಂದು ಜಿಲ್ಲಾ ರೈತ ಸಂಘ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಮತ್ತು ರೈತ ಮುಖಂಡರಾದ ನಾಗಶೆಟೆಪ್ಪ ಲಂಜವಾಡೆ,ಶರಣಪ್ಪ ಭಾಲ್ಕೆ ಎಚ್ಚರಿಸಿದ್ದಾರೆ.