ವಿಜಯಪುರ :ಜೂ.24: ರೈತರ ಜಮೀನುಗಳ ವಹಿವಾಟು ದಾರಿ ಸಮಸ್ಯೆ ಇತ್ಯರ್ಥಪಡಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ ಮಾಡುವುದರ ಮೂಲಕ ಬೃಹತ್ ಕೈಗಾರಿಕೆ ಮತ್ತು ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಬಿ.ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂಧ ಕುಲಕರ್ಣಿ ಮಾತನಾಡಿ, ದಾರಿ ಸಮಸ್ಯೆಯ ಕುರಿತು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದ್ದು ಶೀಘ್ರದಲ್ಲಿ ಅಧಿಸೂಚನೆ ಹೊರಡಿಸಲು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಬೇಕು. ಜಮೀನುಗಳಿಗೆ ಹಾದು ಹೋಗಲು ಅಧಿಕಾರವನ್ನು ಈಗಾಗಲೆ ತಹಶೀಲ್ದಾರರಿಗೆ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಅದೇಶ ಹೊರಡಿಸಿ 3 ತಿಂಗಳು ಗತಿಸಿದರು . ಇನ್ನು ಅಧಿಸೂಚನೆ ಹೊರಡಿಸಿಲ್ಲಾ. ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ಹೊಡೆದಾಟಗಳು ತಾರಕಕ್ಕೆ ಏರುತ್ತಿವೆ. ಆದ್ದರಿಂದ ಶೀಘ್ರದಲ್ಲಿ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ಜಮೀನುಗಳಿಗೆ ಹೋಗಲು ದಾರಿ ಇಲ್ಲದ ರೈತರಿಗೆ ದಾರಿ ಮಾಡಿ ಕೊಡಲು ಸಂಪೂರ್ಣ ಅಧಿಕಾರ ತಹಶೀಲ್ದಾರರಿಗೆ ನೀಡಬೇಕು. ಕೇವಲ ಅನುಭೋಗದ ಹಕ್ಕನ್ನು ಹಕ್ಕುಳ್ಳವರಿಗೆ ಮಾತ್ರ ಅನ್ವಯಿಸದೇ (ಎಸ್ಟಿಮೆಂಟ್ರಿ ರೈಟ್ಸ್ ) ಹೊರತು ಪಡಿಸಿ ಇರದವರಿಗೂ ಕೂಡಾ ದಾರಿ ಮಾಡಿ ಕೊಡಬೇಕು. ರಾಜ್ಯ ಸರ್ಕಾರ ವಿಳಂಬ ಮಾಡದೇ ತಕ್ಷಣ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು. ದಿನನಿತ್ಯ ಹಳ್ಳಿಗಳಲ್ಲಿ ದಾರಿಗಾಗಿ ಹೊಡೆದಾಟಗಳು ನಡೆಯುತ್ತಿವೆ. ಈ ವಿಷಯವಾಗಿ ರಾಜ್ಯದ ಪ್ರತಿಯೊಂದು ಭಾಗದಲ್ಲಿ ಕೊಲೆಗಳು ನಡೆಯುತ್ತಿವೆ. ದಾರಿ ಕೊಡದ ಕಾರಣ ರೈತರು ಜಮೀನು ಬಿತ್ತನೆ ಮಾಡಲಾಗದೇ ಜಮೀನುಗಳು ಪಾಳು ಬಿದ್ದು ರೈತ ಕುಟುಂಬಗಳು ಸಂಕಷ್ಟದಲ್ಲಿವೆ. ಆದ್ದರಿಂದ ತಕ್ಷಣ ಅಧಿಸೂಚನೆ ಪ್ರಕಟಿಸಿ ಸುಗ್ರೀವಾಜ್ಞೆ ಹೊರಡಿಸಬೇಕು ಮತ್ತು ರೈತರು ದಾರಿಗಾಗಿ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ 30 ದಿನಗಳೊಳಗೆ ದಾರಿ ಮಾಡಿ ಕೊಡಬೇಕು. ಡಿಸೆಂಬರ್ ತಿಂಗಳಿನಲ್ಲಿ ನಡೆದ ಅಧಿವೇಶನದಲ್ಲಿ ದಾರಿಗಾಗಿ ಅಧಿಸೂಚನೆ ಹೊರಡಿಸುತ್ತಾರೆಂಬ ಆಶಾಭಾವನೆ ರೈತರಿಗೆ ಇತ್ತು ಆದರೆ ಅಧಿವೇಶನದಲ್ಲಿ ಚರ್ಚೆಗೆ ಬರಲಿಲ್ಲ . ರೈತರಲ್ಲಿ ಹೀಗಾಗಿ ಮತ್ತೆ ನಿರಾಶೆ ಮೂಡಿದೆ. ಇನ್ನು ಮುಂದಾದರೂ ಫೆಬ್ರುವರಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಾದರೂ ಗಂಭೀರವಾಗಿ ಈ ಸಮಸ್ಯೆಯ ಕುರಿತು ಗಂಭೀರವಾಗಿ ಪರಿಗಣಿಸಿ ದಾರಿ ಸಮಸ್ಯೆ ಇತ್ಯರ್ಥ ಪಡಿಸಿ ಅಧಿಸೂಚನೆ ಹೊರಡಿಸಬೇಕು ಹಾಗೂ ಪ್ರತಿಯೊಂದು ಜಮೀನುಗಳ ದಾರಿಯನ್ನು ನಕ್ಷೆಯಲ್ಲಿ ಗುರುತಿಸಬೇಕು. ಮೋಜಣಿ ಮಾಡಿ ಹದ್ದಿ ಗುರುತಿಸಬೇಕು. ತಹಶೀಲ್ದಾರರು ಬಂದಾಗ ತಹಶೀಲ್ದಾರರಿಗೆ ಅಡ್ಡಿಪಡಿಸಿದ ದಾರಿ ಮಾಡಿಕೊಡಲು ತಕರಾರು ಮಾಡಿದರೆ ಅಂತಹ ರೈತರಿಗೆ ದಂಡ ಹಾಕುವ ಅಧಿಕಾರವನ್ನು ಕೊಡಬೇಕೆಂದು ಮನವಿ ಮಡಿಕೊಂಡರು.
ಈ ಸಂದರ್ಭದಲ್ಲಿ ಸದಾಶಿವ ಬರಟಗಿ, ದ್ಯಾವಪ್ಪಗೌಡ ಪೊಲೇಶಿ, ಕರೆಪ್ಪ ತೆಲಗಿ, ಈರಪ್ಪ ತೇಲಿ, ಕಲ್ಲಪ್ಪ ಕುಂಬಾರ, ಮಹಾದೇವಪ್ಪ ತೇಲಿ, ಸದಾಶಿವಯ್ಯ ಅರಕೇರಿಮಠ, ಅರುಣಗೌಡ ತೇರದಾಳ, ಸಂಗಮೇಶ ಸಗರ, ಅರುಣಗೌಡ ತೇರದಾಳ, ಗುರಲಿಂಗಪ್ಪ ಪಡಸಲಗಿ, ಮಲ್ಲಪ್ಪ ಪಡಸಲಗಿ, ದವಲಪ್ಪಾ ವಾಲಿಕಾರ, ರಾಜೇಶ ವಾಲಿಕಾರ, ಹಣಮಂತ ಮುರಾಳ ಇನ್ನಿತರರು ಇದ್ದರು.