ರೈತರ ಜಮೀನುಗಳಿಗೆ ವಿದ್ಯುತ್ ಕಲ್ಪಿಸಲು ಒತ್ತಾಯ

ಚಿತ್ತಾಪುರ:ನ.4: ತಾಲೂಕಿನ ಹಣ್ಣಿಕೇರಾ ಗ್ರಾಮದ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಗೆ, ಬಿತ್ತನೆಗೆ ನೀರು ಹಾಯಿಸಲು ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ ಹೀಗಾಗಿ ಕೂಡಲೇ ರೈತರ ಜಮೀನುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕೆಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾ ಅಧ್ಯಕ್ಷ ಸುರೇಶ್ ಗುತ್ತೇದಾರ್ ಒತ್ತಾಯಿಸಿದರು.

ಪಟ್ಟಣದ ವಿದ್ಯುತ್ ಸರಬರಾಜು ಉಪ ವಿಭಾಗ ಚಿತ್ತಾಪುರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಭೀಮಾಶಂಕರ್ ತಳವಾರ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿದ ಅವರು ಹಣ್ಣಿಕೇರಾ ಗ್ರಾಮದ ರೈತರ ಜಮೀನುಗಳಿಗೆ ಸೇಡಂ ಉಪವಿಭಾಗ ದಿಂದ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಗಿದೆ ಇದು ಸರಿಯಾಗಿ ರೈತರಿಗೆ ಉಪಯೋಗವಾಗುತ್ತಿಲ್ಲ ಹೀಗಾಗಿ ವಾಡಿ(ಜಂ) ಪಟ್ಟಣದ ವಿದ್ಯುತ್ ಸಂಪರ್ಕ ನೀಡಿ ರೈತರಿಗೆ ಅನುಕೂಲ ಮಾಡಿಕೊಡಿ ಎಂದು ಹೇಳಿದರು.

ಒಂದು ವೇಳೆ ಈ ಸಮಸ್ಯೆ ಬಗೆಹರಿಯದೆ ಇದ್ದಲ್ಲಿ ಜೆಸ್ಕಾಂ ಕಚೇರಿ ಮುಂದೆ ಗ್ರಾಮದ ರೈತರು ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಉಪಾಧ್ಯಕ್ಷ ಜಗದೇವ ಕುಂಬಾರ, ಚಂದ್ರಶೇಖರ್ ಸಜ್ಜನಶೆಟ್ಟಿ, ಜಗದೀಶ್ ಪಾಟೀಲ್, ಮೌಲಾಸಾಬ್ ಕೊಳ್ಳಿ, ಕೋರಿಸಿದ್ದ ಗಂಜಿ, ಭೀಮರಾಯ ಕ್ವಾಟಗೇರಿ, ಮಹ್ಮದ್ ಗೌಸ್, ಸಾಬಣ್ಣ, ಬಾಗಪ್ಪ ನಾಲವಾರ, ಹೈದರ್ ಸಾಬ್ ಮುಲಾ, ಯಂಕಪ್ಪ, ಸೇರಿದಂತೆ ಇತರರಿದ್ದರು.