ರೈತರ ಖಾತೆಗಳಿಗೆ ಹಣ ಜಮಾವಣೆ

ನವದೆಹಲಿ ಡಿಸೆಂಬರ್ ೨೫. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ… ಪಿಎಂ ಕಿಸಾನ್ ಅಡಿಯಲ್ಲಿ ದೇಶದ ವಿವಿಧ ರಾಜ್ಯಗಳ ೯ ಕೋಟಿಗೂ ಅಧಿಕ ಫಲಾನುಭವಿ ರೈತರಿಗೆ ೧೮೦೦೦ ಕೋಟಿ ರೂಪಾಯಿಗಳ ಆರ್ಥಿಕ ನೆರವಿನ ಕಂತನ್ನು ರೈತರ ಬ್ಯಾಂಕ್ ಖಾತೆಗಳಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ನೇರವಾಗಿ ವರ್ಗಾವಣೆ ಮಾಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ರೈತರ ಖಾತೆಗಳಿಗೆ ಹಣ ಬಿಡುಗಡೆ ಮಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರು ರಾಜ್ಯಗಳ ರೈತರೊಂದಿಗೆ ಸಂವಾದ ನಡೆಸಿದರು.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಒಂದೆಡೆ ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆಯೇ ಪ್ರಧಾನಿಯವರು ರೈತರ ಖಾತೆಗಳಿಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ಮುಂದಿನ ಕಂತಿನ ಹಣವನ್ನು ನೇರವಾಗಿ ಬಿಡುಗಡೆ ಮಾಡುವ ಮೂಲಕ ರೈತರೊಂದಿಗೆ ನಾವಿದ್ದೇವೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ದೇಶಾದ್ಯಂತ ರೈತರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ೬ ರಾಜ್ಯಗಳ ರೈತರೊಂದಿಗೆ ಸಂವಾದ,, ನಡೆಸಿ, ಕೇಂದ್ರದ ಕೃಷಿ ಕಾನೂನು ಗಳನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ದೇಶದ ಸಣ್ಣ ಮತ್ತು ಮಧ್ಯಮ ರೈತರಿಗೆ ವಾರ್ಷಿಕ ?೬೦೦೦ ಗಳನ್ನು ಮೂರು ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನಿಯವರು ಕಳೆದ ಆರು ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಜಾರಿಗೆ ತಂದಿರುವ ವಿವಿಧ ಯೋಜನೆಗಳನ್ನು ರೈತರಿಗೆ ಮನವರಿಕೆ ಮಾಡಿಕೊಟ್ಟರು. ಯೋಜನೆಗಳ ಕುರಿತು ರೈತರ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಅವರು ಆಲಿಸಿದರು.
ಕೇಂದ್ರ ಸಚಿವರು, ಸಂಸದರು, ಶಾಸಕರು, ಬಿಜೆಪಿ ಪದಾಧಿಕಾರಿಗಳು ಪ್ರಧಾನಿ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ದೇಶದ ೯ ಕೋಟಿ ರೈತ ಕುಟುಂಬಗಳಿಗೆ ೧೮ ಸಾವಿರ ಕೋಟಿ ರೂ. ಗಳ ನೆರವನ್ನು ನೀಡಲಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದ ಸುಮಾರು ೭೦ ಲಕ್ಷ ರೈತರು ಈ ಯೋಜನೆಯಿಂದ ವಂಚಿತರಾಗಿರುವುದಕ್ಕೆ ವಿಷಾದ ವ್ಕ್ತಪಿಸಿದ ಪ್ರಧಾನಿಯವರು ಬಂಗಾಳದ ೨೩ ಲಕ್ಷ ರೈತರು ಈ ಯೋಜನೆಯ ಲಾಭ ಪಡೆಯಲು ಏನ್ ಲೈನ್ ನಲ್ಲಿ ಹೆಸರು ನೋಂದಾಯಿಸಿದ್ದರೂ, ಮಮತಾ ಇದಕ್ಕೆ ಅವಕಾಶ ನೀಡಿಲ್ಲ ಎಂದು ದೂರಿದರು.
ಮಮತಾರವರ ಧೋರಣೆ ಪಶ್ಚಿಮ ಬಂಗಾಳವನ್ನು ನಾಶಮಾಡುವಂತದ್ದಾಗಿದೆ. ರೈತರು ಈ ಲಾಭ ಪಡೆಯಲು ವಂಚಿತರಗಿರುವುದಕ್ಕೆ ನನಗೆ ನಿಜಕ್ಕೂ ನೋವು ತಂದಿದೆ ಎಂದವರು ಹೇಳಿದರು.
ಕೇರಳದಲ್ಲಿ ಎಪಿಎಂಸಿ ಮಂಡಿಗಳೇ ಇಲ್ಲ. ಈ ಬಗ್ಗೆ ಪ್ರತಿಭಟನೆಯೇ ಇಲ್ಲ, ಆದರೆ ಪಂಜಾಬ್ ರೈತರ ಹೋರಾಟಕ್ಕೆ ಕೈ ಜೋಡಿಸಲು ದೆಹಲಿಗೆ ಬಂದಿದ್ದಾರೆ ಎಂದು ದೂರಿದರು.
ದೇಶದ ರೈತರಿಗೆ ನೆರವಾಗಲು ಮಣ್ಣಿನ ಸುರಕ್ಷತಾ ಕಾರ್ಡ್ ಸೇರಿದಂತೆ, ಉಲವಾರು ಕ್ರಮಗಳನ್ನು ಕೈಗೊಂಡಿದ್ದೇವೆ. ಕೇಂದ್ರ ಕೈಗೊಂಡ ಕ್ರಮದಿಂದ ರೈತರು ಶುದ್ಧ ನೀರು ಕುಡಿಯುವಂತಾಗಿದೆ. ಶೌಚಾಲಯ ವ್ಯವಸ್ಥೆ ಹೊಂದುವಂತಾಗಿದೆ. ಉಚಿತ ಗ್ಯಾಸ್, ವಿದ್ಯುತ್ ಪಡೆಯುವಂತಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಆರೋಗ್ಯ ಲಾಭ ಅನುಭವಿಸುವಂತಾಗಿದೆ.
ರೈತರು ತಾನು ಬೆಳೆದ ಬೆಳೆಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡಲು ನಾವು ಅವಕಾಶ ಕಲ್ಪಿಸಿದ್ದೇವೆ. ಬಿಸ್ಕತ್ತು, ಜಾಮ್, ಚಿಪ್ಸ್ ಗ್ರಾಹಕರ ಉತ್ಪನ್ನಗಳಾದ ರೈತರು ತಮ್ಮತಮ್ಮ ಉತ್ಪನ್ನಗಳಂತೆ ಮಾರಾಟ ಮಾಡಲು ಅವಕಾಶ ಕಲ್ಪಿಸಿವೆ. ರೈತರು ತಾವೇ ತಮ್ಮ ಬೆಳೆಯನ್ನು ರಫ್ತು ಮಾಡಬಹುದಾಗಿದೆ.
ಹೀಗೆ ನಾನಾ ರೀತಿಯ ಅವಕಾಶಗಳನ್ನು ಕಲ್ಪಿಸಲಾಗಿದೆ. ಆದರೂ ರೈತರು ನಡೆಸುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ ಎಂದು ದೂರಿದರು.
ಪ್ರಧಾನಿಯೊಂದಿಗೆ ಸಂವಾದ ನಡೆಸಿದ ಹರ್ಯಾಣದ ಪತೇಹಬಾದ್ ರೈತ, ಮಹಾರಾಷ್ಟ್ರದ ಲಾತೋರ್ ರೈತ, ಮಧ್ಯಪ್ರದೇಶದ ದಾರ್ ಪ್ರದೇಶದ ರೈತ, ತಮ್ಮ ಅನುಭವವನ್ನು ಹಂಚಿಕೊಂಡು ಕೇಂದ್ರ ನೀಡಿರುವ ನೆರವನ್ನು ಶ್ಲಾಘಿಸಿದರು.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.