ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ರೈತರ ಪ್ರತಿಭಟನೆ

ರಾಯಚೂರು.ಮಾ.೨೩-ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡಿ ತೊಂದರೆ ಮಾಡುತ್ತಿರುವ ಜೆಸ್ಕಾಂ ಇಲಾಖೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ವತಿಯಿಂದ ಪ್ರತಿಭಟನೆ ನಡಿಸಿದರು.
ಅವರಿಂದು ಪ್ರತಿಭಟನೆ ನಡೆಸುತ್ತಾ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮನವಿ ಸಲ್ಲಿಸಿದ ಅವರು ರಾಯಚೂರು ಗ್ರಾಮೀಣ ಭಾಗದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಇಷ್ಟು ದಿವಸ ೧೨ ತಾಸುಗಳು ವಿದ್ಯುತ್ ಸರಬರಾಜು ಆಗುತ್ತಿತು.
ಇದನ್ನೇ ನಂಬಿಕೊಂಡು ರೈತರು ಬೇಸಿಗೆ ಬೆಳೆಯನ್ನು ವಿಶೇಷವಾಗಿ ಭತ್ತವನ್ನು ನಾಟಿ ಮಾಡಿದ್ದೇವೆ, ಜೆಸ್ಕಾಂ ಇಲಾಖೆಯವರು ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಕಡಿತ ಮಾಡಿ ರೈತರ ಜೀವನದ ಜೊತೆ ಕಣ್ಣಮುಚ್ಚಾಲೆ ಆಟವಾಡುತ್ತಿದ್ದಾರೆ.
ಪ್ರತಿ ದಿವಸ ೧೨ ತಾಸು ವಿದ್ಯುತ್ ಸರಬರಾಜು ಮಾಡುವ ಬದಲಾಗಿ ೫-೬ ತಾಸು ವಿದ್ಯುತ್‌ನ್ನು ನೀಡಲಾಗುತ್ತಿದೆ . ಇದರಿಂದಾಗಿ ಬೆಳೆಗಳಿಗೆ ನೀರು ಹರಿಸುವುದು ತೊಂದರೆಯಾಗುತ್ತಿದೆ. ಈಗಾಗಲೇ ಮಳೆಗಾಲದಲ್ಲಿ ಅತಿವೃಷ್ಟಿಯಾಗಿ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ಆರ್ಥಿಕವಾಗಿ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ವಿದ್ಯುತ್‌ನಲ್ಲಿ ತಾಂತ್ರಿಕವಾಗಿ ದೋಷವಿರುತ್ತದೆ,೬೩ ಕೆ.ವಿ.ಎ ಟ್ರಾನ್ಸ್‌ಫಾರ್ಮರ್ ಕೇವಲ ೫ ರಿಂದ ೬ ಸಂಖ್ಯೆ ೫ ಹೆಚ್.ಪಿ. ಪಂಪ್‌ಸೆಟ್‌ಗಳು ಮಾತ್ರ ನಡೆಸಲು ಸಾಧ್ಯವಾಗುತ್ತದೆ. ಆದುದರಿಂದ ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ಇನ್ನೂ ೨ ತಿಂಗಳ ವರೆಗೆ ರೈತರ ಪಂಪ್‌ಸೆಟ್‌ಗಳಿಗೆ ೧೨ ತಾಸು ವಿದ್ಯುತ್ ಸರಬರಾಜು ಮಾಡಲು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಣಗೌಡ ಕಡಗಂದೊಡ್ಡಿ, ದೇವರಾಜ, ರಮೇಶ್, ಶ್ರೀಧರ, ಮಲ್ಲಿಕಾರ್ಜುನ, ನರಸಿಂಹಲು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.