ಚನ್ನಮ್ಮನ ಕಿತ್ತೂರ,ಜೂ26: ಈಗಾಗಲೇ ಮುಂಗಾರು ಮಳೆ ಕೈ ಕೊಟ್ಟ ಕಾರಣ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ರೈತರ ಕಷ್ಟಕ್ಕೆ ಸ್ಪಂದಿಸಬೇಕೆಂದು ಸ್ವಾಭಿಮಾನ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಬೀರಪ್ಪ ದೇಶನೂರ ಸರ್ಕಾರದ ವಿರುದ್ಧ ಹರಿಹಾಯ್ದರು.
ತಾಲೂಕಿನ ತಿಗಡಿ ಕ್ರಾಸ್ ಹತ್ತಿರದ ಬಾಬು ಚಂದರಿಗಿಯವರ ಫಾರ್ಮಹೌಸ್‍ದಲ್ಲಿ ರೈತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯಮಂತ್ರಿಗಳು ರೈತರ ಬಗ್ಗೆ ಕಾಳಜಿ ವಹಿಸಿ ಇಲ್ಲದಿದ್ದರೆ ಮುಂದೊದು ದಿನ ರೈತರು ರೊಚ್ಚಿಗೆದ್ದು ಬೀದಿಗಿಳಿಯುವ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
2023-24 ರಲ್ಲಿ ಬರಗಾಲದಿಂದ ರೈತರು ಬೆಳೆದಂತಹ ಕಬ್ಬು ನಾಶವಾಗಿದೆ ಆ ಬೆಳೆಗೆ ಬೆಳೆ ಪರಿಹಾರ ನೀಡಬೇಕು. ಅವರು ಬೆಳೆದ ಬೆಳೆಗೆ ಬೆಂಬಲ ಬೆಲೆ ನೀಡಬೇಕು. 24 ಗಂಟೆ ವಿದ್ಯುತ ಪೂರೈಕೆಯಾಗಬೇಕು. ಬ್ಯಾಂಕುಗಳಿಂದ ರೈತರು ಪಡೆದ ಸಾಲ ತುಂಬಿಸಿಕೊಳ್ಳಲು ಬ್ಯಾಂಕ ವ್ಯವಸ್ಥಾಪಕರು ಕಿರುಕುಳ ನೀಡುತ್ತಿದ್ದಾರೆ. ಅದು ತಪ್ಪಬೇಕು. ರೈತರ ರಾಷ್ಟ್ರಿಕೃತ ಬ್ಯಾಂಕಿನ ಸಂಪೂರ್ಣ ಸಾಲಮನ್ನಾ ಆಗಬೇಕು. ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯನ್ನು ನೇರವಾಗಿ ರೈತರ ಕೃಷಿ ಕೆಲಸಕ್ಕೆ ಅವಕಾಶ ಕಲ್ಪಸಿಕೊಡಬೇಕೆಂದು ಹೇಳಿದರು.
ರಾಜ್ಯಾಧ್ಯಕ್ಷ ಶಿವನಸಿಂಗ ಮೊಕಾಶಿ ಮಾತನಾಡಿ ರೈತನು ಬೆಳೆ ಬೆಳೆದರೆ ಮಾತ್ರ ಎಲ್ಲರಿಗೂ ಅನ್ನ. ಅದಕ್ಕಾಗಿ ಸರ್ಕಾರ ಎಚ್ಚೆತ್ತುಕೊಂಡು ರೈತರ ಕೂಗಿಗೆ ಕೈಜೋಡಿಸಿ ಅವರ ಏಳಿಗೆ ಬಯಸಬೇಕೆಂದರು. ನಂತರ ಎಲ್ಲರೂ ಜೊತೆಗೂಡಿ ಘೋಷಣೆ ಕೂಗಿದರು.
ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜುಟ್ಟನವರ, ರಾಜ್ಯ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಕೊಡೋಳ್ಳಿ, ರಾಜ್ಯ ಸಂಘಟನಾ ಕಾರ್ಯದÀರ್ಶಿ ಚಿದಾನಂದ ಹಿರೇಹಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಯ್ಯಾ ಪೂಜಾರ, ಮುಖಂಡರುಗಳಾದ ವಿಶ್ವನಾಥ ಹಿಟ್ಟಿನ, ಯಲ್ಲಪ್ಪ ಸವಳಗಟ್ಟಿ. ಅಪ್ಪಣ್ಣಾ ಹತ್ತಿ, ದೇಮಣ್ಣಾ ಹುದಲಿ, ಬಾಬು ಚಂದರಗಿ, ಎಲ್ಲಪ್ಪ ಕರವಿನಕೊಪ್ಪ, ರುದ್ರಪ್ಪ ಹುದಲಿ, ಬಾಹುಬಲಿ ಅಕ್ಕಿ, ಭೀಮಪ್ಪ ಸವಟಗಿ, ಬಾಬು ಸಂಗೋಳ್ಳಿ, ನಿಂಗಯ್ಯಾ ಉಗರಖೋಡ, ಈಶ್ವರ ಬೀಡಿ, ಗಿರೀಶ ಸೇರಿದಂತೆ ಇನ್ನಿತರಿದ್ದರು.