
ಬಳ್ಳಾರಿ, ಜ.03: ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರೆಡೂ ದೇಶದ ರೈತರ, ಕರೋನಾ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲವಾಗಿವೆ ಎಂದು ಕೆಪಿಸಿಸಿ ವಕ್ತಾರ ವಿ.ಎಸ್.ಉಗ್ರಪ್ಪ ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಡಿನಡೆಸಿದ ಅವರು. ಪ್ರಧಾನಿ ನರೇಂದ್ರ ಮೋದಿ ಅವರು ಗಂಟೆ ಬಾರಿಸಿ, ಚಪ್ಪಾಳೆ ತಟ್ಟಿ ಕರೋನಾ ಹೋಗುತ್ತೆ ಎಂದುಸೂಕ್ತ ಕ್ರಮ ತೆಗೆದುಕೊಳ್ಳದೆ ಅದು ವ್ಯಾಪಿಸುವಂತೆ ಮಾಡಿದರು. ಅದಕ್ಕಾಗಿ 2020 ರ ವರ್ಷ ಕರಾಳ ವರ್ಷ ಎಂದರು.
ನಿರ್ಭಯ ಫಂಡ್ ನ್ನು ಸಿಸಿ ಟಿವಿ ಖರೀದಿಯಲ್ಲೂ ಅವ್ಯವಾಹರವನ್ನು ಐಪಿಎಸ್ ಅಧಿಕಾರಿಗಳು ಮಾಡ ಹೊರಟಿರುವುದ ರಾಜ್ಯ ಸರ್ಕಾರದ ವಿಫಲತೆಯನ್ನು ತೋರಿಸುತ್ತಿದೆ. ಅಧಿಕಾರಿಗಳು ಆಡಳಿತ ನಡೆಸುವವರನ್ನುಲೆಕ್ಕಿಸದೆ ಪತ್ರಿಕಾ ಗೋಷ್ಟಿ ಮಾಡುತ್ತಿದ್ದಾರೆ. ಈ ಟೆಂಡರ್ ವಿಷಯದಲ್ಲೂ ಮುಖ್ಯ ಮಂತ್ರಿಗಳಿಗೆ ಕಿಕ್ ಬ್ಯಾಕ್ ದೊರೆತಿರುವಂತೆ ಇದೆ ಎಂದು ಆರೋಪಿಸಿದರು.
ಅತ್ಯಾಚಾರ ಪ್ರಕರಣದಲ್ಲಿ ನೊಂದವರಿಗೆ ಪರಿಗಾರ ಕೊಡದ ಸರ್ಕಾರ ಇಂತಹ ಟೆಂಡರ್ ಗಳಲ್ಲಿ ಆಸಕ್ತಿ ತೋರಿಸುತ್ತಿದ್ದಾರೆಂದರು
ಸುದ್ದಿಗೋಷ್ಟಿಯಲ್ಲಿ ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಎಸ್.ಮಹಮ್ಮದ್ ರಫೀಕ್, ಬ್ಲಾಕ್ ಅಧ್ಯಕ್ಷ ಅಸುಂಡಿ ನಾಗರಾಜಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ಹನುಮ ಕಿಶೋರ್, ಶಮೀಮ್ ಮೈನುದ್ದೀನ್, ಅಲುವೇಲ ಸುರೇಶ್ ಮೊದಲಾದವರು ಇದ್ದರು.