ರೈತರ ಕಣ್ಣಲ್ಲಿ ನೀರು ಬಂದರೆ ದೇಶ ಸರ್ವನಾಶ:ಭೀಮರಾವ ಪಾಟೀಲ್

ಹುಮನಾಬಾದ್:ಜೂ.8: ರೈತರಿಗೆ ಗುಣಮಟ್ಟದ ಬೀಜ ಗೂಬ್ಬರವನ್ನು ವಿತರಿಸಬೇಕೆಂದು ಬೀದರ್ ಜಿಲ್ಲಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಭೀಮರಾವ ಪಾಟೀಲ ಹೇಳಿದ್ದಾರೆ.

ತಾಲ್ಲೂಕಿನ ವಿವಿಧ ಪಿಕೆಪಿಎಸ್‍ಗಳಿಗೆ ಭೇಟಿ ನೀಡಿ. ರೈತರಿಗೆ ತೊಂದರೆ ಆಗದ ರೀತಿ ಸಂಸ್ಥೆಯವರು ನೊಡಿಕೊಳ್ಳಬೇಕು. ಯಾವುದೆ ಕಾರಣಕ್ಕು ಮುಗ್ದ ರೈತರನ್ನು ಸತಾಯಿಸಬಾರದು ಎಂದು ಸಂಸ್ಥೆಯವರಿಗೆ ಖಡಕ್ ಆದೇಶ ನೀಡಿದ್ದಾರೆ. ರೈತರು ಈ ದೇಶದ ಬೆನ್ನಲಬಾಗಿದ್ದಾರೆ. ರೈತರ ಕಣ್ಣಲ್ಲಿ ನೀರು ಬಂದರೆ ದೇಶ ಸರ್ವನಾಶವಾಗುತ್ತದೆ. ಅದನ್ನು ಅರ್ಥಮಾಡಿಕೊಂಡು ಕೇಲಸಮಾಡಿ ಎಂದು ಭೀಮರಾವ ಪಾಟೀಲ ತಿಳಿಸಿದ್ದಾರೆ.

ಸಕಾಲದಲ್ಲಿ ಉತ್ತಮ ಮಳೆಯಾಗಲಿ. ಭಗವಂತ ರೈತರ ಮುಖದಲ್ಲಿ ಸಂತಸವನ್ನುಂಟುಮಾಡಲಿ ಎಂದು ದೇವರಲ್ಲಿ ಭೀಮರಾವ ಪಾಟೀಲ ಪ್ರಾರ್ಥಿಸಿದ್ದಾರೆ, ಈ ಸಂದರ್ಬದಲ್ಲಿ ತಾಲ್ಲೂಕಿನ ಪಿಕೆಪಿಎಸ್ ಕಾರ್ಯದರ್ಶಿಗಳು, ಅಧ್ಯಕ್ಷರು, ಉಪಾಧ್ಯಕ್ಷರು, ಸರ್ವ ನಿರ್ದೇಶಕರು ಉಪಸ್ಥಿತರಿದ್ದರು.