ರೈತರ, ಕಂದಾಯ ಇಲಾಖೆ ಅಧಿಕಾರಿಗಳ ಜೀವ ನುಂಗಲು ಕಾದು ಕುಳಿತ ಹಳೆ ಕಟ್ಟಡ

ಸುರೇಶ್ ಬಿಜನಳ್ಳಿ
ಸೇಡಂ, ಮೇ,21: ಪ್ರತಿ ವರ್ಷ ಮಳೆಗಾಲ ಆರಂಭವಾದರೆ ಸಾಕು ಜೀವ ಕೈಯಲ್ಲಿ ಹಿಡಿದುಕೊಂಡು ಕೆಲಸ ಮಾಡುವ ಪರಿಸ್ಥಿತಿ ಕಂದಾಯ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯು ರೈತರ, ಕಂದಾಯ ಇಲಾಖೆ ಅಧಿಕಾರಿಗಳ ಜೀವ ನೂಂಗಲು ಹಳೆ ಕಟ್ಟಡ ಕಾದು ಕುಳಿತಿದೆ ಎಂದರೆ ತಪ್ಪಾಗಲಾರದು.
ತಾಲೂಕಿನ ಮಳಖೇಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಗ್ರಾಮ ಲೆಕ್ಕಾಧಿಕಾರಿಗಳ ಕಚೇರಿಯು ಮಳಖೇಡ.ಜೆ,ಮಳಖೇಡ.ಕೆ ಬಿಜನಳ್ಳಿ,ರಾಜೀವ ನಗರ, ತೋಟ್ನಳ್ಳಿ, ಸೇರಿದಂತೆ ಹಲವರು ಗ್ರಾಮಗಳು ವ್ಯಾಪ್ತಿಗೆ ಬರುತ್ತವೆ, ಆದರೆ ಈ ಕಚೇರಿಯು ಹಳೆ ಕಟ್ಟಡವಾಗಿದ್ದು ಮೇಲ್ಚಾವಣಿ ಕುಸಿತದ ಮಧ್ಯದಲ್ಲಿಯೇ ಅಧಿಕಾರಿಗಳು ಅದರ ಕೆಳಗೆ ಕುಳಿತು ರೈತರ ಕೆಲಸ ಮಾಡುತ್ತಿರುವವರ ಜೊತೆಗೆ ಬರುವಂತ ರೈತರಿಗೆ ಕುಳಿತುಕೊಳ್ಳುವ ಆಸನಗಳಿಲ್ಲ ಜೊತೆಗೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಹಾಗೂ ರೈತರನ್ನು ಸಾಮೂಹಿಕವಾಗಿ ಸಾವು ನುಂಗಲು ಕಾದು ಕುಳಿತಿರುವ ಸ್ಥಿತಿಯಲ್ಲಿ ಇದ್ದರೂ ತಾಲೂಕ ಮಟ್ಟದ ಅಧಿಕಾರಿಗಳು ಜಿಲ್ಲಾಮಟ್ಟದ ಅಧಿಕಾರಿಗಳು ಇತ್ತ ಗಮನಹರಿಸಿ ಮಳೆಗಾಲಕ್ಕಾದರೂ ಬಾಡಿಗೆ ರೂಪದಲ್ಲಿ ಕಚೇರಿ ಪಡೆದುಕೊಂಡು ಕಾರ್ಯನಿರ್ವಹಿಸಲು ಮುಂದಾಗ ಬೇಕಿದೆ ಇಲ್ಲವಾದರೆ ಇದರ ಅನಾಹುತಕ್ಕೆ ತಾಲೂಕಾ ಹಾಗೂ ಜಿಲ್ಲಾಡಳಿತವೇ ನೇರ ಹಣೆಯಾಗುತ್ತಾರೆ ಎಂದು ಸುತ್ತಮುತ್ತಲಿನ ಗ್ರಾಮದ ರೈತರು ಬರ ಪರಿಹಾರ ಬಾರದ ರೈತರು ಲೆಕ್ಕಾಧಿಕಾರಿಗಳ ಕಚೇರಿಗೆ ಬಂದ ರೈತರು ಈ ಸಂಜೆವಾಣಿಗೆ ಮನವಿ ಜೊತೆಗೆ ಬೇಸರದ ಆಕ್ರೋಶ ವ್ಯಕ್ತಪಡಿಸಿದರು. ರೈತರ ಅಧಿಕಾರಿಗಳ ಸಂರಕ್ಷಣೆಗೆ ಶಾಸಕರು ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್ ರವರು ತಕ್ಷಣ ಮುಂದಾಗಬೇಕಿದೆ ಎಂಬುದೇ ಪತ್ರಿಕೆ ಆಶಯವಾಗಿದೆ.