ರೈತರ ಒಗ್ಗಟ್ಟು ಮುರಿಯಲು ಕಾಣದ ಕೈ ಗಳ ಕೈವಾಡ

ಮಸ್ಕಿ,ಜ.೧೪- ಈ ಭಾಗದ ರೈತರ ಜೀವನಾಡಿ ೫ಎ ಕಾಲುವೆ ಅನುಷ್ಟಾನಕ್ಕೆ ಒತ್ತಾಯಿಸಿ ರೈತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣ ಹೋರಾಟ ಹತ್ತಿಕ್ಕಲು ಮತ್ತು ರೈತರ ಒಗ್ಗಟ್ಟು ಮುರಿಯಲು ಕಾಣದ ಕೈ ಗಳು ತೆರೆಯ ಮ ರೆಯಲ್ಲಿ ಕೆಲಸ ಮಾಡುತ್ತಿವೆ ಎಂದು ಕರ್ನಾಟಕ ನೀರಾವರಿ ಹೋರಾಟ ಸಮಿತಿ ಗೌರವಾಧ್ಯಕ್ಷ ತಿಮ್ಮನಗೌಡ ಚಿಲ್ಕರಾಗಿ ಆರೋಪಿಸಿದರು. ಇಲ್ಲಿಯ ಭ್ರಮರಾಂಭ ಕಲ್ಯಾಣ ಮಂಟಪ ಬಳಿ ಕರೆದಿದ್ದ ಸುದ್ದಿ ಗೋಷ್ಟಿಯಲ್ಲಿ ಬುಧವಾರ ಮಾತನಾಡಿದರು ೫ಎ ಕಾಲುವೆ ಹೋರಾಟ ತೀವ್ರ ಸ್ವರೂಪ ಪಡೆದು ಕೊಂಡಿದ್ದು ಕಂಡು ಗಲಿ ಬಿಲಿ ಗೊಂಡಿರುವ ರಾಜಕಾರಣಿಗಳು ರೈತರ ಹೋರಾಟದಲ್ಲಿ ರಾಜಕೀಯ ಎಂಟ್ರಿ ಮಾಡಿಸಲು ಹುನ್ನಾರ ನಡೆಸಿದ್ದಾರೆ ಯಾವದೇ ಕಾರಣಕ್ಕೂ ೫ಎ ಕಾಲುವೆ ಹೋರಾಟ ದಿಂದ ರೈತರು ಹಿಂದೆ ಸರಿಯುವ ಪ್ರಶ್ನೆ ಇಲ್ಲ ಹೋರಾಟ ನಿರಂತರ ವಾಗಿ ನಡೆಯಲಿದೆ ಎಂದರು. ಹೋರಾಟ ಸಮಿತಿ ಅಧ್ಯಕ್ಷ ಬಸವರಾಜಪ್ಪ ಗೌಡ ಹರ್ವಾಪೂರ ಮಾತನಾಡಿ ನಂದ ವಾಡಗಿ ಏತ ನೀರಾವರಿ ಯೋಜನೆ ಮೂಲಕ ನೀರು ಹರಿಸಿ ಕೊಳ್ಳಲು ಸಾಧ್ಯವಿಲ್ಲ ನಂದ ವಾಡಗಿ, ೫ಎ ಕಾಲುವೆ ಎಂದು ರೈತರಲ್ಲಿ ಗೊಂದಲ ಮೂಡಿಸಲು ಕೆಲವರು ಕುತಂತ್ರ ನಡೆಸಿದ್ದಾರೆ ನಂದ ವಾಡಿಗಿ ಏತ ನೀರಾವರಿ ಜಾರಿಗೆ ಒತ್ತಾಯಿಸುತ್ತಿರುವ ಮುಖಂಡರು ನಮ್ಮ ಜತೆ ಮಾತನಾಡದೆ ಏಕ ಪಕ್ಷೀಯ ವಾಗಿ ಹೇಳಿಕೆ ಕೊಟ್ಟು ರೈತರಲ್ಲಿ ಗೊಂದಲ ಮೂಡಿಸುವ ಕೆಲಸ ಕೈ ಬಿಡಬೇಕು ಎಂದು ಒತ್ತಾಯಿಸಿದರು. ಕೆಲ ಜನರು ಆಶೆ, ಆಮಿಷ ಗಳಿಗೆ ಒಳಗಾಗಿ ರೈತರ ಒಗ್ಗಟ್ಟು ಮುರಿಯಲು ನಮ್ಮ ಅಣ್ಣ , ತವ್ಮ್ಮಂದಿರೆ ಮುಂದಾಗಿದ್ದಾರೆ ಅವರನ್ನು ನಾವು ನಮ್ಮ ವಿರೋಧಿ ಗಳು ಎಂದು ಭಾವಿಸುವುದಿಲ್ಲ ಹಲವು ಅಡ್ಡಿ ಆತಂಕಗಳ ನಡುವೆ ೫ಎ ಕಾಲುವೆ ಹೋರಾಟ ಮುನ್ನೆಡೆಯಲಿದೆ ಎಂದರು. ನಾಗ ರೆಡ್ಡೆಪ್ಪ ದೇವರ ಮನಿ ಮಾತನಾಡಿ ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಗಂಗಾರಾಮ್ ರೈತರಿಗೆ ೫ಎ ಕಾಲುವೆ ಬಗ್ಗೆ ತಪ್ಪು ಮಾಹಿತಿ ನೀಡಿ ರೈತ ಹೋರಾಟ ಒಡೆಯಲು ಪಿತೂರಿ ನಡೆಸಿದ್ದಾರೆ ೫ಎ ಕಾಲುವೆ ನೀರಾವರಿ ಯೋಜನೆ ಅನುಷ್ಟಾನ ಗೊಳ್ಳುವ ವರೆಗೆ ಹೋರಾಟ ನಿಲ್ಲದು ಎಂದು ದೇವರ ಮನಿ ಹೇಳಿದರು. ಮಲ್ಲಿಕಾರ್ಜುನ ಹೂವಿನಬಾವಿ, ವಿಜಯ ಕುಮಾರ ಅಂಗಡಿ, ಮುತ್ತಣ್ಣ ಅಮೀನಗಡ, ಸಿದ್ದನಗೌಡ ಚಿಲ್ಕರಾಗಿ, ಮಲ್ಲನಗೌಡ ಅಮೀನ ಗ ಡ, ಶಿವ ಶಂಕರ ರಾವ್ ಜಾಗೀರ ದಾರ, ಶರಣಪ್ಪ ಕುಂಬಾರ ಇದ್ದರು.