ರೈತರ ಎರಡನೆ ಬೆಳೆ‌ಗೆ ನೀರು‌ ಕೊಡಲು ನಾಡಗೌಡ ಆಗ್ರಹ

ಸಿಂಧನೂರು.ನ.13- ರೈತರ ಎರಡನೆ ಬೆಳೆಗೆ ನೀರು‌ ಬಿಡುವಂತೆ ಸರ್ಕಾರಕ್ಕೆ ಹಾಗೂ ಐಸಿಸಿ ಅಧ್ಯಕ್ಷರು ಹಾಗೂ ಸಚಿವರಾದ ಆನಂದ‌ಸಿಂಗ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಲ್ಲದೆ ಕೂಡಲೆ ಐಸಿಸಿ ಸಭೆ ಕರೆಯುವಂತೆ ಸಚಿವರ ಜೊತೆ ದೂರವಾಣಿ ಮೂಲಕ ಕರೆ ಮಾಡಿ‌ ಮಾತನಾಡಿದ್ದೇನೆ ಎಂದು ಮಾಜಿ‌ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.
ನಗರದ ಕಮ್ಮಾವಾರಿ‌ ಭವನದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಕಾಲುವೆಯ ಮೇಲ್ಬಾಗದ ರೈತರ ಭತ್ತ ಕಟಾವಿಗೆ ಬಂದಿದ್ದು, ಅಲ್ಲಿ ನೀರಿನ ಅವಶ್ಯಕತೆ ಇಲ್ಲದ ಕಾರಣ ನೀರನ್ನು ನಿಯಂತ್ರಿಸಿ ಕೆಳ ಭಾಗದ ಬೆಳೆದು ನಿಂತ ರೈತರ ಬೆಳೆಗಳಿಗೆ ನೀರು ಕೊಡಿಸುವ ಜವಬ್ದಾರಿ ನನ್ನದಾಗಿದೆ ಎಂದರು.
ಭತ್ತ ಖರೀದಿ ಕೇಂದ್ರ ಆರಂಭಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿಗೆ‌ ರಾಯಚೂರಿಗೆ‌ ತೆರಳುವ ಮಾರ್ಗದಲ್ಲಿ ಜವಳಗೇರಾ ಗ್ರಾಮದಲ್ಲಿ ಮನವಿ‌ ನೀಡಿ ವಿನಂತಿಸಿ‌ಕೊಂಡ ಕಾರಣ ಸರ್ಕಾರ ‌ಭತ್ತ ಖರೀದಿ ಕೇಂದ್ರ ಆರಂಭಿಸಿದೆ ಎಂದರು.
ತಾಲೂಕಿನ ‌ದಡೆಸ್ಗೂರು ಗ್ರಾಮದ ನದಿ ದಂಡೆಯಲ್ಲಿರುವ ಈಶ್ವರ ದೇವಾಲಯದಲ್ಲಿ ಸರಳವಾಗಿ ,ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಪುಷ್ಕರಣಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಈ ಭಾಗದ ಭಕ್ತರು‌ ಇದರ ಸದುಪಯೋಗ ಪಡೆದು ಕೊಳ್ಳ ಬೇಕೆಂದು ಶಾಸಕರು ಭಕ್ತರಲ್ಲಿ ‌ಮನವಿ ಮಾಡಿಕೊಂಡರು.
ನ. 20 ರಿಂದ ಡಿಸೆಂಬರ್ 1 ರ ತನಕ ದಡೆಸ್ಗೂರು ಗ್ರಾಮದ ಕೃಷಿ ಇಲಾಖೆಯ ಪಾರ್ಮ ಹತ್ತಿರ ಇರುವ ಶಿವಾಲಯದಲ್ಲಿ ಅರ್ಚಕರೊಂದಿಗೆ ಪೂಜಾ ‌ಪರಸ್ಕಾರ ಗಳು ನಡೆಯಲಿವೆ.ಬೆಳಿಗ್ಗೆ 5 ರಿಂದ ಸಂಜೆ 5 ರ ತನಕ ಭಕ್ತಾಧಿಗಳು ಎಂಟತ್ತು ಜನರಂತೆ ನದಿಯಲ್ಲಿ ಸ್ನಾನ ಮಾಡಿ ‌ಪಿತೃ ಪ್ರಧಾನ‌ ಕಾರ್ಯಕ್ರಮಕ್ಕೆ ಅವಕಾಶ ಮಾಡಕೊಡಲಾಗಿದೆ ಎಂದರು .
ವೈದ್ಯಾಧಿಕಾರಿಗಳು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು , ಗ್ರಾಮ ಪಂಚಾಯತಿ ‌,ಪೋಲಿಸ್ ಇಲಾಖೆ,‌ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಸಹಾಯ ಸೌಲಭ್ಯ ನೀಡುವರು‌ ಹಾಗೂ ಪೋಲಿಸ್ ಇಲಾಖೆ ಸೂಕ್ತ ಬಂದ್ ಬಸ್ತ ವ್ಯವಸ್ಥೆ ಮಾಡುತ್ತದೆ.
ಈ ಸಂದರ್ಭದಲ್ಲಿ ಜಿ.ಸತ್ಯನಾರಾಯಣ, ಬಸವರಾಜ ನಾಡಗೌಡ ಶಿವಾನಂದ ಗುಪ್ತಾ, ಭಾಸ್ಕರ ರಾವ್,ಬಿ .ಶ್ರೀ ಹರ್ಷ, ನಾಗೇಶ ಹಂಚಿನಾಳ‌ ಕ್ಯಾಂಪ್ ,ಶ್ರೀನಿವಾಸ ರಾವ್ ,ರಾಮ‌ ಚಂದ್ರಪ್ಪ‌ ಆಚಾರ್ಯ ,ಸಾಯಿ‌ ರಾಮಕೃಷ್ಣ ಸೇರಿದಂತೆ ಇತರರು ಸಭೆಯಲ್ಲಿ ‌ಬಾಗವಹಿಸಿ‌ ಸಲಹೆ‌ ಸೂಚನೆ ನೀಡಿದರು.