ರೈತರ ಉತ್ಪನ್ನಗಳ ಮಾರುಕಟ್ಟೆ ನೀರಾವರಿ ಕಡೆ ಗಮನ ಹರಿಸಲು ಕರೆ

ಕೋಲಾರ,ಜೂ. ೨೮- ರೈತರು ಸಮಾಜದ ಬೆನ್ನಲುಬು ಎನ್ನುತ್ತಾರೆ ಅದರೆ ರೈತರು ಇಂದು ಬರಗಾಲ ವಿವಿಧ ಕಾರಣಗಳಿಂದ ಸಂಕಷ್ಟಕ್ಕೆ ಸಿಲುಕಿರುವುದರಿಂದ ನಾವೆಲ್ಲಾರು ರೈತರ ಬೆನ್ನು ಮೂಳೆಯನ್ನು ಗಟ್ಟಿಗೊಳಸಿದಾಗ ಮಾತ್ರ ಸಮಾಜದಲ್ಲಿ ಸುಖ ಸಂತೋಷಗಳನ್ನು ಕಾಣಲು ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಶ್ರೀ ಮಂಗಳನಾಥ್‌ನಂದ ಸ್ವಾಮಿಜಿಯವರ ಅಭಿಪ್ರಾಯ ಪಟ್ಟರು.
ನಗರದ ಪ್ರವಾಸಿ ಮಂದಿರದ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಒಕ್ಕಲಿಗರ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ೫೧೪ನೇ ಕೆಂಪೇಗೌಡರ ಗೌಡರ ಜಯಂತೆಯ ಸ್ಥಬ್ದ ಚಿತ್ರಗಳ ಪಲ್ಲಕ್ಕಿಗಳಿಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು ಸಕಾಲಕ್ಕೆ ಮಳೆಯಾಗದೆ ಬರಗಾಲ ವ್ಯಾಪಿಸಿದೆ, ಸರ್ಕಾರವು ರೈತರ ಉತ್ಪನ್ನಗಳ ಮಾರುಕಟ್ಟೆ ಮತ್ತು ಕೃಷಿಗೆ ಪೂರಕವಾದ ನೀರಾವರಿ ವ್ಯವಸ್ಥೆಗಳ ಕಡೆ ವಿಶೇಷವಾಗಿ ಗಮನ ಹರಿಸ ಬೇಕಾಗಿದೆ ಎಂದು ತಿಳಿಸಿದರು.


ಕೆಂಪೇಗೌಡರು ಬೆಂಗಳೂರನ್ನು ನಿರ್ಮಿಸಲು ದೂರ ದೃಷ್ಟಿಯನ್ನು ಹೊಂದಿ ನಿರ್ಮಿಸಿದ ಹಿನ್ನಲೆಯಲ್ಲಿ ಇಂದು ಕರ್ನಾಟಕದ ರಾಜಧಾನಿಯಾಗಿ ಮಾಡಲಾಗಿದೆ. ಕೆಂಪೇಗೌಡರ ಜಯಂತಿಯನ್ನು ಒಂದು ಶಕ್ತಿಯ ದಿನವನ್ನಾಗಿ, ಹೆಮ್ಮೆಯ ದಿನವನ್ನಾಗಿ ಆಚರಿಸುವಂತಾಗ ಬೇಕೆಂದು ಕರೆ ನೀಡಿದರು.
ಕೆಂಪೇಗೌಡರ ಅಭಿವೃದ್ದಿ ಕಾರ್ಯಗಳು ದೇಶಕ್ಕೆ ಮಾದರಿಯಾಗಿದ್ದ ಹಿನ್ನಲೆಯಲ್ಲಿ ನಾಡಪ್ರಭು ಎಂಬ ಹೆಸರಿಗೆ ಪಾತ್ರರಾದರು ಅವರನ್ನು ನೆನಪಿಸಿ ಕೊಳ್ಳುವ ದಿಸೆಯಲ್ಲಿ ಕೆಂಪೇಗೌಡರ ಜಯಂತಿಯನ್ನು ೫೧೪ನೇ ವರ್ಷದಲ್ಲಿ ಮುಂದುವರೆಸಿ ಕೊಂಡು ಬರುತ್ತಿದ್ದೇವೆ. ಈ ಜಯಂತಿಯನ್ನು ಆಚರಿಸಲು ಒಕ್ಕಲಿಗ ಸಮುದಾಯದವರಿಗೆ ಹೆಮ್ಮೆ ಎನಿಸಿ ಕೊಳ್ಳುವುದು ಸಹಜ ಅದೇ ರೀತಿ ಇಂದು ನಾವೆಲ್ಲಾ ಸಂಘಟಿತರಾಗುವ ಶಕ್ತಿಯ ದಿನವಾಗಿದೆ ಎಂದು ಶ್ರೀಗಳು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ. ಬಿಸಪ್ಪಗೌಡರು, ಸಂಸದ ಎಸ್.ಮುನಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜಿಲ್ಲಾಧಿಕಾರಿ ಅಕ್ರಂಪಾಷ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ್,ಬಿಜೆಪಿ ಮುಖಂಡ ಚಂದ್ರರೆಡ್ಡಿ, ಸೆನೆಟ್ ಸದಸ್ಯ ಗೋವಿಂದಪ್ಪ, ನಿವೃತ್ತ ಡಿ.ವೈ.ಎಸ್.ಪಿ. ಮುನಿರೆಡ್ಡಿ, ಸಿ.ಎಂ.ಆರ್. ಶ್ರೀನಾಥ್, ವಡಗೂರು ನಾಗರಾಜ್, ಪವನ್ ನಾರಾಯಣಸ್ವಾಮಿ, ಬಾಬುಮೌನಿ, ಮುಂತಾದವರು ಉಪಸ್ಥಿತರಿದ್ದರು. ಗುತ್ತಿಗೆದಾರರಾದ ಕೃಷ್ಣರೆಡ್ಡಿ ಸ್ವಾಗತಿಸಿದರು, ಶಿಕ್ಷಣ ಇಲಾಖೆಯ ಅಶೋಕ್ ನಿರೂಪಿಸಿದರು.