ರೈತರ ಆರ್ಥಿಕ ಕಷ್ಟಕ್ಕೆ ನೆರವಾಗುವ ಯೋಜನೆ

ಬೀದರ,ಮಾ 29: ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ತನ್ನೊಟ್ಟಿಗೆ
ಅಧ್ಯರ್ಪಿತಗೊಂಡ ಜಿಲ್ಲೆಯ 188 ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘಗಳ ಮೂಲಕ ಕೇಂದ್ರ ಹಾಗೂ ರಾಜ್ಯ
ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ರೈತರ
ಮನೆಬಾಗಿಲಿಗೆ ಕೊಂಡೊಯ್ಯುವಲ್ಲಿ ಡಿಸಿಸಿ ಬ್ಯಾಂಕ್
ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ.
ಜಿಲ್ಲೆಯ 215000 ಕೃಷಿಅವಲಂಬಿತ ಕುಟುಂಬಗಳ ಪೈಕಿ 175000 ರೈತರು ನೇರವಾಗಿಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿಸುಮಾರು 1000.00 ಕೋಟಿಗಳಷ್ಟು ಕೃಷಿ ಸಾಲ
ತೆಗೆದುಕೊಂಡು ಕೃಷಿ ಚಟುವಟಿಕೆಗಳಲ್ಲಿ
ಹೂಡಿಕೆಯಾಗಿರುವುದು ಅತ್ಯಂತ ವಿಶ್ವಾಸಾರ್ಹ ಬ್ಯಾಂಕ ಆಗಿ
ತನ್ನ 100ನೇ ಸಂಭ್ರಮಾಚರಣೆಯಲ್ಲಿ ರೈತರ
ನೆರವಿಗೊಸ್ಕರ ಡಿಜಿಟಲ್ ರೂಪದ ಮಾರ್ಟಿಗೇಜ (ಭೂಮಿ ಮೇಲೆ
ಋಣಭಾರ) ಮಾಡುವುದು 2021ರ ನವೆಂಬರ್ 1 ರಿಂದ ಕರ್ನಾಟಕ ಸರ್ಕಾರದ ಈ-ಆಡಳಿತ ಇಲಾಖೆಯು ಜಾರಿಗೆ ತಂದಿರುವುದು
ಜಿಲ್ಲೆಯ ರೈತರಿಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ
ನಿರ್ವಹಿಸುತ್ತಿದೆ. ಪ್ರಸ್ತುತಚಾಲ್ತಿಯಲ್ಲಿರುವ ರೂ.1.00 ಲಕ್ಷದವರೆಗೆ ಮಾರ್ಟಿಗೆಜ್‍ಮಾಡುವುದು ಸಂಘಗಳಲ್ಲಿಯೇ ಲಭ್ಯವಿದ್ದು ರೂ.1
ಲಕ್ಷಕ್ಕಿಂತ ಹೆಚ್ಚಿನ ಮಾರ್ಟಿಗೇಜ ಮಾಡುವ ಸಲುವಾಗಿ ತಾಲೂಕಾ
ಸಬ್ ರಜಿಸ್ಟ್ರಾರಗಳ ಕಛೇರಿಗೆ (ತಾಲೂಕಾ ಉಪ
ನೋಂದಣಾಧಿಕಾರಿ ಕಛೇರಿ) ರೈತರ ಅಲೆದಾಟ ತಪ್ಪಿಸಲು
ಮಾರ್ಟಿಗೇಜ ಮಿತಿಯನ್ನು ರೂ.3 ಲಕ್ಷದವರೆಗೆ
ವಿಸ್ತರಿಸಲಾಗಿದೆ, ಇದನ್ನು 1ನೇ ಏಪ್ರೀಲ್ 2023 ರಿಂದ ಜಾರಿಗೆ
ತರಲಾಗುವುದು. ಈ ಮಿತಿ ಹೆಚ್ಚಿಸುವುದರಿಂದ ಜಿಲ್ಲೆಯ
ಸಮಸ್ತ ರೈತ ಕುಟುಂಬಗಳು ಇನ್ನೂ ಹೆಚ್ಚಿನ ಸಮಯಅವರ ಕುಟುಂಬಕ್ಕೆ ಮತ್ತು ಅವರ ಕೃಷಿ ಚಟುವಟಿಕೆಗಳಿಗೆ
ನೀಡಿ ಅವರ ಆದಾಯ ಉತ್ಪನ್ನ ಹೆಚ್ಚಿಸಿಕೊಳ್ಳಲುನೆರವಾಗುವುದು ಮತ್ತು ಕುಟುಂಬ ಹಾಗೂ ಅವಲಂಬಿತರಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ನೀಡಿ ರೈತ ಮತ್ತುಅವರ ಕುಟುಂಬಗಳ ಜೀವನ ಸಮೃದ್ಧಿ ಮಾಡಿಕೊಳ್ಳಲು ಜಿಲ್ಲಾಸಹಕಾರ ಕೇಂದ್ರ ಬ್ಯಾಂಕ ನೆರವಿಗೆ ಬರುತ್ತಿದ್ದು,
ಮುಂಬರುವ ದಿನಗಳಲ್ಲಿ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ
ಸಹಕಾರ ಸಂಘಗಳು ಕೇಂದ್ರ ಸರ್ಕಾರದ ಪ್ಯಾಕ್ಸ
ಗಣಕೀಕರಣ ಯೋಜನೆ ಅಡಿಯಲ್ಲಿ ಗಣಕೀಕರಣಗೊಳಿಸಿ ಎಲ್ಲಾ
ಪ್ಯಾಕ್ಸಗಳು ಸರ್ಕಾರದ ನಿರ್ದೇಶನದಂತೆ ಕಾಮನ ಸರ್ವಿಸ
ಸೆಂಟರಗಳಾಗಿ ಪರಿವರ್ತಿಸಿ ಜಿಲ್ಲೆಯ ಸಮಸ್ತ ನಾಗರಿಕರಿಗೆ
ಹಾಗೂ ರೈತರಿಗೆ ಅವರ ಗ್ರಾಮದಲ್ಲಿಯೇ ಸಹಕಾರ
ಸಂಘಗಳ ಮುಖೇನ ಸುಮಾರು 300 ಸರ್ಕಾರದ
ಸೇವೆಗಳನ್ನು ಅವರ ಮನೆ ಬಾಗಿಲುಗಳಿಗೆ
ಕೊಂಡೊಯ್ಯಲು ನಿರಂತರ ಶ್ರಮಿಸುವುದಾಗಿ ಅವರು ತಿಳಿಸಿದ್ದಾರೆ