ರೈತರ ಆಪದ್ಭಾಂಧವ ನಾಗಮಾರಪಳ್ಳಿ : ಡಾ.ಸಿದ್ದಾರೆಡ್ಡಿ

ಔರಾದ : ಫೆ.22:ರೈತರ ಆಪದ್ಭಾಂಧವ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿಯವರು ಎಲ್ಲರಿಗೂ ಆದರ್ಶರಾಗಿದ್ದಾರೆ ಎಂದು ವಡಗಾಂವ(ದೇ) ಸರಕಾರಿ ಆಸ್ಪತ್ರೆಯ ವೈದ್ಯ ಡಾ. ಸಿದ್ದಾರೆಡ್ಡಿ ನುಡಿದರು.

ಸೋಮವಾರ ಪಿಕೆಪಿಎಸ್ ಹಾಗು ಸ್ಥಳಿಯ ಡಿಸಿಸಿ ಬ್ಯಾಂಕ್ ಸಹಯೋಗದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ 64ನೇ ಜನ್ಮದಿನದ ನಿಮಿತ್ಯ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು,

ರಾಜ್ಯದ ಸಹಕಾರ ಕ್ಷೇತ್ರದಲ್ಲಿ ದಿಗ್ಗಜರಾದ ದಿ. ಡಾ. ಗುರುಪಾದಪ್ಪ ನಾಗಮಾರಪಳ್ಳಿ ಅವರು ಹಾಕಿಕೊಟ್ಟ ದಾರಿಯಲ್ಲಿಯೇ ಚಾಚು ತಪ್ಪದೇ ಜನಸೇವೆಯೇ ಜನಾರ್ಧನ ಸೇವೆ ಎಂದು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ತಂದೆಯಂತೆ ಇವರು ಸಹ ಜನಸೇವೆಗಾಗಿ ಜೀವನ ಮೂಡಿಪಾಗಿಟ್ಟಿದ್ದಾರೆ, ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು. ಕಾರ್ಯದರ್ಶಿ, ಸಿದ್ದಪ್ಪ ತೇಲಿ ಬ್ಯಾಂಕ್ ವ್ಯವಸ್ಥಾಪಕ ಪ್ರಕಾಶ ಬ್ಯಾಳೆ, ಸಂಗಮೇಶ, ವಿಶ್ವನಾಥ, ಶಿವಲಿಂಗಪ್ಪ, ದೇವಿದಾಸ್, ಶಿವರಾಜ್ ಇದ್ದರು