ರೈತರ ಅಭಿಪ್ರಾಯ ಕೇಳಿ ಸಂತಸ ತಂದಿದೆ : ಸಚಿವ ಡಾ.ಶರಣಪ್ರಕಾಶ ಪಾಟೀಲ್

ಸೇಡಂ, ಜ,24: ಕೆರೆಗಳಲ್ಲಿನ ಹೂಳೆತ್ತುವುದರಿಂದ ಸುತ್ತಮುತ್ತಲಿನ ಜಮೀನಿನಲ್ಲಿ ಅಂತರ್ಜಲ ವೃದ್ಧಿಗೆ ಸಹಕಾರಿ ಆಗುವುದಲ್ಲದೇ ಕೆರೆಗಳ ಪುನಶ್ಚೇತನವೂ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ರಿ. ಸೇಡಂ ಗ್ರಾಮ ಪಂಚಾಯತ ನೀಲಹಳ್ಳಿ ಮತ್ತು ಕೆರೆ ಅಭಿವೃದ್ಧಿ ಸಮಿತಿ ಅರೆಬೊಮ್ಮನಹಳ್ಳಿ ಇವರ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಆಯ್ಕೆಯಾದ 620 ನೇ ಅರೆಬೊಮ್ಮನಹಳ್ಳಿ ಕರೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆರೆಗೆ ಬಾಗೀನ ಅರ್ಪಿಸಿ ಮಾತನಾಡಿದ ಅವರು, ಕೆರೆಗಳ ಅಭಿವೃದ್ಧಿಯಿಂದ ಬೇಸಿಗೆ ಸಮಯದಲ್ಲಿ ಅಂತರ್ಜಲ ವೃದ್ಧಿಯಾಗಿ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ನೀರು ಬರುತ್ತವೆ, ಕೆರೆಗಳಲ್ಲಿ ನೀರು ಹರಿಸುವುದರಿಂದ ಪ್ರಾಣಿ ಪಕ್ಷಿಗಳಿಗೆ ಕುಡಿಯಲು ನೀರು ಸಿಗಲಿದೆ, ಅದಕ್ಕಿಂತ ಹೆಚ್ಚಾಗಿ ಅಚ್ಚುಕಟ್ಟಿನ ಕೃಷಿ ಭೂಮಿಗಳಲ್ಲಿ ಒಳ್ಳೆಯ ಇಳುವರಿ ಬರಲು ಅನುಕೂಲವಾಗಲಿದೆ ಎಂದ ಅವರು,
ಧರ್ಮಸ್ಥಳ ಸಂಸ್ಥೆಯಿಂದ ಬಹಳಷ್ಟು ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಿದೆ,
ಊರಿನ ಜನರು ಕೂಡ ಕೆರೆಯನ್ನು ಚೆನ್ನಾಗಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಸತೀಶ ಸುವರ್ಣರವರು ಮಾತನಾಡಿದ ಅವರು, ಧರ್ಮಸ್ಥಳ ಸಂಸ್ಥೆಯ ನಮ್ಮೂರ ನಮ್ಮ ಕೆರೆ ಕಾರ್ಯಕ್ರಮದಡಿ ರಾಜ್ಯದಲ್ಲಿ ಇದುವರೆಗೆ 620 ಕೆರೆಗಳಲ್ಲಿ ಹೂಳೆತ್ತುವ ಕೆಲಸ ಮಾಡಲಾಗಿದೆ. ಈಗ ಅರೆಬೊಮ್ಮನಹಳ್ಳಿ ಕೆರೆಯಲ್ಲಿ ಹೂಳೆತ್ತು, ಕೆರೆಯ ಅಭಿವೃದ್ಧಿಯನ್ನು ಗೊಳಿಸಿ ಹಸ್ತಾಂತರಗೊಳಿಸಲಾಗುತ್ತಿದೆ. ಅಲ್ಲದೇ ನಮ್ಮ ಸಂಸ್ಥೆಯಿಂದ ಮಹಿಳೆಯರಿಗೆ ಸಾಲ ಸೌಲಭ್ಯ, ಅಂಗವಿಕಲರಿಗೆ ಸಲಕರಣೆಗಳ ವಿತರಣೆ, ಅಲ್ಲದೇ ಅನೇಕ ಶುದ್ಧ ನೀರಿನ ಘಟಕಗಳ ಸ್ಥಾಪಸಿ 3 ರೂ ಗೆ 20 ಲೀಟರ್ ನೀರು, ಶಾಲೆಗಳಿಗೆ ಬ್ರೆಂಚ್ ನೀಡುವುದು, ಜಲಮಂಗಲ ಕಾರ್ಯಕ್ರಮ, ಸುಜ್ಞಾನ ನಿಧಿ ಶಿಷ್ಯವೇತನ, ಗ್ರಾಮೀಣ ಭಾಗದ ಜನರಿಗೆ ಅSಅ ಕಾರ್ಯಕ್ರಮದ ಅಡಿಯಲ್ಲಿ ಆಯುಷ್ಮಾನ ಕಾರ್ಡ್, ಈಶ್ರಮ್ ಕಾರ್ಡ್, ಪ್ಯಾನ್ ಕಾರ್ಡ್, ಇನ್ನಿತರ ಕೇಂದ್ರ ಸರ್ಕಾರದ ಕಾರ್ಡುಗಳನ್ನು ಮಾಡಲಾಗುತ್ತಿದೆ ಎಂದರು.
ಈ ಕರೆ ಹಸ್ತಾಂತರ ಕಾರ್ಯಕ್ರಮದಲ್ಲಿ
ಹಾಲಪಯ್ಯ ಮಠದ ಶ್ರೀ ಪಂಚಾಕ್ಷರಿ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಊರಿನ ಮುಖಂಡರಾದ ವಿಶ್ವನಾಥ ಪಾಟೀಲ್, ಬಸವರಾಜ ಪಾಟೀಲ್, ಶಿವಶರಣರರೆಡ್ಡಿ ಪಾಟೀಲ್, ನಾಗೇಂದ್ರಪ್ಪ ಸಾಹುಕಾರ್, ಜಗು ಹಾಗರಿಗಿ, ಸತೀಶ ಪೂಜಾರಿ, ಗ್ರಾಪಂ ಅಧ್ಯಕ್ಷ ಜಗದೇವಪ್ಪ, ಧರ್ಮಸ್ಥಳ ಸಂಸ್ಥೆಯ ಸೇಡಂ ತಾಲೂಕು ಯೋಜನಾಧಿಕಾರಿ ಮಂಜುನಾಥ ಎಸ್.ಜಿ , ಕೃಷಿ ಮೇಲ್ವಿಚಾರಕ ರಾಹುಲ್ ಬುಡಗೆ, ಮೇಲ್ವಿಚಾರಕ ನೀಲಕಂಠ್, ಸೇವಾ ಪ್ರತಿನಿಧಿಗಳು ಸೇರಿದಂತೆ ಇನ್ನಿತರರಿದ್ದರು.