ರೈತರು-ಹಿಂದುಳಿದವರ ಅಭಿವೃದ್ಧಿಗೆ ಬಿಜೆಪಿ ನಿರ್ಲಕ್ಷ್ಯ:ಆರೋಪ

ಕುಣಿಗಲ್, ಜು. ೨೧- ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳ, ರೈತರ, ಪರಿಶಿಷ್ಟರ ಅಭಿವೃದ್ಧಿಗೆ ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ಶಾಸಕ ಡಾ. ಎಚ್.ಡಿ. ರಂಗನಾಥ್ ಆರೋಪಿಸಿದರು.
ಪಟ್ಟಣದ ಜಿಕೆಬಿಎಂಎಸ್ ಶಾಲಾ ಆವರಣದಲ್ಲಿ ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ತಾಲ್ಲೂಕಿನ ೧೨ ಫಲಾನುಭವಿಗಳಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊರೆದ ಕೊಳಾಯಿ ಬಾವಿಗಳಿಗೆ ೪ ಲಕ್ಷ ರೂ ವೆಚ್ಚದ ಪಂಪ್ ಮೋಟಾರ್ ಪೈಪ್‌ಗಳನ್ನು ವಿತರಿಸಿ ಅವರು ಮಾತನಾಡಿದರು.
ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟರು, ರೈತರ ಅಭಿವೃದ್ಧಿಯಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿದೆ. ೨೫೦ ಫಲಾನುಭವಿಗಳಲ್ಲಿ ಕೇವಲ ೧೨ ಮಂದಿಗೆ ಮಾತ್ರ ವಿತರಿಸುವುದು ಒಂದು ದೊಡ್ಡ ಸಮಸ್ಯೆಯಾಗಿದ್ದು, ಹಿಂದುಳಿದವರಿಗೆ, ಪರಿಶಿಷ್ಟರಿಗೆ, ರೈತ ವಿರೋಧಿ ಸರ್ಕಾರ ತಾರತಮ್ಯ ನೀತಿ ಅನುಸರಿಸಿ ಈಗಾಗಲೇ ಜನಸಾಮಾನ್ಯರ ಮೇಲೆ ಮಜ್ಜಿಗೆ, ಹಾಲು, ತುಪ್ಪ ಸೇರಿದಂತೆ ನಿತ್ಯ ಬಳಕೆ ವಸ್ತುಗಳ ಮೇಲೆ ಜಿಎಸ್‌ಟಿ ಏರಿದ್ದು ಸರಿಯಾದ ಹಣಕಾಸು ಬಿಡುಗಡೆ ಮಾಡದೇ ತೊಂದರೆ ನೀಡುತ್ತಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಶಿವಾನಂದರೆಡ್ಡಿ, ತಾಲ್ಲೂಕು ಸಹಾಯಕಿ ಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು.