ರೈತರು ಸೋಲಾರ್ ವಿದ್ಯುತ್ ಬಳಕೆಗೆ ಮುಂದಾಗಬೇಕು: ಮಲ್ಲಿಕಾರ್ಜುನ


(ಸಂಜೆವಾಣಿ ವಾರ್ತೆ)
ಕಂಪ್ಲಿ:ಜು 27: ಔದ್ಯೋಗಿಕರಣ ಮತ್ತು ವಿಕಾಸ ವಿದ್ಯುತ್ ನಿಂದ ಮಾತ್ರ  ಸಾಧ್ಯ ಎಂದು ವಿಜಯಪುರ ಕೂಡ್ಗಿ ಎನ್. ಟಿ. ಪಿ. ಸಿ.ಲಿ. ಡಿಜಿಎಂ ಮಲ್ಲಿಕಾರ್ಜುನ.ಬಿ.ಹೆಚ್. ಅಭಿಪ್ರಾಯಿಸಿದರು.
 ಅವರು ನಿನ್ನೆ  ಪಟ್ಟಣದ ರಾಘವೇಂದ್ರ ಸ್ವಾಮಿ ಮಠದಲ್ಲಿ ಉಜ್ವಲ ಭಾರತ-ಉಜ್ವಲ ಭವಿಷ್ಯ ಅಡಿಯಲ್ಲಿ ಜೆಸ್ಕಾಂ  ಹಮ್ಮಿಕೊಂಡಿದ್ದ ವಿದ್ಯುತ್ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ರು. ರೈತರು ಸೋಲಾರ್ ಪಂಪ್ ಗಳನ್ನು ಬಳಸಿ, ಡೀಸೆಲ್ ಖರ್ಚು ಮತ್ತು ಪರಿಸರ ಈ ಎರಡನ್ನು ಉಳಿಸಬೇಕೆಂದರು
ಬಳ್ಳಾರಿ ಜೆಸ್ಕಾಂ ವ್ರುತ್ತ ಕಚೇರಿ ಅಧೀಕ್ಷಕ ಅಭಿಯಂತರ ವೆಂಕಟೇಶಲು ಮಾತನಾಡಿ, ರೈತರು ಸೌರ ಇಂಧನ ಬಳಸಬೇಕು. ಡೀಸೆಲ್ ಬಳಕೆಯಿಂದಾಗುವ ವೆಚ್ಚ, ಮತ್ತು ವಾಯು ಮಾಲಿನ್ಯ ದಿಂದ ಮುಕ್ತಿ ಪಡೆಯಬೇಕೆಂದರು.
ಪುರಸಭೆ ಅಧ್ಯಕ್ಷೆ ಶಾಂತಲಾ ವಿ.ವಿದ್ಯಾಧರ ಜ್ಯೋತಿ  ಕಾರ್ಯ ಕ್ರಮ ಉದ್ಘಾಟಿಸಿ ದರು. ತಹಸೀಲ್ದಾರ್ ಗೌಸಿಯಾಬೇಗಂ, ಹೊಸ ಪೇಟೆ ಜೆಸ್ಕಾಂ ಕಾರ್ಯ ನಿರ್ವಾಹಕ ಅಭಿಯಂತರ ಶ್ರೀ ನಿವಾಸ.ಜಿ.ಜೆ., ಪುರಸಭೆ ಉಪಾಧ್ಯಕ್ಷೆ ನಿರ್ಮಲಾ ವಸಂತ, ಮುಖ್ಯಾಧಿಕಾರಿ ಶಿವಲಿಂಗ ಪ್ಪ, ರೈತ ಸಂಘ ಅಧ್ಯಕ್ಷ ಕೊಟ್ಟೂರು ರಮೇಶ್, ಎಇಇ ಉಮೇಶಕುಮಾರ್,ಎಇಇಅರುಣಕುಮಾರ್,ಲೆಕ್ಕಾಧಿಕಾರಿ ಬಿ. ಟಿ. ಹಳ್ಳಿ, ಎಇ ವಿನೋದ ಕುಮಾರ್, ಎಇ ಭೀಮೇಶ್, ಜೆಇ ತಿಪ್ಪೇಸ್ವಾಮಿ ಜೆಸ್ಕಾಂ ಇಲಾಖೆ ಸಿಬ್ಬಂದಿ, ರೈತರು, ಗ್ರಾಹಕರು, ಮುಖಂಡರು ಪಾಲ್ಗೊಂಡಿದ್ದರು. ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿದವು.