ರೈತರು ಸಾವಯವ ಕೃಷಿಗೆ ಮರಳಬೇಕು

ಚಿಂಚೋಳಿ:ಮಾ.12: ತಾಲೂಕಿನ ಪೆÇಲಕಪಳ್ಳಿಯ ಮಲ್ಲಿಕಾರ್ಜುನ ಹಿತ್ತಲ ತೋಟದಲ್ಲಿ ಆಯೋಜಿಸದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕøತಿಕ ಸಂಘದ ವತಿಯಿಂದ ತಾಲೂಕಿನ ರೈತರಿಗೆ ಗೋಕೃಪಾಮೃತ ತರಬೇತಿ ಕಾರ್ಯಾಗಾರದಲ್ಲಿ ಗೋಶಾಲೆ ಪ್ರಮುಖ ಸುಧೀ0ದ್ರ ದೇಶಪಾಂಡೆ ಮಾತನಾಡಿ ರೈತರು ಆಧುನಿಕ ಯುಗದಲ್ಲಿ ಕಲುಷಿತ ಆಹಾರ ಸೇವನೆ ಮಾಡಿತ್ತಿದಿದ್ದೇವೆ ಮುಂದಿನ ಪೀಳಿಗೆ ರಕ್ಷಣೆಗಾಗಿ ಸಾವಯವ ಕೃಷಿ ಹಾಗೂ ಗೋ ಕೃಪಾಮೃತ ಬಳಕೆ ಮಾಡಬೇಕು ಎಂದರು. ಕಗ್ಗೊಡ ಗೋ ಶಾಲೆ ಪ್ರಮುಖ ತುಕಾರಾಮ ಪವಾರ ಪ್ರಾಚೀನ ಕೃಷಿಪದ್ಧತಿಯ ಪ್ರಾಮುಖ್ಯತೆ ತಿಳಿಸಿದರು. ಸಂಚಾಲಕ ಕಾಶೀನಾಥ ಮಡಿವಾಳ ಪ್ರಾಸ್ತವಿಕ ಮಾತನಾಡಿ ತಾಲೂಕನ ರೈತರ ಬೆಳವಣಿಗೆ ಪೂರಕವಾಗಿ ಸಂಘ ಹಲವಾರು ತರಬೇತಿ ಕಾರ್ಯಾಗಾರ ಯೋಜನೆ ಹಾಕಲಾಗಿದೆ ಎಂದರು. ಗ್ರಾಮ ಪಂಚಾಯತ ಉಪಾಧ್ಯಕ್ಷರು ಮಂಜುಳಾ ಹಣಮಂತ, ಗ್ರಾಮದ ಪ್ರಗತಿ ಪರ ನಾಗರೀಕರಾದ ಶಿವರಾಜ ಪಾಟೀಲ, ನಂದಿಕುಮಾರ ಪಾಟೀಲ್, ಮಲ್ಲಿಜಾರ್ಜುನ ಹಿತ್ತಲ ಇದ್ದರು.ತಾಲೂಕಿನ 400ಕ್ಕಿಂತ ಹೆಚ್ಚಿನ ರೈತರು ಭಾಗವಹಿಸಿ ಸದುಪಯೋಗ ಪಡೆದುಕೊಂಡರು.ವಿದ್ಯಾಸಗರ ಚಿಟ್ಟಾ ನಿರೂಪಿಸಿ, ಶಂಕರ ಜಡಾಲ ಸ್ವಾಗತಿಸಿ ಭೀಮರಾಯ ಸುಲೇಪೇಟ ವಂದಿಸಿದರು