ರೈತರು ಸಕಾಲದಲ್ಲಿ ಬಿತ್ತನೆ ಮಾಡಬೇಕು: ರಾಜಶೇಖರ ಪಾಟೀಲ

ಹುಮನಾಬಾದ್:ಜೂ.4: ರೈತರು ಸಕಾಲದಲ್ಲಿ ಬಿತ್ತನೆ ಮಾಡಿ ಉತ್ತಮ ಫಲವತ್ತಾದ ಬೆಳೆಗಳನ್ನು ಬೆಳಿಸಿಕೊಳ್ಳಬೇಕೆಂದು ಶಾಸಕ ರಾಜಶೇಖರ ಪಾಟೀಲ ಹೇಳಿದ್ದಾರೆ.

ಕೃಷಿ ಇಲಾಖೆಯಿಂದ ಹಮ್ಮಿಕೊಂಡಿದ್ದ ಸೋಯಾ ಬಿನ್ ವಿತರಣಾ ಕಾರ್ಯಕ್ರಮದಲ್ಲಿ ರೈತರಿಗೆ ಸೋಯಾ ಬಿನ್ ವಿತರಣೆ ಮಾಡಿ ಮಾತನಾಡುತ್ತಿದ್ದರು.

ರೈತರು ಈ ದೇಶದ ಬೆನ್ನಲಬು ಎನ್ನುತ್ತಾರೆ. ಆದರೆ ಸರ್ಕಾರ ರೈತರ ಬೆನ್ನು ಮಾತ್ರ ಇಟ್ಟಿದೆ. ಅದರಲ್ಲಿರುವ ಮೂಳೆಗಳನ್ನು ಹಾಳು ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು. ಈಗಾಗಲೇ ಜಿಲ್ಲೆಯ ರೈತರಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಿಲ್ ಪಾವತಿ ಮಾಡಿಲ್ಲ. ಸರ್ಕಾರ ರೈತರಿಗೆ ಕಬ್ಬಿನ ಬಿಲ್ ಪಾವತಿಸುವಲ್ಲಿ ವಿಫಲವಾಗಿದೆ. ರೈತ ವಿರೋಧಿ ಸರ್ಕಾರ ಇದಾಗಿದೆ ಎಂದು ಆರೊಪಿಸಿದ್ದಾರೆ.

ರೈತರು ಸಾಕಷ್ಟು ಸಂಕಷ್ಟದಲ್ಲಿದ್ದರು ಕೊಡಾ ಸರ್ಕಾರ ರೈತರ ನೇರವಿಗೆ ಬಾರದೇ ಇರುವದು ಇದು ನಮ್ಮೆಲ್ಲರ ದುರಾದೃಷ್ಠಕರ ಸಂಗತಿಯಾಗಿ ಹಾಗಾಗಿ ಮುಂಬರುವ ದಿನಗಳಲ್ಲಿ ಈ ಸರ್ಕಾರಕ್ಕೆ ರೈತರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕಾಳಸಂತೆಯಲ್ಲಿ ಸೋಯಾ ಬಿಜಗಳು ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದರೆ ಅಂಥವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಎಂದು ಎಚ್ಚರಿಸಿದರು. ರೈತರಿಗೆ ಉತ್ತಮವಾದ ಬೀಜಗಳನ್ನು ನೀಡಬೇಕು ಎಂದು ಅಧಿಕಾರಿಗಳಿಗೆ ತಾಕಿತು ಮಾಡಿದರು. ಈ ಸಂದರ್ಬದಲ್ಲಿ ಜಿಪಂ ಸದಸ್ಯ ಲಕ್ಷ್ಮಣರಾವ ಬುಳ್ಳಾ, ಪುರಸಭೆಯ ಸದಸ್ಯ ಅಫ್ಸರ್ ಮಿಯಾ, ಕೃಷಿಕ ಸಮಾಜ ಅಧ್ಯಕ್ಷ ವಿಶ್ವನಾಥ ಪಾಟೀಲ ಮಾಡಗೂಳ, ಸಹಾಯಕ ಕೃಷಿ ನಿರ್ದೇಶಕ ಡಾ. ಪಿ. ಮಲ್ಲಿಕಾರ್ಜುನ,, ತಾಲ್ಲೂಕು ಪಂಚಾಯತ ಇಓ ಡಾ. ಗೋವಿಂದ, ಧರ್ಮರಡ್ಡಿ. ಸೇರಿದಂತೆ ಅಪಾರ ಜನರಿದ್ದರು.