ರೈತರು ಬಿಳಿ ಜೋಳ ಬೆಂಬಲ ಬೆಲೆ ಪ್ರಯೋಜನ ಪಡೆದುಕೊಳ್ಳಿ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

ವಿಜಯಪುರ, ಏ.8-ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಿದ ಬಿಳಿ ಜೋಳವನ್ನು ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಣೆ ಮಾಡುವ ಉದ್ದೇಶವನ್ನು ಹೊಂದಿದ್ದು, ಜಿಲ್ಲೆಯ ರೈತರು ಈ ಬೆಂಬಲ ಬೆಲೆ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದ್ದಾರೆ.
ಸರ್ಕಾರವು 2020-21 ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಬಿಳಿಜೋಳ (ಮಾಲ್ದಂಡಿ ಹಾಗೂ ಹೈಬ್ರಿಡ್) ಖರೀದಿಸಲು ಉದ್ದೇಶಿಸಿ ಮಾಲ್ದಂಡಿ ಜೋಳ ಪ್ರತಿ ಕ್ವಿಂಟಲ್ಲಿಗೆ 2640 ರೂ. ಹಾಗೂ ಹೈಬ್ರಿಡ್ ಜೋಳಕ್ಕೆ ಪ್ರತಿ ಕ್ವಿಂಟಲ್‍ಗೆ 2620 ರೂ. ರಂತೆ ಬೆಂಬಲ ಬೆಲೆ ನಿಗದಿಪಡಿಸಲಾಗಿರುತ್ತದೆ.
ಈ ಖರೀದಿ ಮತ್ತು ಸಂಗ್ರಹಣೆಗಾಗಿ ಕರ್ನಾಟಕ ಆಹಾರ ನಾಗರಿಕ, ಸರಬರಾಜು ನಿಗಮಕ್ಕೆ ವಹಿಸಲಾಗಿದ್ದು, ಈ ನಿಗಮದವರು ಈಗಾಗಲೇ ಜಿಲ್ಲಾದ್ಯಂತ ಖರೀದಿ ಕೇಂದ್ರಗಳನ್ನು ತೆರೆದಿರುತ್ತಾರೆ. ನೊಂದಣಿಯನ್ನು ಎಪ್ರಿಲ್ 30 ರವರೆಗೆ ವಿಸ್ತರಿಸಿದ್ದು ರೈತರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಆದ್ದರಿಂದ ರೈತರು ಏಪ್ರಿಲ್ 30 ನೇ ತಾರೀಕಿನ ಒಳಗಾಗಿ ಆಯಾ ಸಂಗ್ರಹಣೆ ಕೇಂದ್ರಗಳನ್ನು ಸಂಪರ್ಕಿಸಿ ನೊಂದಣಿಯನ್ನು ಮಾಡಿಸಿ ಬಿಳಿ ಜೋಳವನ್ನು ನೀಡಬಹುದಾಗಿದೆ.
ವಿಜಯಪುರ-9845093631, ಬಸವನಬಾಗೇವಾಡಿ-8748007370, ಮುದ್ದೇಬಿಹಾಳ-8762355097, ಇಂಡಿ-7676630663 ಸಿಂದಗಿ-9740880080 ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕೆಎಫ್‍ಸಿಎಸ್‍ಸಿ ವಿಜಯಪುರ ಇವರನ್ನು ದೂರವಾಣಿ ಸಂಖ್ಯೆ-9448496016 ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ