ರೈತರು ಬಿಡಿಸಿ ರಾಶಿ ಹಾಕಿದ್ದ ಹತ್ತಿಗೆ ದುಷ್ಕರ್ಮಿಗಳಿಂದ ಬೆಂಕಿ

ಗಬ್ಬೂರ,ಏ.೦೩- ರೈತರು ನೈಸರ್ಗಿಕ ಕಾರಣಗಳಿಂದಾಗಿ ಸಂಕಷ್ಟದಲ್ಲಿರುವ ಕಾಲದಲ್ಲೇ ದುಷ್ಕರ್ಮಿಗಳೂ ಆಟವಾಡಿ ಬದುಕನ್ನು ಇನ್ನಷ್ಟು ಪ್ರಪಾತಕ್ಕೆ ತಳ್ಳುತ್ತಾರೆ.
ದೇವದುರ್ಗ ತಾಲೂಕಿನಲ್ಲಿ ನಡೆದಿರುವುದು ಇದೇ.ತಾಲೂಕಿನ ಹೀರೆರಾಯಕುಂಪಿ ಗ್ರಾಮದಲ್ಲಿ ರಾಶಿ ಹಾಕಲಾಗಿದ್ದ ಹತ್ತಿಗೆ ಕಿಡಿಗೇಡಿಗಳು ಕೊಳ್ಳಿ ಇಟ್ಟಿದ್ದು ದೊಡ್ಡ ಪ್ರಮಾಣದ ಹತ್ತಿ ಸುಟ್ಟ ಕರಕಲಾಗಿದೆ.
ನೀಲಕಂಠರಾಯ ಸೇರಿದ ಹತ್ತಿ ಇದಾಗಿದ್ದು,ಅವರು ಒಳ್ಳೆಯ ಬೆಲೆ ಬಂದಾಗ ಮಾರೋಣ ಎಂದು ಯೋಚಿಸಿ ಸಂಗ್ರಹಿಸಿಟ್ಟಿದ್ದರು.ಸುಮಾರು ೪೦೦ ಕ್ವಿಂಟಾಲ್ ಹತ್ತಿ ಬೆಂಕಿಗೆ ಸುಟ್ಟು ಭಸ್ಮವಾಗುತ್ತಿದಂತೆ ಗ್ರಾಮಸ್ಥರು ಮತ್ತು ಅಗ್ನಿ ಶಾಮಕದಳದವರು ಬೆಂಕಿ ಹಾರಿಸಿದರು.ಅದೃಷ್ಟವಶಾತ್ ೪೦೦ ಕ್ವಿಂಟಾಲ್ ಹತ್ತಿಯೊಳಗೆ ೨೦ ಕ್ವಿಂಟಾಲ್ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಈ ರೈತರು ಇತ್ತೀಚಿಗೆ ಹತ್ತಿ ಬಿಡಿಸಿ ಇಟ್ಟಿದ್ದರು.ಆದರೆ ಕುಸಿತ ಕುಸಿತ ಇರುವುದಿರಿಂದ ಒಳ್ಳೆಯ ಬೆಲೆ ಬಂದಾಗ ಮಾರೋಣ ಎಂದು ಒಂದು ಕಡೆ ಹತ್ತಿಯನ್ನು ಕೂಡಿಟ್ಟಿದ್ದರು. ೫೦ ಎಕರೆ ಹೊಲದಲ್ಲಿ ಬೆಳೆದ ಹತ್ತಿ ಸಂಗ್ರಹವಿತ್ತು.ಸುಮಾರು ೪೦೦ ಕ್ವಿಂಟಾಲ್ ಆಗಬಹುದು ಎಂದು ಅಂದಾಜಿಸಲಾಗಿದೆ.
ಭಾನುವಾರ ಒಂದು ಘಂಟೆ ಸುಮಾರಿಗೆ ಹತ್ತಿ ಏಕಾಏಕಿ ಬೆಂಕಿಗೆ ಅಲ್ಪ ಪ್ರಮಾಣದ ಆಹುತಿಯಾಗಿದೆ.ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿದಾದರೂ ಅಷ್ಟು ಹೊತ್ತಿಗೆ ೪೦೦ ಕ್ವಿಂಟಾಲ್ ಹತ್ತಿ ರಾಶಿಯೊಳಗೆ ೨೦ ಕ್ವಿಂಟಾಲ್ ಸುಟ್ಟು ಹೋಗಿತ್ತು.ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.