ರೈತರು ಬಡವರ ಕಲ್ಯಾಣರಾಗಿ ನಮೋ ಕಾರ್ಯ ಶ್ಲ್ಯಾಘನೀಯ- ಕಡಾಡಿ


ಮೂಡಲಗಿ,ಡಿ.26- ರೈತರ ಮತ್ತು ಬಡವರ ಕಲ್ಯಾಣಕ್ಕಾಗಿ ತಮ್ಮನ್ನು ತೊಡಗಿಸಿಕೊಂಡಿರುವ ನರೇಂದ್ರ ಮೋದಿಯವರು ದೇಶದ 9 ಕೋಟಿ ರೈತ ಬಂಧುಗಳಿಗೆ ರೂ. 18.000 ಸಾವಿರ ಕೋಟಿ ರೂ. ಗಳನ್ನು ರೈತರ ಬ್ಯಾಂಕ ಖಾತೆಗಳಿಗೆ ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ ಶ್ಲಾಘೀಸಿದ್ದಾರೆ.
ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಡಿ. 25 ರಂದು ಶ್ರೀ ಸತ್ಯಸಾಯಿ ಮಂದಿರದಲ್ಲಿ ಅಟಲ್ ಜೀ ಸ್ಮರಣೆ ಮತ್ತು ಕಿಸಾನ್ ಸನ್ಮಾನ್ ದಿನಾಚರಣೆಯನ್ನು ಮಾಜಿ ಪ್ರಧಾನಿ, ಅಜಾತಶತ್ರು. ದಿ ಅಟಲ್ ಬಿಹಾರಿ ವಾಜಪೇಯ ಭಾವಚಿತ್ರಕ್ಕೆ ಪೂಜೆ ಮತ್ತು ಪುಷ್ಪಾಂಜಲಿಯನ್ನು ಅರ್ಪಿಸಿ ಮಾತನಾಡಿ ಅವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೃಷಿಗೆ ಹೆಚ್ಚನ ಮಹತ್ವ ಕೊಟ್ಟು ಯುವಕರು ಕೃಷಿ ಕಡೆಗೆ ವಾಲುವಂತೆ ಪ್ರೋತ್ಸಾಹ ನೀಡುತ್ತಾರೆ, ಯುವಕರು ಕೃಷಿಗೆ ಆದ್ಯತೆ ಕೊಡುತ್ತಿದ್ದಾರೆಂದರು.
‘ಬೀಜ್-ಸೆ-ಬಜಾರ ತಕ್’ ಬಿತ್ತನೆ ಬೀಜದಿಂದ ಮಾರುಕಟ್ಟೆವರೆಗೆ ಎನ್ನುವ ಕೃಷಿ ಸುಧಾರಣೆಯ ಘೋಷಣೆಯ ಜೊತೆಗೆ ರೈತರ ಇಳುವರಿಗೆ ಉತ್ತಮ ದರ ನಿಗಧಿಪಡಿಸಿ 2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ. ಇತ್ತೀಚಿಗೆ ಕಬ್ಬು ಬೆಳೆಗಾರರಿಗೆ ತಾವು ಬೆಳೆದ ಉತ್ಪನ್ನಕ್ಕೆ ಸಕ್ಕರೆ ಕಾರ್ಖಾನೆಗಳು ಬಾಕಿ ಪಾವತಿಸದ ಕಾರಣ ದೇಶದ ಕಬ್ಬು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಬಾರದೆಂದು ರೂ.3500 ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದರು. ರೈತ ಮೋರ್ಚಾ ವತಿಯಿಂದ ಏರ್ಪಡಿಸಲಾಗಿದ್ದ ವಿಡಿಯೋ ಕಾನ್ಪರೆನ್ಸ್ ನೇರಪ್ರಸಾರದ ವೀಕ್ಷಣೆಯನ್ನು ರೈತರೊಂದಿಗೆ ವೀಕ್ಷಿಸಲಾಯಿತು ಎಂದರು.
ಕೃಷಿ ಜೊತೆಗೆ ತೋಟಗಾರಿಕೆ, ಹೈನಗಾರಿಕೆ, ಕುರಿ ಮತ್ತು ಕೊಳಿ ಸಾಕಾಣಿಕೆ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ಪ್ರಗತಿಪರ ರೈತರಾದ ಬಸವರಾಜ ಕಂಕಣವಾಡಿ, ಪ್ರಕಾಶ ಬಾಗೇವಾಡಿ, ಈಶ್ವರ ಬೆಳಕೂಡ, ಚಿದಾನಂದ ಕುಂದನವರ, ರಾಜು ಪರಕನಟ್ಟಿ, ಮಾರುತಿ ಮರಡಿ, ಶಂಕರ ಬಡಿಗೇರ, ಗೋಪಾಲ ತಹಶೀಲ್ದಾರ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಎಂದರು.
ಮುಖ್ಯಅತಿಥಿಗಳಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಡಾ|| ಮಲ್ಲಿಕಾರ್ಜುನ ಬಾಳಿಕಾಯಿ, ಕಾರ್ಯದರ್ಶಿ ಈರಣ್ಣ ಅಂಗಡಿ, ಕೃಷಿ ವಿಜ್ಞಾನ ಕೇಂದ್ರ ತುಕ್ಕಾನಟ್ಟಿ ಕೃಷಿ ತಜ್ಞರಾದ ಮಾರುತಿ ಮಾಲವಾಡಿ, ಆನಂದ ಮೂಡಲಗಿ, ತಮ್ಮಣ್ಣ ದೇವರ ಸೇರಿದಂತೆ ರೈತ ಮೋರ್ಚಾ ಪದಾಧಿಕಾರಿಗಳು, ರೈತರು, ಕೃಷಿ ಕಾರ್ಮಿಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು. ಪರಪ್ಪ ಗಿರೆಣ್ಣವರ ಸ್ವಾಗತಿಸಿದರು. ಶಂಕರ ಗೋರೋಶಿ ಕಾರ್ಯಕ್ರಮ ನಿರೂಪಿಸಿದರು. ಸುರೇಶ ಮಠಪತಿ ವಂದಿಸಿದರು.