ರೈತರು ಬಗರಹುಕುಂ ಸಾಗುವಳಿ ಮಾಡುತ್ತ ಬಂದಿರುವ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯ

ವಿಜಯಪುರ, ಜು.30-ಕರ್ನಾಟಕ ರೈತ ಪ್ರಾಂತ ಸಂಘ ಎ.ಐ.ಕೆ.ಎಸ್.(ಜನವಾದಿ ಮಹಿಳಾ ಸಂಘ) ಹಾಗೂ ಭಾರತಿಯ ದಲಿತ ಪ್ಯಾಂಥರ ವತಿಯಿಂದ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ರಿ.ಸ.ಸಂ. 221 ಇದರಲ್ಲಿ 55 ಜನ ಸುಮಾರು ದಿವಸ ಬಗರಹುಕುಂ ಸಾಗುವಳಿ ಮಾಡುತ್ತ ಬಂದಿರುವ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಜಿಲ್ಲಾಧಿಕಾರಿಗಳಾದ ವಿಜಯಮಹಾಂತೇಶ ದಾನಮ್ಮನವರಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ಸಂಘ ರಾಜ್ಯ ಉಪಾಧ್ಯಕ್ಷ ಭೀಮಶಿ ಕಲಾದಗಿ ಮಾತನಾಡಿ ತಹಶೀಲ್ದಾರ ಸಾಹೇಬರು ನಿಡಗುಂದಿ ಸದರಿ ಜಾಗ ಅರಣ್ಯ ಇದ್ದು ಈಗ ಇದನ್ನು ಯುಕೆಪಿಗೆ ಸೇರಿಸಿದ್ದಾರೆಂದು ತಿಳಿಸಿದ್ದಾರೆ. ಸರಕಾರ ಕಂದಾಯ ಹೋಗಿ ಅರಣ್ಯ ಇದ್ದು ಕಂದಾಯ ಇಲಾಖೆಗೆ ಪರಿವರ್ತನೆ ಹೊಂದಿದೆ ಅಂತಾ ಹೇಳಿಕೊಟ್ಟಿದ್ದಾರೆ. 50 ಜನರು ಪಾರ್ಮ ತುಂಬಿದ್ದೇವೆ. ಪುನರ ವಿಮರ್ಶೆ ಮಾಡಿ ಹಕ್ಕು ಪತ್ರವನ್ನು ಕೊಡಬೇಕು. ಅರ್ಜಿದಾರರು ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದ ಸ.ನಂ. 221ರ 109 ಎಕರೆ 34 ಗುಂಟೆ ಅರಣ್ಯ ಪ್ರದೇಶ ಅಂತಾ ಇದ್ದು ಇದಕ್ಕೆ ಪೂರ್ವವಾಗಿ ಕಂದಾಯ ಇಲಾಖೆಗೆ ಸೇರಿದ್ದು ಇತ್ತು. ಈ ಭೂಮಿಯನ್ನು 55 ದಲಿತರು ಹಿಂದುಳಿದವರು 2 ಎಕರೆ ಅಂತೆ ಸುಮಾರು ವರ್ಷಗಳಿಂದ ಬಗರಹುಕುಂ ಸಾಗುವಳಿ ಮಾಡುತ್ತ ಇದ್ದರು.
ನಮ್ಮನ್ನು ಒಕ್ಕಲೆಬಿಸಿದ್ದು ಪೋಲಿಸ ಕೇಸ್ ಎಸ್.ಎಲ್. 495/16 ಕೇಸು ಹಾಕಿದರು. ಕೇಸು ನಡೆದು ನಿಕಾಲೆಯಾಯಿತು. ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ 500 ಎಕರೆ ಆರಣ್ಯ ಇಲಾಖೆ ಇದ್ದುದರಲ್ಲಿ ಸ.ನಂ.221 ಕ್ಷೇತ್ರ 109 ಎಕರೆ 34 ಗುಂಟೆ ಇದರಲ್ಲಿ ನಾವು 55 ಜನಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಹಿಂದುಳಿದವರು ಕಬ್ಜಾ ವಹಿವಾಟುಗಳ ದಾಖಲೆಗಳಿರುತ್ತವೆ. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಈ ಸ್ಥಳಕ್ಕೆ ಬಂದು ಭೇಟಿ ನೀಡಿ ರೈತರ ಪೋಟೋ ಸಮೇತವಾಗಿರುವ ವರದಿಯನ್ನು ಮಾನ್ಯ ತಹಶೀಲ್ದಾರ ಸಾಹೇಬರಿಗೆ ಸಲ್ಲಿಸಿರುತ್ತಾರೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಅರ್ಜಿಯೊಂದಿಗೆ ಲಗತ್ತಿಸಲಾಗಿರುತ್ತದೆ. ಎಲ್ಲಾ ದಾಖಲೆಗಳನ್ನು ಪರಿಶೀಲನೆ ಮಾಡಿ ಅಕ್ರಮಸಕ್ರಮ ಕಲಂದಿಂದ ಸಕ್ರಮಗೊಳಿಸಿ ಹಕ್ಕುಪತ್ರ ಕೊಡಬೇಕೆಂದು ವಿನಂತಿ.
ಭಾರತೀಯ ದಲಿತ ಪ್ಯಾಂಥರ ರಾಜ್ಯ ಉಪಾಧ್ಯಕ್ಷ ಬಸವರಾಜ ಗುಡಿಮನಿ ಮಾತನಾಡಿ ಹಕ್ಕು ಪತ್ರ ಕೊಡದೆ ಇದ್ದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಕಂದಾಯ ನಿರೀಕ್ಷಕರು ಸ್ಥಳಕ್ಕೆ ಬಂದು ಭೇಟಿ ನೀಡಿ ರೈತರ ಪೋಟೋ ಸಮೇತವಾಗಿರುವ ವರದಿಯನ್ನು ಮಾನ್ಯ ತಹಶೀಲ್ದಾರರ ಸಾಹೇಬರರಿಗೆ ಸಲ್ಲಿಸಿದ್ದೇವೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದರು.
ಈ ಸಂದರ್ಭಧಲ್ಲಿ ಭೀಮಪ್ಪ ಮಾದರ, ಲಾಲಸಾಬ ಮ್ಯಾಗೇರಿ, ಯಮನಪ್ಪ ಮಾದರ, ¥ವಡೆಪ್ಪಮಾದರ, ನಿಜಪ್ಪ ಮಾದರ ಮುಂತಾದವರು ಉಪಸ್ಥಿತರಿದ್ದರು.