ಕಲಬುರಗಿ,ಜೂ.8-ಸರಿಯಾಗಿ ಮಳೆ, ಬೆಳೆ ಇದ್ದಾಗ ಮಾತ್ರ ರೈತರು ನೆಮ್ಮದಿಯಿಂದ ಇರಲು ಸಾಧ್ಯ ಎಂದು ಚವದಾಪುರಿ ಹಿರೇಮಠದ ರಾಜಶೇಖರ ಶಿವಾಚಾರ್ಯರು ಹೇಳಿದರು.
ಇಲ್ಲಿನ ಭವಾನಿ ನಗರದ ರಿಂಗ್ ರಸ್ತೆಯಲ್ಲಿರುವ ಲಿಂ: ಶ್ರೀ ಗುರು ಚನ್ನವೀರೇಶ್ವರ ಶಿವಾನುಭವ ಮಂಟಪದಲ್ಲಿ ಜರುಗಿದ ಕೃಷಿ ಪಂಡಿತರು, ರೈತ ವಿಜ್ಞಾನಿ ಪ್ರಶಸ್ತಿ ಪುರಸ್ಕøತರು ಹಾಗೂ ಕಾಯಕಯೋಗಿಗಳಾದ ಗುರುಪಾದಲಿಂಗ ಮಹಾಶಿವಯೋಗಿಗಳವರ 54ನೇ ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಮುಂಗಾರು ಕೃಷಿ ಹಬ್ಬದ ಸಾನಿಧ್ಯವಹಿಸಿ ಅವರು ಮಾತನಾಡಿದ ಅವರು, ದೇಶದಲ್ಲಿ ರೈತರು ಸರಿಯಾಗಿ ಇದ್ದರೆ ನಾವೆಲ್ಲರೂ ಸರಿಯಾಗಿ ಇರಲು ಸಾಧ್ಯ. ಯಾಕೆಂದರೆ ರೈತನು ದೇಶದ ಬೆನ್ನೆಲುಬು ಆದರೆ ಸರಿಯಾಗಿ ಮಳೆ-ಬೆಳೆ ಇಲ್ಲದ ಕಾರಣ ರೈತರು ಬಹಳ ಸಂಕಷ್ಟದಲ್ಲಿದ್ದಾರೆ. ಹೇಳುವುದು ಮಾತ್ರ ದೇಶದ ಬೆನ್ನೆಲುಬು ಆದರೆ ರೈತನ ಕಷ್ಟ ರೈತನಿಗೆ ಮಾತ್ರ ಗೊತ್ತು. ಯಾವುದೇ ಸರಕಾರ ಬಂದರು ರೈತರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಅವರ ಬಗ್ಗೆ ಕಾಳಜಿ ವಹಿಸಿ ಅವರ ಕಷ್ಟದ ಬಗ್ಗೆ ಅರ್ಥಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಂಗವಾಗಿ ಸಿರಿಧಾನ್ಯ ವಿತರಣೆ, ಸಸಿ ವಿತರಣೆ, ಪ್ರಗತಿಪರ ರೈತರಿಗೆ ಹಾಗೂ ಎಸ್‍ಎಸ್‍ಎಲ್‍ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಜರಗಿತು.
ಸಮ್ಮುಖ ವಹಿಸಿದ ರಟಕಲ್‍ನ ಸಿದ್ಧರಾಮ ಮಹಾಸ್ವಾಮಿಗಳ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶರಣಸಿರಸಿಯ ಸಿದ್ಧರಾಮ ದೇವರು ಉಪಸ್ಥಿತರಿದ್ದರು.
ಹಿರಿಯ ಮುಖಂಡರಾದ ಬಸವರಾಜ್ ಮುನ್ನಳ್ಳಿ , ಡಿಸಿಸಿ ಬ್ಯಾಂಕ್ ನಿರ್ದೇಶಕÀ ಶರಣಬಸಪ್ಪ ಪಾಟೀಲ್ ಅಷ್ಟಗಿ, ಪಾಲಿಕೆ ಸದಸ್ಯ ಪ್ರಭುಲಿಂಗ ಹಾದಿಮನಿ, ಪ್ರಮುಖರಾದ ಶಿವಶರಣಯ್ಯ ಸ್ವಾಮಿ, ಚನ್ನವೀರಯ್ಯ ಹಿರೇಮಠ್, ಶಾಂತಯ್ಯ ಹಿರೇಮಠ್, ಗೋರಖನಾಥ್ ಶಕಾಪುರೆ, ಸಿದ್ರಾಮಪ್ಪ ಸೊರಡೆ, ರೇವಣಸಿದ್ದಪ್ಪ ಉಡಗಿ, ಸುಭಾಷ್ ಓಗಿ, ಅನಿಲಕುಮಾರ ಕುದಮೂಡ್, ವಸಂತ ಜಾಧವ್, ಹಣಮಂತರಾಯ್ ಅಟ್ಟೂರ, ಸಂಗಮೇಶ ಮುನ್ನಳ್ಳಿ , ಶಾಂತು ದುಧನಿ, ಪತ್ರಕರ್ತರಾದ ಅಂಬಾರಾಯ ಎಮ್ ಕೋಣೆ, ಶಾಂತಕುಮಾರ್ ಹೂಗಾರ್ ಅವರು ಅಲ್ಲದೆ ಶ್ರೀ ಮಠದ ಸಕಲ ಸದ್ಭಕ್ತರು ಉಪಸ್ಥಿತರಿದ್ದರು.