ರೈತರು ಟಾಟಾ ಬಿರ್ಲಾರಂತೆ ಕೃಷಿ ಉದ್ದಿಮೆದಾರರಾಗಬೇಕು:ಡಾ. ಪಿ. ಎಲ್. ಪಾಟೀಲ

ವಿಜಯಪುರ,ಡಿ. 21:ರೈತರಿಗೆ ಸಕಾಲದಲ್ಲಿ ಅಗತ್ಯ ನೆರವು, ಬೆಳೆ ಬೆಳೆಯಲು ತಾಂತ್ರಿಕ ಸಲಹೆ ನೀಡಿದರೆ ಅವರೂ ಕೂಡ ಉತ್ತಮ ಇಳುವರಿ ಪಡೆದು ಲಾಭಗಳಿಸಿ, ಟಾಟಾ ಬಿರ್ಲಾರಂತೆ ಕೃಷಿ ಉದ್ಯಮದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ ಎಂದು ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ. ಎಲ್. ಪಾಟೀಲ ಹೇಳಿದರು. ಅವರಿಂದು ನಗರದ ಹೊರವಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜಯಪುರ ಮತ್ತು ಇಂಡಿ ಕೃಷಿ ವಿಜ್ಞಾನ ಕೇಂದ್ರಗಳ ಕ್ರಮವಾಗಿ 25 ಮತ್ತು 5ನೇಯ ವೈಜ್ಞಾನಿಕ ಸಲಹಾ ಸಮಿತಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೃಷಿಯಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿ ತಲೆದೋರಿದೆ, ಕೃಷಿ, ತೋಟಗಾರಿಕೆ ಬೆಳೆಗಳಲ್ಲಿ ಅಧಿಕ ಕೀಟರೋಗ ಬಾಧೆ, ಮಣ್ಣಿನಲ್ಲಿ ಅಗತ್ಯ ಪೋಷಕಾಂಶÀಗಳ ಕೊರತೆ ಇತ್ಯಾದಿ ಸಮಸ್ಯೆಗಳಿಂದಾಗಿ ಅಧಿಕ ಇಳುವರಿ ಪಡೆಯಲು ಸಾಧ್ಯವಾಗುತ್ತಿಲ್ಲ. ಕೃಷಿ ವಿಜ್ಞಾನಿಗಳು ಹಾಗೂ ಕೃಷಿ ಹಾಗೂ ಕೃಷಿ ಸಂಬಂಧಿ ಇಲಾಖೆ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು ಎಂದರು.

ಜಿಲ್ಲೆಯಲ್ಲಿ ಎರಡು ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗಾಗಿಯೇ ಸೇವೆ ಸಲ್ಲಿಸುತ್ತಿದ್ದು, ಕಬ್ಬು, ತೊಗರಿ, ಕಡಲೆ, ಜೋಳ, ಗೋಧಿ, ಅಜವಾನ ಇತ್ಯಾದಿ ಕೃಷಿ ಬೆಳೆಗಳು ದ್ರಾಕ್ಷಿ, ಲಿಂಬೆ, ಬಾಳೆ, ದಾಳಿಂಬೆ ಹಾಗೂ ತರಕಾರಿ ಬೆಳೆಗಳ ಕುರಿತು ಕ್ಷೇತ್ರ ಪರಿಶೀಲನಾ ಪ್ರಯೋಗಗಳು, ಮುಂಚೂಣಿ ಪ್ರಾತ್ಯಕ್ಷಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ. ಜಿಲ್ಲೆಯ ರೈತರ ಅಗತ್ಯತೆಗೆ ಸಂಬಂದಪಟ್ಟಂತೆ ವಿವಿಧ ವಿಷಯಗಳಲ್ಲಿ ಹಾಗೂ ಉಪಕಸಬುಗಳಾದ ಕೊಳಿ, ಕುರಿಸಾಕಣಿ, ಹೈನುಗಾರಿಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದಾರೆ. ರೈತರು ಇದರ ಲಾಭ ಪಡೆಯಬೇಕೆಂದು ತಿಳಿಸಿದರು.

ವಿಸ್ತರಣಾ ನಿರ್ದೇಶಕ ಡಾ. ಎಸ್. ಎಸ್. ಅಂಗಡಿ ಮಾತನಾಡಿ, ಜಿಲ್ಲೆಯು ಒಣಪ್ರದೇಶವಾಗಿದ್ದು, ಈಗ ನೀರಾವರಿ ಸೌಲಭ್ಯಕ್ಕೊಳಪಟ್ಟಿರುವದರಿಂದ ವಿವಿಧ ಪದ್ಧತಿಗಳಾದ ಮೇಲ್ಮೈ, ಹನಿ, ತುಂತುರು ನೀರಾವರಿಯ ತುಲನಾತ್ಮಕ ಪ್ರಯೋಗ ಮಾಡಬೇಕು, ಕಬ್ಬಿನಲ್ಲಿ ಉರಿಮಲ್ಲಿಗೆ ಸಮಸ್ಯೆ, ಅಜವಾನ ಬೆಳೆಯ ಸಾಗುವಳಿ ಕ್ರಮಗಳು ದ್ರಾಕ್ಷಿ ಮತ್ತು ಲಿಂಬೆಯಲ್ಲಿ ನಿಖರ ನೀರಾವರಿ, ತೋಟಗಾರಿಕೆ ಬೆಳೆಗಳಲ್ಲಿ ಚಾಟನಿ ಮಾಡುವ ಸಮಯ ಕುರಿತಂತೆ ಮಾಹಿತಿ ಒದಗಿಸಲು ಸಲಹೆ ನೀಡಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಜಂಟಿ ಕೃಷಿ ನಿರ್ದೇಶಕ ಡಾ. ವಿಲಿಯಮ್ ರಾಜಶೇಖರ, ತೋಟಗಾರಿಕೆ ಉಪ ನಿರ್ದೇಶಕ ಡಾ. ರಾಹುಲ್ ಭಾವಿದೊಡ್ಡಿ ಅವರು, ಇಲಾಖೆಯಿಂದ ಸಿಗುವ ಅಗತ್ಯ ಸಲಕರಣೆ, ಸೌಲಭ್ಯ ಕುರಿತು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಇಂಡಿ ಹಾಗೂ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದಿಂದ ವಿವಿಧ ವಿಷಯಗಳ 12 ವಿಸ್ತರಣಾ ಹಸ್ತ ಪ್ರತಿಗಳನ್ನು ಗಣ್ಯರು ಬಿಡುಗಡೆಗೊಳಿಸಿದರು.

ಈ ಸಭೆಯಲ್ಲಿ ಕೃಷಿ ಮಹಾವಿದ್ಯಾಲಯದ ವಿದ್ಯಾಧಿಕಾರಿ ಡಾ. ಎ. ಭೀಮಪ್ಪ, ಅಟಾರಿ ಬೆಂಗಳೂರು ಪ್ರತಿನಿಧಿ ಡಾ. ಕೋಳೆಕರ, ಕೆ.ವ್ಹಿ.ಕೆ ನೋಡಲ್ ಅಧಿಕಾರಿ ಡಾ. ಪಿ. ನಾಗರಾಜು, ಸಹ ವಿಸ್ತರಣಾ ನಿರ್ದೇಶಕ ಡಾ. ರವೀಂದ್ರ ಬೆಳ್ಳಿ, ಸಹ ಸಂಶೋಧನಾ ನಿರ್ದೇಶಕ ಡಾ. ಅಶೋಕ ಸಜ್ಜನ, ನಬಾಡ್ರ್À ಜಿಲ್ಲಾ ವ್ಯವಸ್ಥಾಪಕ ವಿಕಾಸ ರಾಠೋಡ, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸಿದ್ದು ಪೂಜಾರಿ, ಪ್ರಗತಿಪರ ರೈತರಾದ ಸಿದ್ದಪ್ಪÀ ಭೂಸಗೊಂಡ, ರಾಘವೇಂದ್ರ ಕೊಡಹೊನ್ನ, ಇಂಡಿ ಹಾಗೂ ವಿಜಯಪುರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಸೇರಿದಂತೆ ಜಿಲ್ಲೆಯ ಸಲಹಾ ಸಮಿತಿಯ ಸದಸ್ಯರುಗಳು, ವಿವಿಧ ಇಲಾಖೆಗಳ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.

ವಿಜಯಪುರ ಹಿರಿಯ ವಿಜ್ಞಾನಿ ಡಾ. ಎಸ್. ಎಮ್. ವಸ್ತ್ರದ ಸ್ವಾಗತಿಸಿದರು. ಇಂಡಿ ಹಿರಿಯ ವಿಜ್ಞಾನಿ ಡಾ. ಶಿವಶಂಕರಮೂರ್ತಿ ವಂದಿಸಿದರು.