ರೈತರು ಜಾನುವಾರುಗಳಿಗೆ ಮಕ್ಕಳಂತೆ ಪೋಷಣೆ ಮಾಡಬೇಕು- ಇಮಾಮಸಾಬ

ಸಿರವಾರ.ಅ.೩೧- ರೈತರೊಂದಿಗೆ ದಿನ ನಿತ್ಯ ಹೊಲ ಗದ್ದೆಗಳಲ್ಲಿ ದಣಿವಿಲ್ಲದೆ ದುಡಿಯುವ ಜಾನುವಾರುಗಳಿಗೆ ರೋಗ ನಿಯಂತ್ರಣ ತಡೆಯಲು ಈ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಈ ಲಸಿಕೆಯನ್ನು ವರ್ಷದಲ್ಲಿ ಎರಡು ಬಾರಿ ನೀಡಲಾಗುತ್ತದೆ ಇದು ಮಹತ್ವದ ಕಾರ್ಯಕ್ರಮವಾಗಿದ್ದು ಕಾಲು ಮತ್ತು ಬಾಯಿ ರೋಗ ಬಂದಾಗ ವೈದ್ಯಾರನ್ನು ಕಂಡು ಸಮಯಕ್ಕೆ ಸರಿಯಾಗಿ ಲಸಿಕೆಯನ್ನು ನೀಡುವದು ಮುಖ್ಯವಾಗಿದೆ ಎಂದು ನಾಗಡದಿನ್ನಿ ಪಶು ವೈದ್ಯಕೀಯ ಪರೀಕ್ಷಕರು ಇಮಾಮಸಾಬ ಹೇಳಿದರು.
ಸಮೀಪದ ನಾಗಡದಿನ್ನಿಗ್ರಾಮದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ನಡೆದ ಲಸಿಕಾ ಅಭಿಯಾನದಲ್ಲಿ ಮಾತನಾಡುತ್ತಾ ಪಶುವೈದ್ಯರು ಮನೆಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ತಪ್ಪದೇ ಲಸಿಕೆ ಹಾಕಿಸಬೇಕು ಎಂದರು.
ಕ್ಯಾದಿಗ್ಗೇರಾ ಪಶು ವೈದ್ಯಾಧಿಕಾರಿ ತಂಡದ ಮುಖ್ಯಸ್ಥರು ಡಾ.ಪ್ರಕಾಶ್ ಮಾತನಾಡಿ ಆರ್ಥಿಕ ಸಂಕಷ್ಟವನ್ನು ತಂದೊಡ್ಡುವ ಕಾಲುಬಾಯಿ ರೋಗ ವನ್ನು ನಿಯಂತ್ರಿಸಿ ನಿರ್ಮೂಲನೆ ಮಾಡಲು ಆರು ತಿಂಗಳಿಗೊಮ್ಮೆ ವಿರುದ್ಧ ಲಸಿಕೆಹಾಕಿಸುವುದೊಂದೇ ಪರಿಹಾರ ಮಾರ್ಗವಾಗಿದೆ ತಮ್ಮ ತಮ್ಮ ಗ್ರಾಮಗಳಿಗೆ ಭೇಟಿ ನೀಡುವ ಲಸಿಕೆ ಸಿಬ್ಬಂದಿಗೆ ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಹೇಳಿದರು. ಆಲ್ಕೋಡ್ ಪಶು ವೈದ್ಯಾಧಿಕಾರಿ ಡಾ. ಸಿದ್ದಪ್ಪ ಚವ್ಹಾಣ ಪಶು ವೈದ್ಯಕೀಯ ಪರೀಕ್ಷಕರು ಖಾಜಾಸಾಬ ಆಲ್ಕೋಡ್ ,ಕೆ. ಆರ್. ಚೌದ್ರಿ ಜಾಡಲದಿನ್ನಿ, ಇಲಾಖೆಯ ಸಿಬ್ಬಂದಿ ದೇವರಾಜು, ಉಸ್ಮಾನ್ ಅಲಿ ನಾಗಡದಿನ್ನಿ, ಅಮರೇಶ ಗೌಡ,ರಹೀಂ ಪಾಶ ಹವಲ್ದಾರ, ಸೋನು ಅರಕೇರಾ ಸೇರಿದಂತೆ ರೈತರು ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.