ರೈತರು, ಕೂಲಿ ಕಾರ್ಮಿಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಡಿ 11 ರಿಂದ ತಾ.ಪಂ ಎದುರುಗಡೆ ಅನಿರ್ಧಿಷ್ಠಾವಧಿ ಧರಣಿ

ಆಳಂದ:ಡಿ.9:ರೈತ ಹಾಗೂ ಕೂಲಿ ಕಾರ್ಮಿಕರ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಿಸಾನ ಸಭಾ ತಾಲ್ಲೂಕು ಘಟಕ ಹಾಗು ಭಾರತ ಖೇತ ಮಜದುರ ಊನಿಯನ್ ಆಶ್ರಯದಲ್ಲಿ ತಾಲ್ಲೂಕಿನ ಪಡಸಾವಳಿ ಗ್ರಾಮ ಪಂಚಾಯತ ಎದುರು ಪ್ರತಿಭಟನೆ ನಡೆಸಿ ಜೀಪ ಜಾಥಾಕ್ಕೆ ಚಾಲನೆ ನೀಡಲಾಯಿತು. ಡಿ 7 ರಿಂದ 10 ರ ವರೆಗೆ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತ ಎದುರು ಸರಣಿ ಪ್ರತಿಭಟನೆ ಕೈಗೊಂಡು ಜೀಪ ಜಾಥಾ ನಡೆಸುತ್ತಿದ್ದು. ಅಧಿಕಾರಿಗಳು ಬೇಡಿಕೆಗೆ ಸ್ಪಂದಿಸದಿದ್ದಲ್ಲಿ ಡಿ 11 ರಂದು ತಾಲ್ಲೂಕು ಪಂಚಾಯತ ಎದುರು ಅನಿರ್ಧಿಷ್ಟಾªಧಿ ಧರಣಿ ನಡೆಸಲಾಗುವುದು ಎಂದು ಕಿಸಾನ ಸಭಾ ಜಿಲ್ಲಾ ಅಧ್ಯಕ್ಷ ಮೌಲಾ ಮುಲ್ಲಾ ಅವರು ಹೇಳಿದರು.

ಪಡಸಾವಳಿ ಗ್ರಾಮ ಪಂಚಾಯತ ಸೇರಿದಂತೆ ಇನ್ನೂ ಳಿದ ಕಡೆ ಉದ್ಯೋಗ ಖಾತ್ರಿಯಲ್ಲಿ ಭಾರೀ ಪ್ರಮಾಣ ಭ್ರಷ್ಟಾಚಾರ ನಡೆದಿದೆ. ಆದರೆ ಕಾಮಗಾರಿ ವಾಸ್ತವ್ಯದಲ್ಲಿ ವೈಜ್ಞಾನಿಕವಾಗಿ ನಡೆದಿಲ್ಲ. ಈ ಕುರಿತು ವಿಶೇಷ ತನಿಖಾಧಳದಿಂದ ತನಿಖೆ ನಡೆಸಬೇಕು. ಈ ಹಂಗಾಮಿನಲ್ಲಿ ಗ್ರಾಮ ಪಂಚಾಯತನಿಂದ ರೈತರ ಹೋಲದಲ್ಲಿ ನಮ್ಮ ಹೋಲ ನಮ್ಮ ರಸ್ತೆ, ಬದು ನಿರ್ಮಾಣ, ಕೃಷಿ ಹೋಂಡ, ದನದ ಕೊಟ್ಟಿಗೆ ಕಾಮಗಾರಿಗಕಳನ್ನು ಮಾಡಲು ಹಲವು ಭಾರಿ , ಗ್ರಾಮ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತ ಅಧಿಕಾರಿಗಳಿಗೆ ಮನವಿ ಮಾಡಿದರೆ ಸ್ಪಂದಿಸದೇ ಕಳಪೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ದೂರಿದರು. ತಾಲ್ಲೂಕಿನ ಹಲವು ಗ್ರಾಮ ಪಂಚಾಯತಿಗಳಲ್ಲಿ ಉದ್ಯೋಗ ಖಾತ್ರಿ ವ್ಯವಹಾರ ಕಳಪೆ ಕಾಮಗಾರಿ ಕೈಗೊಂಡು ಹಣ ಲಪಟಿಸಲಾಗಿದೆ. ಅಧಿಕಾರಿಗಳು ಸ್ಪಂದಿಸುತ್ತಿಲ್ಲ, ಇದರಲ್ಲಿ ಜನಪ್ರತಿನಿಧಿಗಳು ಕೂಡಾ ಶಾಮೀಲು ಆಗಿದ್ದಾರೆಂದು ಆರೋಪಿಸಿದರು. ಹಳ್ಳಿಗಳಲ್ಲಿ ಪಂಪ್ ಸೆಟಗಳು ಮೋಟಾರಗಲು ಪದೇ ಪದೇ ಸುಟ್ಟು ರೈತರು ಸಂಕಷ್ಟಕ್ಕೆ ಈಡಾಗಿದ್ದಾರೆ. ಅಕ್ರಮ ಸಕ್ರಮ ಪದ್ಧತಿ ರದ್ದು ಪಡಿಸಿ ನೇರವಾಗಿ ಅರ್ಜಿದಾರರ ಪರಿಗಣಿಸಿ ಪಂಪ್ ಸೇಟಗಲಿಗೆ ಒಪ್ಪಿಗೆ ಕೊಡಬೇಕೆಂದು ಹೇಳಿದರು.

ಈ ಪ್ರತಿಭಟನೆಯಲ್ಲಿ ಮಲ್ಲಿನಾಥ ಯಲ್ಲಶಟ್ಟಿ, ಚಂದ್ರಕಾಂತ ಕೋಬ್ಬರೆ , ಮೈಲಾರಿ ಜೋಗೆ ಮಾತನಾಡಿದರು. ವಿಶ್ವನಾಥ ಜಮಾದಾರ, ರಮೇಶ ಹತ್ತಾಗಳೆ, ಅಲ್ತಾಪ ನಾಕೇದಾರ, ಅಶಪಾಕ್ ಮುಲ್ಲಾ, ಇತರೆ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದರು. ನಂತರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಅನುಸೂಯಾ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.