ರೈತರು ಕಡಿಮೆಖರ್ಚಿನಲ್ಲಿ ದ್ವಿದಳಧಾನ್ಯಗಳನ್ನು ಬೆಳೆದು ಅಧಿಕ ಲಾಭ ಹೊಂದಲು ಕರೆ

ಕುರುಗೋಡು.ನ.10 : ಪ್ರತಿಯೊಬ್ಬ ರೈತರು ಕಡಿಮೆ ಖರ್ಚಿನಲ್ಲಿ ಬೆಳೆಯುವ ತೊಗರಿ, ನವಣೆ, ಸಜ್ಜೆ, ಜೋಳ, ಹಲಸಂದಿ, ಹುದ್ದು, ರಾಗಿ ಸೇರಿದಂತೆ ಇತರೆ ದ್ವಿದಳ ದಾನ್ಯಗಳನ್ನು ಬೆಳೆದು ಅಧಿಕಲಾಭಹೊಂದಬೇಕೆಂದು ಕ್ರುಷಿ ಇಲಾಖೆಯ ಬಳ್ಳಾರಿ ಸಹಾಯಕ ನಿರ್ದೆಶಕ ಪಾಲಾಕ್ಷಗೌಡ ರೈತರಿಗೆ ಸಲಹೆ ನೀಡಿದರು.
ಅವರು ಸೋಮವಾರ ಪಟ್ಟಣದ ಸಿಂದಿಗೇರಿರಸ್ತೆಯಲ್ಲಿನ ರೈತ ಮಹಮ್ಮದ್‍ಭಾಷ ರವರ ತೊಗರಿಬೆಳೆಯಲ್ಲಿ ಕ್ರುಷಿ ಇಲಾಖೆ ಬಳ್ಳಾರಿ ಇವರ ನೇತ್ರುತ್ವದಲ್ಲಿ 2020-21 ನೇ ಸಾಲಿನ ರಾಷ್ರೀಯ ಆಹಾರ ಭದ್ರತಾ ಯೋಜನೆಅಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ತೊಗರಿಬೆಳೆ ಮತ್ತು ನವಣೆ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕ್ರುಷಿ ಇಲಾಖೆಯಲ್ಲಿ ಸಹ ರೈತರಿಗೆ ರಿಯಾಯಿತಿ ಧರದಲ್ಲಿ ಅನೇಕ ಸೌಲಭ್ಯಗಳು ಲಭ್ಯವಿದ್ದು, ಆ ಸೌಲಭ್ಯಗಳನ್ನು ಉಪಯೋಗಿಸಿಕೊಳ್ಳುವಂತೆ ತಿಳಿಸಿದರು.
ಕುರುಗೋಡು ಕ್ರುಷಿ ಅಧಿಕಾರಿ ಎಂ. ದೇವರಾಜ್ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಉತ್ತಮಮಳೆಯಾಗಿದ್ದು, ರೈತರ ಬೆಳೆಗಳು ಹಚ್ಚಹಸಿರಿನಿಂದ ಸಮ್ರದ್ದವಾಗಿ ಬೆಳೆದಿವೆ. ಇದಕ್ಕೆ ಸಿಂದಿಗೇರಿರಸ್ತೆಯಲ್ಲಿ ಕೆಂಪುಪ್ರದೇಶದ 700 ಎಕರೆ ಪ್ರದೇಶದಲ್ಲಿ ಬೆಳೆಯಲಾದ ತೊಗರಿಬೆಳೆಗಳೇ ಇದಕ್ಕೆ ತಾಜಾಉದಾಹರಣೆಯಾಗಿವೆ. ಆದ್ದರಿಂದ ರಾಷ್ರೀಯ ಆಹಾರ ಭದ್ರತಾಯೋಜನೆಅಡಿಯಲ್ಲಿ ರೈತರಿಗೆ ತೊಗರಿಬೆಳೆಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು, ರೈತರು ಈ ಸೌಲಭ್ಯವನ್ನು ಪಡೆಯಬೇಕೆಂದು ತಿಳಿಸಿದರು. ರಾಷ್ರೀಯ ಆಹಾರಭದ್ರತಾ ಯೋಜನೆ ಜಿಲ್ಲಾಸಂಯೋಜಕ ಮಹಬಲೇಶಪ್ಪ ನವರು ಮಾತನಾಡಿ, ರೈತರು ಆಧುನಿಕ ತಂತ್ರಜ್ನಾನದಿಂದ ಬೆಳೆಬೆಳೆದು ಅಧಿಕಇಳುವರಿಹೊಂದುವಂತೆ ತಿಳಿಸಿದರು. ರೈತ ಮಹಮ್ಮದ್‍ಭಾಷ, ಆತ್ಮ ಸಂಯೋಜಕ ಕವಿತ, ರೇಣುಕಾರಾದ್ಯ, ಅನುಗಾರ ಎಕೆ.ಮಲ್ಲಪ್ಪ, ಸುಂಕಪ್ಪ ಸೇರಿದಂತೆ ನೂರಾರು ರೈತರು ತೊಗರಿ ಕ್ಷೇತ್ರೋತ್ಸವದಲ್ಲಿ ಭಾಗವಹಿಸಿ ಮಾಹಿತಿಪಡೆದರು.