ರೈತರು ಉಳುಮೆ ಮಾಡುತ್ತಿರುವ ಭೂಮಿಯ ಹಕ್ಕು ಪತ್ರಕ್ಕೆ ಆಗ್ರಹ

ಸಂಡೂರು.:ಮಾ:28: ಸಂಡೂರು ತಾಲೂಕು ಸರ್ವೇ ಸೆಟಲ್‍ಮೆಂಟ್ ಇಲ್ಲದಂತಹ ತಾಲೂಕಾಗಿದ್ದು ರೈತರು 10-15ವರ್ಷಗಳಿಂದಲೂ ಉಳುಮೆ ಮಾಡುತ್ತಿದ್ದು ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು ಅವರಿಗೆ ಹಕ್ಕು ಪತ್ರಗಳನ್ನು ನೀಡದೇ ತಿರಸ್ಕರಿಸುವಂತಹ ಕಾರ್ಯಮಾಡುತ್ತಿದ್ದಾರೆ, ಇದರಿಂದ ಬಡ ರೈತ ಕುಟುಂಬಗಳು ಬೀದಿಗೆ ಬೀಳುತ್ತಿದ್ದು ತಕ್ಷಣ ಅವರಿಗೆ ಹಕ್ಕು ಪತ್ರ ನೀಡುವ ಮೂಲಕ ರಕ್ಷಿಸಿ ಎಂದು ರೈತ ಸಂಘದ ಮುಖಂಡ ಜೆ.ಎಂ. ಚನ್ನಬಸಯ್ಯ ಒತ್ತಾಯಿಸಿದರು.
ಅವರು ತಾಲೂಕಿನ ಬಂಡ್ರಿ, ತಾಳೂರು, ಇತರ ಗ್ರಾಮ ಪಂಚಯಿತಿಗಳಲ್ಲಿ ರೈತರಿಗೆ ಅಗುತ್ತಿರುವ ತೊಂದರೆಯನ್ನು ಪರಿಗಣಿಸಿ ರೈತರಿಗೆ ರಕ್ಷಣೆ ಕೊಡಿ ಅವರು ಉಳುಮೆ ಮಾಡುವ ಕೃಷಿ ಭೂಮಿಗಳಿಗೆ ಹಕ್ಕು ಪತ್ರ ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟಿಸಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ರೈತರು ದೇಶದ ಬೆನ್ನೆಲುಬು ಎನ್ನುತ್ತಿರುವ ಜನಪ್ರತಿನಿಧಿಗಳು ಇತ್ತ ಗಮನಹರಿಸುತ್ತಿಲ್ಲ, ಕೋರ್ಟ ನಿಯಮದಂತೆ ಅಧಿಕಾರಿಗಳು ಸ್ಥಳೀಯ ಹಿರಿಯರ ಹೇಳಿಕೆಯನ್ನು ಪಡೆದುಕೊಂಡು ಹಕ್ಕುಪತ್ರ ಮತ್ತು ದಾಖಲೆಗಳನ್ನು ಕೊಡಬಹುದು, ಅದರೆ ಸಾರಾಸಗಟ ಅರ್ಜಿ ತಿರಸ್ಕರಿಸುವಂತಹ ಕಾರ್ಯನಡೆಯುತ್ತಿದೆ, ಜಿಲ್ಲಾಧಿಕಾರಿಗಳು ಮತ್ತೋಮ್ಮೆ ಪರಿಶೀಲಿಸಿ ಎಂದು ತಿಳಿಸಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ, ಅದ್ದರಿಂದ ತಕ್ಷಣ ಅಧಿಕಾರಿಗಳು ಕಾರ್ಯಾಪ್ರವೃತ್ತರಾಗಿ ಮತ್ತೋಮ್ಮೆ ದಾಖಲೆಗಳನ್ನು, ಅರ್ಜಿಗಳನ್ನು ಪುರಸ್ಕರಿಸಿ ಅವರಿಗೆ ಹಕ್ಕು ಪತ್ರಗಳನ್ನು ನೀಡುವಂತಹ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತಸಂಘದ ಅಧ್ಯಕ್ಷ ಯು.ತಿಪ್ಪೇಸ್ವಾಮಿ, ರೈತ ಸಂಘದ ಮುಖಂಡರು, ಸುತ್ತಲಿನ ಗ್ರಾಮಗಳ ರೈತರು ಒಟ್ಟಾಗಿ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ, ಜಿಲ್ಲಾ ಸಮಾಜ ಕಲ್ಯಾಣ ಅದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ತಮ್ಮ ಮನವಿಯನ್ನು ಮತ್ತೋಮ್ಮೆ ಒತ್ತಾಯಿಸಿದರು.