ರೈತರು ಉದ್ಯಮಿಗಳಾಗುವತ್ತ ಚಿಂತನೆ ನಡೆಸಬೇಕು

ಮೈಸೂರು: ಮಾ.05:- ರೈತರು ಉತ್ಪಾದಿಸಿದ ಉತ್ಪನ್ನಗಳನ್ನು ಮೌಲ್ಯವರ್ಧನೆಗೊಳಿಸಿ, ಪ್ಯಾಕಿಂಗ್ ಬ್ರಯಾಂಡಿಂಗ್ ಮಾಡುವ ಮೂಲಕ ಹೆಚ್ಚಿನ ಆದಾಯಗಳಿಸಲು ವಿಪುಲವಾದ ಅವಕಾಶಗಳಿವೆ ಎಂದು ಉಪ ಕೃಷಿ ನಿರ್ದೇಶಕ ಡಾ.ಜಿ.ಹೆಚ್. ಯೋಗೇಶ್ ಹೇಳಿದರು.
ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಔದ ಮಾರ್ಚ 1 ರಿಂದ 3 ರವರಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು ರೈತರು ಉದ್ಯಮಿಗಳಾಗುವತ್ತ ಚಿಂತನೆ ನಡೆಸಬೇಕು. ರೈತರು ತಾವು ಬೆಳೆದ ಉತ್ಪನ್ನಗಳನ್ನು ಸಂಸ್ಕರಿಸಿ, ಪ್ಯಾಕಿಂಗ್, ಬ್ರಯಾಂಡಿಔಗ್ ಮಾಡಲು Pಒಈಒಇ ಯೋಜನೆಯಲ್ಲಿ ಶೇ.50 ರ ಸಹಾಯಧನ ನೀಡಿ ಸರ್ಕಾರವು ಪೆÇೀತ್ಸಾಹಿಸುತ್ತಿದೆ. ರೈತರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಭಾಗವಾಗಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ಅಭಿವೃದ್ಧಿಪಡಿಸಿರುವ ತಾಂತ್ರಿಕತೆಗಳನ್ನು ಮಂಡ್ಯ ವಲಯದ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ.ಚಂದ್ರಕಲಾ ತಿಳಿಸಿಕೊಟ್ಟರು.
ಮತ್ತೊಂದು ಅಧಿವೇಶನದಲ್ಲಿ ಅಈಖಿಖI ವಿಜ್ಞಾನಿ ಡಾ.ಉಷಾ ಧರ್ಮರಾಜನ್ ಅವರು ಮಾತನಾಡುತ್ತಾ ರೈತರು ಕಚ್ಚಾ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಆದಾಯ ಕಡಿಮೆ, ಅವುಗಳನ್ನು ಸಂಸ್ಕರಿಸಿ ಮಾರಾಟ ಮಾಡಲು ಅಈಖಿಖI ವತಿಯಿಂದ ನೂರಾರು ತಂತ್ರಜ್ಞಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ತಂತ್ರಜ್ಞಾನಗಳನ್ನು ಬಳಸಿ ರೈತರು ಉತ್ಪನ್ನಗಳನ್ನು ಸಂಸ್ಕರಿಸಿ ಮಾರಾಟ ಮಾಡುವ ಮೂಲಕ ತಮ್ಮ ಆದಾಯವನ್ನು ದ್ವಿಗುಣಗೊಳಿಸಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ರೈತರಾಗಿ ಹಲವು ರೀತಿಯ ಪ್ರಯತ್ನಗಳಿಂದ ಹೆಚ್ಚಿನ ಲಾಭಗಳಿಸುತ್ತಿರುವ ಗುಂಡ್ಲುಪೇಟೆಯ ನಾಗಾರ್ಜುನ, ಹುನಮನಹಳ್ಳಿಯ ಇಂದಿರಮ್ಮ ಮತ್ತು ಮಂಡ್ಯದ ನಿರಂಜನ್ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ-ಸಂಸ್ಕರಣೆ ಮಾರುಕಟ್ಟೆಯಲ್ಲಿನ ಸವಾಲುಗಳು ಮತ್ತು ಪರಿಹಾರೋಪಾಯಗಳನ್ನು ತಿಳಿಸಿದರು.
ಎರಡನೇ ದಿನದ ಅಧಿವೇಶನದಲ್ಲಿ ಕೃಷಿ ತಂತ್ರಜ್ಞೆ ಡಾ.ಚೈತ್ರ ಭರತ್ ಮಾತನಾಡುತ್ತಾ ಗ್ರಾಹಕರ ಬೇಡಿಕೆಗನುಗುಣವಾಗಿ ಜಾಣತನದ ಮಾರುಕಟ್ಟೆ, ಆನ್ ಲೈನ್ ಮಾರುಕಟ್ಟೆ, ನೇರ ಮಾರಾಟಗಳಲ್ಲಿರುವ ಅವಕಾಶಗಳು, ಸವಾಲುಗಳು ಮತ್ತು ಮುಂಜಾಗ್ರತೆಗಳ ಬಗ್ಗೆ ತಿಳಿಸಿದರು.
ನಾಗನಹಳ್ಳಿ ವಿಸ್ತರಣಾ ಶಿಕ್ಷಣಾ ಘಟಕದ ವಿಜ್ಞಾನಿ ಡಾ.ನಾಗವೇಣಿ ಇವರು ಸಿರಿಧಾನ್ಯಗಳಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆಗಿರುವ ಅವಕಾಶಗಳ ಕುರಿತು ಉಪನ್ಯಾಸ ನೀಡಿದರು.
ತರಬೇತಿ ಕಾರ್ಯಕ್ರಮದ ಮೂರನೇ ದಿನದಲ್ಲಿ ಜಯಪುರ ಹೋಬಳಿಯ ಗೋಪಾಲಪುರ ಗ್ರಾಮದ ಪ್ರಗತಿಪರ ರೈತರಾದ ದಿಲೀಪ್ ಇವರು ತಮ್ಮ ಜಮೀನಿನಲ್ಲಿ ಕ್ಷೇತ್ರ ಭೇಟಿ ಮಾಡಿಸುವ ಮೂಲಕ ಹೈನುಗಾರಿಕೆ ಉತ್ಪನ್ನಗಳ ಮೌಲ್ಯವರ್ಧೆನೆ ಮತ್ತು ನೇರ ಮಾರುಕಟ್ಟೆ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಔಡರು. ಮತ್ತೊಬ್ಬ ಪ್ರಗತಿಪರ ರೈತ ಹುಲ್ಲಹಳ್ಳಿ ಹೋಬಳಿ ಚಂಪೆÇೀಟಿ ಎಸ್ಟೇಟನ ತಂಕಚನ್ ತಮ್ಮ ಜಮೀನಿನಲ್ಲಿ ಅಳವಡಿಸಿಕೊಂಡಿರುವ ಕಡಿಮೆ ಬಂಡವಾಳದ ನೈಸರ್ಗಿಕ ಮತ್ತು ಸಾವಯವ ಕೃಷಿ ಪದ್ದತಿಗಳನ್ನು ತಿಳಿಸಿಕೊಟ್ಟರು. ಕೋಕೋ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಪ್ಯಾಕಿಂಗ್, ಬ್ರ?ಯಾಂಡಿಔಗ್ ಮತ್ತು ನೇರ/ಆನ್ ಲೈನ್ ಮಾರುಕಟ್ಟೆ ಮೂಲಕ ಲಾಭಗಳಿಕೆ ಕುರಿತು ತಮ್ಮ ಅನುಭವ ಹಂಚಿಕೊಔಡರು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಗ್ರಾಮಗಳಿಂದ 25 ಜನ ರೈತರು ಸ್ವ-ಇಚ್ಛೆಯಿಂದ ನೋಂದಾಯಿಸಿಕೊಔಡು ಸಕ್ರೀಯವಾಗಿ ಭಾಗವಹಿಸಿದರು. ಮೂರು ದಿನ ರೈತರಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಿಔದ ಕಲ್ಪಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಮಮತಾ, ವಜ್ರೇಶ್ವರಿ, ಕೃಷಿ ಅಧಿಕಾರಿಗಳಾದ ರಾಜಶೇಖರ್, ಗಂಗನರಸಿಔಹಯ್ಯ, ಮತ್ತು ಶಿಲ್ಪ ಇವರು ಉಪಸ್ಥಿತರಿದ್ದರು.