ರೈತರು ಆರ್ಥಿಕವಾಗಿ ಸಬಲರಾಗಿ : ಸಚಿವ ಹೆಬ್ಬಾರ


ಮುಂಡಗೋಡ, ಮಾ 14: ಕೃಷಿಕ ಮತ್ತು ಕೃಷಿ ಕಾರ್ಮಿಕ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ತಾಲೂಕಿನ ಎಲ್ಲ ರೈತರು ಆರ್ಥಿಕವಾಗಿ ಮುಂದುವರೆಯಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ತಾಲೂಕಿನ ಚವಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 2 ಕೋಟಿ ರೂ. ಅನುದಾನದ 5-6 ಕಾಮಗಾರಿಗಳ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು. ಸುಮಾರು 500 ಕೋಟಿ ಅನುದಾನದಲ್ಲಿ ತಾಲೂಕಿಗೆ ನೀರಾವರಿ ಯೋಜನೆ ತರಲಾಗಿದೆ. ಇದರಿಂದ ತಾಲೂಕಿನ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಸೊಸೈಟಿಯಲ್ಲಿ ರೈತರ ಸಾಲಮನ್ನಾವಾಗಿದೆ. ಆದಷ್ಟ್ಟು ಬೇಗ ಹಂತ ಹಂತವಾಗಿ ಎಲ್ಲಾ ರೈತರ ಸಾಲಮನ್ನಾ ಮಾಡಲಾಗುವುದು. ವಿಶೇಷವಾಗಿ ಮನೆ-ಮನೆಗೆ ನಲ್ಲಿ ಮೂಲಕ ಪ್ರತಿಯೊಬ್ಬರಿಗೆ ದಿನಕ್ಕೆ 50 ಲೀಟರ್ ಅಂತೆ ಕುಡಿಯುವ ನೀರು ಪೂರೈಸುವ ಮನೆ-ಮನೆಗೆ ಗಂಗೆ ಎಂಬ 25ಲಕ್ಷ ರೂ. ಅನುದಾನದ ಯೋಜನೆ ತರಲಾಗಿದೆ. ತಾಲೂಕಿನ ಬಹತೇಕ ಗ್ರಾಮಗಳಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣವಾಗಿದೆ. ಕೆಲಸ ತರುವುದು ನಮ್ಮ ಕೆಲಸ ಅಚ್ಚುಕಟ್ಟಾಗಿ ಮಾಡಿಸಿಕೊಳ್ಳುವುದು ನಿಮ್ಮ ಕೆಲಸ ಯೋಜನೆ ಗುಣಮಟ್ಟದಲ್ಲಿ ಆದರೆ ಫಲಪ್ರದವಾಗುವುದು ಇದು ಸರ್ಕಾರದ್ದಲ್ಲ ನಿಮ್ಮದು ಎಂದು ಕಿವಿಮಾತು ಹೇಳಿದರು.
ವಾಕರಸಾ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ ಮಾತನಾಡಿ ಗ್ರಾ.ಪಂ.ಸದಸ್ಯರು ತಮ್ಮ ಬಂದ ಅನುದಾನದಲ್ಲಿ ಗ್ರಾಮಗಳಲ್ಲಿ ಉತ್ತಮ ಕೆಲಸ ಮಾಡಬೇಕು. ಸರ್ಕಾರದ ಯೋಜನೆಗಳು ನಮ್ಮ ಯೋಜನೆಗಳು. ರೈತರಲ್ಲಿ ಹೊಂದಾಣಿಕೆ ಇರಬೇಕು ಎಂದರು.
ಜಿ.ಪಂ.ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಇತ್ತೀಚಿಗೆ ಎನ್.ಆರ್.ಇ.ಜಿ. ಯೋಜನೆ ಅನುಷ್ಠಾನಕ್ಕೆ ತರಲು ಪಂಚಾಯಿತಿಯವರು ಬಹಳ ಹಿಂಜರಿಯುತ್ತಿದ್ದಾರೆ. ಸಾಕಷ್ಟು ಅನುದಾನಗಳನ್ನು ತರಲು ಅವಕಾಶವಿದೆ. ಇದು ಗ್ರಾಮೀಣ ಭಾಗಗಳಲ್ಲಿ ಅತಿ ಅವಶ್ಯವಿದೆ. ಮುಂದೆ ಆಗುವ ಕೆಲಸಗಳಿಗೆ ಹೆಚ್ಚಿನ ನಿಗಾ ವಹಿಸಿರಿ ಎಂದು ನೂತನ ಸದಸ್ಯರಿಗೆ ಕಿವಿ ಮಾತು ಹೇಳಿದರು. ತಾ.ಪಂ., ಗ್ರಾ.ಪಂ. ಮತ್ತು ಜಿ.ಪಂ. ಸೇರಿ ಒಟ್ಟಾಗಿ ಹಳ್ಳಿಗಳ ಅಭಿವೃದ್ಧಿ ಮಾಡೋಣ ಎಂದರು.
ಕ್ಯಾಸನಕೇರಿ ಗ್ರಾಮದ ಕಾಂಕ್ರೀಟ್ ರಸ್ತೆ, ಮಲವಳ್ಳಿ ಗ್ರಾಮದ ವಿಠೋಬಾ ದೇವಸ್ಥಾನದ ಅಡಿಗಲ್ಲು ಸ್ಥಾಪನೆ ಮತ್ತು ಮನೆ-ಮನೆಗೆ ಗಂಗೆ, ಲಕ್ಕೊಳ್ಳಿ ಗ್ರಾಮದ ಕಾಂಕ್ರೀಟ್ ರಸ್ತೆ, ಬ್ಯಾನಳ್ಳಿ ಗ್ರಾಮದಲ್ಲಿ ಮನೆ-ಮನೆಗೆ ಗಂಗೆ ಹಾಗೂ ಚವಡಳ್ಳಿ ಗ್ರಾಮದ ನೂತನ ಗ್ರಾ.ಪಂ.ಕಟ್ಟಡವನ್ನು ಸಚಿವರು ಉದ್ಘಾಟಿಸಿದರು.
ಸಚಿವ ಶಿವರಾಮ ಹೆಬ್ಬಾರ, ವಿ.ಎಸ್.ಪಾಟೀಲ, ಎಲ್.ಟಿ.ಪಾಟೀಲ, ಪಾರ್ವತೆವ್ವ ಹುನಗುಂದ ಹಾಗೂ ಇತರರನ್ನು ಸನ್ಮಾನಿಸಲಾಯಿತು.
ಈ ವೇಳೆ ತಾ.ಪಂ.ಅಧ್ಯಕ್ಷೆ ರಾಧಾ ಶಿಂಗನಳ್ಳಿ, ಗ್ರಾ.ಪಂ.ಅಧ್ಯಕ್ಷೆ ನೇತ್ರಾವತಿ ಬಿಸವಣ್ಣವರ, ತಾ.ಪಂ ಸದಸ್ಯ ಜ್ಞಾನಧೇವ ಗುಡಿಯಾಳ, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ಗುಡ್ಡಪ್ಪ ಕಾತೂರ, ಅಶೋಕ ಚಲವಾದಿ, ತುಕಾರಾಮ ಇಂಗಳೆ, ಸಿ.ಕೆ.ಅಶೋಕ, ನಿಂಗಜ್ಜ ಕೋಣನಕೇರಿ, ಮಂಜುನಾಥ ಕಟಗಿ, ಪರಶುರಾಮ ತಹಸೀಲ್ದಾರ್, ವೈ.ಪಿ.ಪಾಟೀಲ, ವೈ.ಪಿ.ಭುಜಂಗಿ, ಪ್ರದೀಪ ಚವ್ಹಾಣ, ಯಾಕೂಬ ಯಳಿವಾಳ, ಗ್ರಾ.ಪಂ.ಸದಸ್ಯರು ಇದ್ದರು.