ರೈತರಿಗೆ ಸ್ಪಿಂಕಲರ್ ಪೈಪು ಒದಗಿಸಲು ರೈತ ಸಂಘದಿಂದ ಒತ್ತಾಯಿಸಿ ಮನವಿ

ತಾಳಿಕೋಟೆ:ಜು.26:ತಾಲೂಕಿನ ಕಲಕೇರಿ ಗ್ರಾಮದ ಸುಮಾರು 350 ಕ್ಕೂ ಹೆಚ್ಚಿನ ರೈತರು ಕಳೆದ ವರ್ಷಗಳಲ್ಲಿ 2070 ರಂತೆ ಪ್ರತಿಯೊಬ್ಬರು ಸ್ಪಿಂಕಲರ್ ಪೈಪ್‍ಗಾಗಿ ಹಣ ತುಂಬಿ ಕೃಷಿ ಇಲಾಖೆಗೆ ಅಲೆದಾಡಿ ರೊಸಿ ಹೋಗಿದ್ದಾರೆ, ಕೆಲವರಿಗೆ ಸ್ಪಿಂಕಲರ್ ಪೈಪ್ ಬಂದಿದ್ದು, ಇನ್ನೂ ಉಳಿದ ರೈತರಿಗೆ ಬಂದಿರುದಿಲ್ಲ ಕೂಡಲೇ ಒದಗಿಸುವಂತಹ ಕಾರ್ಯ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾದ್ಯಕ್ಷರಾದ ಸಂಗಮೆಶ ಸಗರ ಹೇಳಿದರು.

ತಾಳಿಕೋಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಮಹೇಶ ಜೋಶಿ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದ್ದು, ಕಾಲುವೆಗಳಲ್ಲಿ ನೀರು ಬಂದಿರುತ್ತವೆ, ಆದಷ್ಟು ಬೇಗನೆ ಉಳಿದ ರೈತರಿಗೆ ಸ್ಪಿಂಕಲರ್ ಪೈಪ್ ಒದಗಿಸಿದರೆ, ರೈತರಿಗೆ ಅನುಕೂಲವಾಗುತ್ತದೆ ಒಂದು ವಾರದೊಳಗಾಗಿ ಸ್ಪಿಂಕಲರ್ ಪೈಪ್ ವಿತರಿಸದಿದ್ದರೆ, ಸಮಸ್ತ ತಾಳಿಕೋಟೆ ತಾಲೂಕಿನ ರೈತರ ಜೊತೆಗೂಡಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಕಚೇರಿಗೆ ಬೀಗ ಜಡೆದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಏಚ್ಚರಿಸಿದರು.

ಈ ಸಮಯದಲ್ಲಿ ರೈತ ಸಂಘದ ಕಲಕೇರಿ ಪಟ್ಟಣದ ಅಧ್ಯಕ್ಷರಾದ ಶಾಂತಯ್ಯ ಗಣಾಚಾರಿ, ಕಲಕೇರಿ ಹೋಬಳಿ ಅಧ್ಯಕ್ಷರಾದ ಬಾಷಾಸಾಹೇಬ ಮನಗೂಳಿ, ಉಪಾಧ್ಯಕ್ಷರಾದ ಪುಂಡಲಿಕ ಚವ್ಹಾಣ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.