ರೈತರಿಗೆ ಸಧ್ಯ ಅವಶ್ಯವಿರುವ ತೊಗರಿ ಬೀಜ ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಣೆ: ಮಹಾದೇವಪ್ಪ ಏವೂರ

ಇಂಡಿ, ಜೂ.8-ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು ರೈತರಿಗೆ ಸಧ್ಯ ಅವಶ್ಯವಿರುವ ತೊಗರಿ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದು ಇಂಡಿ ಸಹಾಯಕ ಕೃಷಿ ನಿರ್ದೇಶಕ ಮಹಾದೇವಪ್ಪ ಏವೂರ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ರೋಗ ಹರಡುತ್ತಿರುವ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗಲೆಂದು ತಾಲೂಕಿನ ತಾಂಬಾ, ನಾದ ಕೆ.ಡಿ, ಸಾಲೋಟಗಿ, ಇಂಡಿ, ಹಿರೇಬೇವನೂರ, ಹೋರ್ತಿ, ಅಥರ್ಗಾ, ಲಚ್ಯಾಣ, ಇಂಚಗೇರಿ ಲೋಣಿ ಬಿ.ಕೆ, ಹಲಸಂಗಿ ಗ್ರಾಮಗಳಲ್ಲಿ ಹೆಚ್ಚುವರಿಯಾಗಿ ಬೀಜ ವಿತರಣಾ ಕೇಂದ್ರ ತೆರೆಯಲಾಗಿದೆ. ರೈತರು ಬೀಜ-ಗೊಬ್ಬರ ಖರೀದಿಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಬೇಕು. ಮತ್ತು ಅಗತ್ಯ ದಾಖಲೆ ಕೊಟ್ಟು ಬೀಜ ಗೊಬ್ಬರ ಖರೀದಿಸಬೇಕೆಂದು ತಿಳಿಸಿದರು.
ಮಳೆ ಮಾಹಿತಿಃ ಇಂಡಿ ತಾಲೂಕಿಗೆ ವಾರ್ಷಿಕ ಸರಾಸರಿ 636 ಎಂ.ಎಂ ಮಳೆಯಾಗಬೇಕಿದ್ದು ಜೂನ್ ತಿಂಗಳಲ್ಲಿ 102 ಎಂ.ಎಂ ಮಳೆಯಾಗಬೇಕಿದೆ. ಸಧ್ಯ ಜೂನ್ 7 ರ ಮಧ್ಯಾನ್ಹ 12 ಗಂಟೆಯ ವರೆಗೂ ತಾಲೂಕಿನಲ್ಲಿ 38.1 ಎಂ.ಎಂ ಮಳೆಯಾಗಿದೆ.

ಬಿತ್ತನೆ ಕ್ಷೇತ್ರಃ 2020-21 ನೇ ಸಾಲಿನಲ್ಲಿ ಮುಂಗಾರು ಬಿತ್ತನೆ ಕ್ಷೇತ್ರದ ಗುರಿ 148055 ಹೆಕ್ಟೇರ್ ಇದ್ದು ಸಧ್ಯ ಅವಶ್ಯವಿರುವ ತೊಗರಿ, ಗೋವಿನ ಜೋಳ, ಸಜ್ಜೆ, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ ಹಾಗೂ ಹತ್ತಿ ಬೀಜಗಳು ಮತ್ತು ವಿವಿಧ ಬಗೆಯ 2000 ಮೆಟ್ರಿಕ್ ಟನ್ ಗೊಬ್ಬರಗಳು ರೈತ ಸಂಪರ್ಕ ಕೇಂದ್ರದಲ್ಲಿ ದಾಸ್ತಾನು ಮಾಡಲಾಗಿದೆ. ಅವಶ್ಯವಿರುವ ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ-ಗೊಬ್ಬರ ಪಡೆಯಬಹುದಾಗಿದೆ.

ವಿಕಲಚೇತನರಿಗೆ ಆಹಾರ ಕಿಟ್ ಹಾಗೂ ಮಾಶಾಸನ ನೀಡಬೇಕೆಂದು ವಿಕಲಚೇತನರ ಹೋರಾಟ ಸಮಿತಿಯಿಂದ ಒತ್ತಾಯ
ವಿಜಯಪುರ, ಜೂ.8-ವಿಕಲಚೇತನರಿಗೆ ಆಹಾರಕಿಟ್ಟು ಹಾಗೂ ಮಾಶಾಸನ ನೀಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿಯ ಅಧ್ಯಕ್ಷರಾದ ಭೀಮನಗೌಡ ಪಾಟೀಲ್ ಮಾತನಾಡಿ ಇಂದು ಎಲ್ಲಾ ವಿಕಲಚೇತನರು ಸೇರಿಕೊಂಡು ಕಳೆದು 1 ವರ್ಷದಿಂಧ ಕೋವಿಡ್ 19 ರೋಗದಿಂದ ರಾಜ್ಯದ ವಿಕಲಚೇತನರು ಯಾವುದೇ ಉದ್ಯೋಗವಿಲ್ಲದೇ ಆರ್ಥಿಕ ಸಂಕಷ್ಟಕೀಡಾಗಿದ್ದು, ಕಳೆದ ಬಾರಿ ಪ್ಯಾಕೇಜ್‍ನಲ್ಲಿ ಯಾವುದೇ ರೀತಿ ಆರ್ಥಿಕ ಸಹಾಯ ಮಾಡಿರುವುದಿಲ್ಲ. ಈ ಬಾರಿಯೂ ಕೂಡಾ 2 ಸಲ ಪ್ಯಾಕೇಜ್ ಘೋಷಣೆ ಮಾಡಿದ್ದರೂ ವಿಕಲಚೇತನರಿಗೆ ಒಂದೇ ಒಂದು ರೂಪಾಯಿ ಪ್ಯಾಕೇಜ್‍ನಲ್ಲಿ ಘೋಷಣೆ ಮಾಡಿಲ್ಲ. ಈಗಗಾಲೇ ಉದ್ಯೋಗವಿಲ್ಲದೇ ರಾಜ್ಯ ವಿಕಲಚೇತನರು ಉಪವಾಸ ವನವಾಸ ಅಂತಾ ಸಾಯುತ್ತಿದ್ದಾರೆ ಎಂದು ಹೇಳಿದರು.
ಕಳೆದ ನಾಲ್ಕು ತಿಂಗಳಿಂದ ಮಾಶಾಸನವೂ ಕೂಡಾ ಬರುತ್ತಿಲ್ಲಾ. ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕಿಂತ ವಿಕಲಚೇತನರು ಆರ್ಥಿಕ ಸಂಕಷ್ಠಕ್ಕೀಡಾಗಿ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ. ದಯವಿಟ್ಟು ಮುಖ್ಯಮಂತ್ರಿ ವಿಕಲಚೇತನರ ಸಮಸ್ಯೆಯನ್ನರಿತು ಶೀಘ್ರವಾಗಿ ವಿಶೇಷ ಪ್ಯಾಕೇಜ್ ಹಾಗೂ 4 ತಿಂಗಳ ಮಾಶಾಸನ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಹೋರಾಟ ಸಮಿತಿಯ ಶೌರ್ಯ ಸಾಯಿ ಕೃಪಾ ಅಂಗವಿಕಲರ ಅಭಿವೃದ್ಧಿ ಸಂಸ್ಥೇಯ ಅಧ್ಯಕ್ಷ ಕಸ್ತೂರಿ ಬೂದಿಹಾಳ, ಬಾಸ್ಕ ಪೂಸ್ ಜಿಲ್ಲಾ ಉಪಾಧ್ಯಕ್ಷ ಮಹೇಶ ಮುಧೋಳ, ಪರಶುರಾಮ ಗುನ್ನಾಪುರ, ಸುರೇಶ ಚವ್ಹಾಣ, ಸಂತೋಷ ಭೊಮ್ಮನಳ್ಳಿ, ಮಹೇಶ ತೋಟದ, ಮಗಲಾ ಇಬ್ರಾಹಿಂಪೂರ, ಸದ್ದಾಮ ಹುಸೇನ ಹೆಬ್ಬಾಳ, ಸುಮಿತ ಪಾಂಡಿಚೇರಿ, ಮಂಜುನಾಥ ಮನಗೊಂಡ ಮತ್ತಿತ್ತರರು ಇದ್ದರು.