ರೈತರಿಗೆ ರಿಯಾಯಿತಿ ದರದ ಬಿತ್ತನೆ ಬೀಜಕ್ಕೆ ಚಾಲನೆ

ಆಳಂದ:ಜೂ.2: ಪಟ್ಟಣದ ಕೃಷಿ ಕೇಂದ್ರದಲ್ಲಿ ರೈತರಿಗೆ ರಿಯಾಯಿತಿ ದರದ ಬಿತ್ತನೆ ಬೀಜಕ್ಕೆ ಶಾಸಕ ಸುಭಾಷ ಆರ್ ಗುತ್ತೇದಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ರೈತರು ಕೊರೊನಾದಿಂದಾಗಿ ಸಂಕಷ್ಟದಲ್ಲಿ ಇದ್ದಾರೆ ಅವರು ಬೆಳೆದ ಬೆಳಗಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲ ಕೆಲವು ರೈತರು ತಾವು ಬೆಳದ ಬೆಳೆಗಳನ್ನು ಬೆಲೆ ಇಲ್ಲದೆ ಅಕ್ಷರಸಃ ಕಂಗಾಲಾಗಿದ್ದಾರೆ.
ರೈತರು ದೈರ್ಯ ಬಿಡಬಾರದು ಸರಕಾರ ರೈತರ ಕೈ ಬಿಡುವುದಿಲ್ಲ ಎಂದ ಅವರು ಮುಂಗಾರು ಬಿತ್ತನೆಗಾಗಿ ರಿಯಾಯಿತಿ ದರದಲ್ಲಿ ಕೃಷಿ ಇಲಾಖೆ ಬೀಜಗಳನ್ನು ನೀಡುತ್ತಿದೆ ರೈತಾಪಿ ವರ್ಗ ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮಾತನಾಡಿ ರೈತರಿಗಾಗಿ ತೊಗರಿ ಸೂರ್ಯಕಾಂತಿ ಉದ್ದು ಹೆಸರು ಮೆಕ್ಕೆಜೋಳ ಸಜ್ಜೆ ಬಿಜಗಳು ಬಂದಿವೆ. ,ಆಳಂದ ಮಾದನಹಿಪ್ಪರಗಾ ಖಜೂರಿ ನರೋಣಾ ನಿಂಬರ್ಗಾ ಹೋಬಳಿ ಸೇರಿ ತೊಗರಿ 442.8 ಕ್ವಿಂಟಾಲ ಉದ್ದು7.80 ಕ್ವಿಂಟಾಲ ಹೆಸರು 18.60 ಸೂಯಾಬಿನ್ 1350.4 ಮೆಕ್ಕೆಜೋಳ 11.20 ಸೂರ್ಯಕಾಂತಿ 4.5 ಸಜ್ಜೆ 2.74 ಕ್ವಿಂಟಾಲ ಬೀಜಗಳು ಬಂದಿದ್ದು ರೈತರು ಇದರ ಲಾಭ ಪಡೆದುಕೊಳ್ಳಬೇಕು ಎಂದರು. ಈ ಸಮಯದಲ್ಲಿ ಕಲಬುರಗಿ ಕೃಷಿ ಇಲಾಖೆ ಉಪನಿರ್ದೇಶಕಿ ಅನಸೂಯ ಹೂಗಾರ ಮುಖಂಡರಾದ ಅಶೊಕ ಗುತ್ತೆದಾರ ಮಲ್ಲಣ್ಣಾ ನಾಗೂರೆ ಕಾಶಿನಾಥ ಕೊಟ್ಟರಕಿ ಬಿ.ಎಂ ಬಿರಾದಾರ ಇತರರು ಇದ್ದರು.