ರೈತರಿಗೆ ರಸಗೊಬ್ಬರ ಸರಿಯಾಗಿ ಮುಟ್ಟಿಸಿ: ಮಲ್ಲಣ್ಣ ಗೋಗಿ

ಶಹಾಪುರ: ಜು.20:ಜಿಲ್ಲೆಯಲ್ಲಿ ರೈತಪಿ ಜನರು ವಿವಿಧ ಬೆಳೆಗಳು ಬಿತ್ತನೆ ಮಾಡಿದ್ದು ಸಮರ್ಪಕ ಮಳೆ ಕೂಡ ಆಗಿದೆ ಆದರೆ ರಸಗೊಬ್ಬರ ಕೊರತೆಯಿಂದಾಗಿ ರೈತರು ಕಂಗಾಲಾಗಿದ್ದಾರೆ
ಅದಕ್ಕೆ ಸರ್ಕಾರ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಲ್ಲಣ್ಣ ಉಳಂಡಿಗೆರಿ ಆಗ್ರಹಿಸಿದ್ದಾರೆ ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಾದ್ಯಂತ ಹತ್ತಿ ತೊಗರಿ ಕಬ್ಬು ಶೆಂಗಾ ಹೆಸರು ಸೇರಿದಂತೆ ವಿವಿಧ ಬೀಜ ಬಿತ್ತನೆ ಮಾಡಿದ ರೈತರು ರಸಗೊಬ್ಬರದ ಅಗತ್ಯತೆ ಅನುಗುಣವಾಗಿ ಸುಲಭವಾಗಿ ರೈತರಿಗೆ ದೊರೆಯುವಂತೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಕೂಡಲೇ ರಸಗೊಬ್ಬರ ದಾಸ್ತಾನು ಕುರಿತು ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ನಡೆಸುವ ಮೂಲಕ ಎಲ್ಲಾ ರೈತರಿಗೆ ಸುಲಭವಾಗಿ ರಸಗೊಬ್ಬರ ವಿತರಿಸುವ ವ್ಯವಸ್ಥೆ ಮಾಡಬೇಕು ಎಂದು ಹೇಳಿದರು. ಮುಂದುವರಿದ ಮಾತನಾಡಿ ರೈತರಿಗೆ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆ ಯಾಗದಿದ್ದರೆ ಜಿಲ್ಲೆಯಾದ್ಯಂತ ರೈತರೊಂದಿಗೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.