ರೈತರಿಗೆ ರಕ್ಷಣೆ ನೀಡಲು ಎಐಕೆಕೆಎಸ್ ಪ್ರತಿಭಟನೆ

ರಾಯಚೂರು, ಸೆ.೧೨, ದೇವದುರ್ಗ ತಾಲೂಕಿನ ವಿವಿಧ ಗ್ರಾಮದ ರೈತರು ಅನೇಕ ವರ್ಷಗಳಿಂದ ಸರ್ಕಾರಿ ಅರಣ್ಯ ಜಮೀನುಗಳಲ್ಲಿ ಸಾಗುವಳಿ ಮಾಡಿಕೊಂಡು ರೈತರು ಉಪ ಜೀವನ ಮಾಡುತ್ತಿದ್ದು ಅರಣ್ಯ ಅಧಿಕಾರಿಗಳು ಸಾಗುವಳಿ ಮಾಡಿಕೊಂಡ ರೈತರ ಹೊಲದಲ್ಲಿ ಗುಂಡಿಗಳನ್ನು ಅಗೆದು ಮತ್ತು ರೈತರು ಬಿತ್ತನ ಮಾಡಿದ್ದನ್ನು ಲೆಕ್ಕಿಸದೇ ಬೆಳೆ ನಾಶಪಡಿಸಿ ರೈತರನ್ನು ಒಕ್ಕಲೆಬಿಸಿದ್ದಾರೆ ರೈತರಿಗೆ ಸೂಕ್ತ ರಕ್ಷಣೆ ನೀಡುವಂತೆ ಕರ್ನಾಟಕ ರೈತ
ಸಂಘ ಮುಖಂಡರು ನಗರದ ಟಿಪ್ಪುಸುಲ್ತಾನ್ ಗಾರ್ಡನ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.
ಜಾಲಹಳ್ಳಿ ಹೋಬಳಿಯ ನಾಗಲಾಪೂರು ಸೀಮದ ಸರ್ವೆ ೩೨ ಮತ್ತು ೨೦ ರಲ್ಲಿ ರೈತರು ಸಾಗುವಳಿ ಮಾಡಿದ ರೈತರಿಗೆ ಬಿತ್ತನೆ ಮಾಡಲು ಅನುಕೂಲತೆ ಕಲ್ಪಿಸಿಕೊಡಬೇಕು ಹಾಗೂ ರಕ್ಷಣೆ ನೀಡಬೇಕು..
ಕಂದಾಯ ಇಲಾಖೆಯಿಂದ ಅರಣ್ಯ ಇಲಾಖೆಗೆ ವರ್ಗಾವಣೆಯಾದ ಸುಮಾರು ೩ ತಲೆ ಮಾರಿನಿಂದ ಅರಣ್ಯ, ಜಮೀನನ್ನು ಸಾಗುವಳಿ ಮಾಡಿಕೊಂಡ ಬಂದ ರೈತರಿಗೆ ಸಾಗುವಳಿ ಚೀಟಿ ಮತ್ತು ಪಟ್ಟು ಕಟ್ಟ ಮಂಜೂರಾತಿ ಪತ್ರ ಕೂಡಲೇ ನೀಡಬೇಕು.
ಹೆಚ್ಚುವರಿ ಜಮೀನನ್ನು ಫಾರಂ ನಂ. ೫೭ ರ ಅರ್ಜಿ ಪಡೆದುಕೊಂಡು ರೈತರಿಗೆ ಭೂ ಮಂಜೂರಾತಿ ಮಾಡಬೇಕು.
ಅರಣ್ಯ ಜಮೀನಿನಲ್ಲಿ ರೈತರ ಹೆಸರಿನಲ್ಲಿ ಪಹಣಿ ಇದ್ದರೂ ಆರಣ್ಯ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಮತ್ತು ಸದರಿ ಜಮೀನಿನಲ್ಲಿ ಗುಂಡಿ ಅಗೆಯುವುದು ಮಾಡುತ್ತಿದ್ದು ತಕ್ಷಣ ತಡೆ ಹಿಡಿದು ರೈತರಿಗೆ ಸಾಗುವಳಿ ಮಾಡಲು ಅನುಕೂಲತೆ ಮಾಡಿಕೊಡಬೇಕು.
ಈ ಸಂದರ್ಭದಲ್ಲಿ ಅಮರೇಶ ಮಲ್ಲಯ್ಯ ಕಟ್ಟಮನಿ ಹಾಗೂ ಗಿರಿಲಿಂಗಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.