ರೈತರಿಗೆ ಮೋಸ ಕ್ರಮಕೆ ಕೆ ಆರ್ ಎಸ್ ಒತ್ತಾಯ

ರಾಯಚೂರು, ನ.೧೪- ದೇವದುರ್ಗ ಕೃಷಿ ಮಾರುಕಟ್ಟೆಯಲ್ಲಿ ಪ್ರಾಂಗಣದಲ್ಲಿ
ರೈತರ ಕೃಷಿ ಬೆಳೆಗಳ ತೂಕದಲ್ಲಿ ವೈಜ್ಞಾನಿಕ ತಂತ್ರಜ್ಞಾನ ಚಿಪ್‌ಗಳನ್ನು ಬಳಸಿ ರೈತರಿಗೆ ಮೋಸ ಮಾಡುತ್ತಿದ್ದಾರೆ ಮಾಲೀಕರು ಮತ್ತು ವ್ಯಾಪಾರಸ್ಥ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರೈತ ಸಂಘ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ರೈತರು ಬೆಳೆದ ಹತ್ತಿ, ತೊಗರಿ, ಮೆಣಸಿನಕಾಯಿ, ಜೋಳ, ಸಜ್ಜೆ, ಸೇಂಗಾ ಇನ್ನಿತರೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಪಡಿಸಿ, ದೇವದುರ್ಗ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿಯ ತಕ್ಷಣ ಕೇಂದ್ರಗಳನ್ನು ತೆರೆದು, ರೈತರಿಗೆ ಅನುಕೂಲತೆ ಕಲ್ಪಿಸಿ, ರೈತರು ಬೆಳೆದ ಬೆಳೆಗಳನ್ನು ಮಾರುಕಟ್ಟೆಗೆ ತಂದರೆ, ಪಟ್ಟಣದ ದಲ್ಲಾಳಿ ಬಂಡವಾಳ ವ್ಯಾಪರಸ್ಥರು ಮತ್ತು ಚಿಲ್ಲರೆ ವ್ಯಾಪಾರಸ್ಥರು ಸೇರಿಕೊಂಡು, ವೇಸ್ಟ್ ಕಾಟ, ತೂಕ ಯಂತ್ರಗಳಲ್ಲಿ ವೈಜ್ಞಾನಿಕ ತಂತ್ರಜ್ಞಾನ ಚಿಪ್‌ಗಳನ್ನು ಬಳಸಿ ರೈತರಿಗೆ ಕೃಷಿ ಬೆಳೆಗಳ ತೂಕದಲ್ಲಿ ಭಾರಿ ಮೋಸ, ವಂಚನೆ ಮಾಡುತ್ತಿರುವುದರಿಂದ ಜಾಗೃತ ದಳ ನೇಮಿಸಿ, ತಪ್ಪಿತಸ್ಥ ವ್ಯಾಪಾರಸ್ಥರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ರೈತರಿಗೆ ನ್ಯಾಯ ಒದಗಿಸುವಂತೆ ಆಗ್ರಹಿಸಿದರು.
ರೈತರು ಬೆಳೆದ ಬೆಳೆಗಳ ಮಾರಾಟ ಮಾಡಲು ಕೃಷಿ ಮಾರುಕಟ್ಟೆಯ ಪ್ರಾಂಗಣದಲ್ಲಿ ಮತ್ತೆ ತೊಗು ಇತರ ದ್ವೀದಳ ದಾನಗಳನ್ನು ಖರೀದಿಗಾಗಿ ಕೇಂದ್ರಗಳನ್ನು ತೆರೆಯುವುದು.
ಕೃಷಿ ಮಾರುಕಟ್ಟೆಯಲ್ಲಿ ಸಾರ್ವಜನಿಕರಿಗೆ, ದನಕರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವುದು.
ಪಟ್ಟಣದ ಜಿಂನ್ನಿಂಗ್ ಫ್ಯಾಕ್ಟರಿಗಳಲ್ಲಿ ರೈತರ ಬೆಳೆಗಳ ಮಾರಾಟ ಮಾಡಲು ಬಂದಾಗ ವೈಬ್ರಿಡ್ಜ್ ತೂಕ ಯಂತ್ರಗಳಲ್ಲಿ ತಂತ್ರಜ್ಞಾನ ಚಿಪ್ ಗಳನ್ನು ಅಳವಡಿಸಿ ತೂಕದಲ್ಲಿ ವೃತಾಸಗಳು, ೧ ಕಿಂಟಾಲ್ ಗೆ ೩ ಕೆ ಸೂಟ್ ಮತ್ತು ಮಾರುಕಟ್ಟೆ ದರದಂತೆ ದೇವದುರ್ಗ ಹತ್ತಿ ಕಂಬಿದ ವ್ಯಾಪಾರಗಳು ದರಗಳ ವ್ಯತ್ಯಾಸಗಳು ಹತ್ತಿ ವ್ಯಾಪಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ, ರೈತರಿಗೆ ನ್ಯಾಯ ಒದಗಿಸುವುದು ಸೂಚನಾ ಫಲಕವನ್ನು ಕಡ್ಡಾಯವಾಗಿ ಹಾಕುವುದು.
ಈ ಸಂದರ್ಭದಲ್ಲಿ ಮಲ್ಲಯ್ಯ ಕಟ್ಟಿಮನಿ, ಕೆ. ಗಿರಿಲಿಂಗಸ್ವಾಮಿ, ಸಿದ್ದಲಿಂಗಪ್ಪ ಜೇರಬಂಡಿ ಸೇರಿದಂತೆ ಉಪಸ್ಥಿತರಿದ್ದರು.