ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಸಮರ್ಪಕವಾಗಿ ವಿತರಿಸಲು ಮನವಿ

ಬಳ್ಳಾರಿ, ಜೂ.08: ಮುಂಗಾರು ಬಿತ್ತನೆ ಚುರುಕು ಪಡೆಯುತ್ತದೆ ಆದರೆ, ಮೆಣಸಿನಕಾಯಿ ಬಿತ್ತನೆ ಬೀಜ ಸಿಗದೇರೈತರು ಪರದಾಡುತ್ತಿದ್ದಾರೆ. ಗೋದಾಮಿನಲ್ಲಿ ಮೆಣಸಿನಕಾಯಿ ಬೀಜ ಸ್ಟಾಕ್ ಇದೆ, ಆದರೆ ಅದು ಕಾಳಸಂತೆಕೋರರಿಗೆ ಮಾರಾಟ ಮಾಡಲಾಗುತ್ತಿದೆ. ಒಂದು ಕೆ.ಜಿ. ಮೆಣಸಿನಕಾಯಿ ಬಿತ್ತನೆ ಬೀಜದ ಬೆಲೆ ರೂ.50,000 ಇರುವ ಬೆಲೆಯನ್ನು ಕಾಳಸಂತೆಕೋರರು ರೂ.1,30,000 ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರು ಆತಂಕದಲ್ಲಿದ್ದಾರೆ. ಈ ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಜಂಟಿ ಕೃಷಿ ನಿರ್ದೇಶಕರು ಕಾಳಸಂತೆಕೋರರ ಮೇಲೆ ಸೂಕ್ತ ಕ್ರಮಕೈಗೊಂಡು ರೈತರಿಗೆ ಅವಶ್ಯಕವಿರುವಷ್ಟು ಮೆಣಸಿನಕಾಯಿ ಬಿತ್ತನೆ ಬೀಜ ಕಡಿಮೆ ದರದಲ್ಲಿ ವಿತರಿಸಬೇಕೆಂದು ರೈತ-ಕೃಷಿಕಾರ್ಮಿಕರ ಸಂಘಟನೆ (ಆರ್.ಕೆ.ಎಸ್) ಬಳ್ಳಾರಿ ಜಿಲ್ಲಾ ಸಮಿತಿ ತೋಟಗಾರಿಕಾ ಉಪನಿರ್ದೇಶಕರಲ್ಲಿ ಮನವಿ ಮಾಡಿಕೊಂಡಿದೆ.
ಬೇಡಿಕೆಗಳು
ರೈತರಿಗೆ ಮೆಣಸಿನಕಾಯಿ ಬಿತ್ತನೆ ಬೀಜ ಅವಶ್ಯಕವಿರುವಷ್ಟು ವಿತರಿಸಿ. ಕಾಳಸಂತೆಕೋರರನ್ನು ಮಟ್ಟಹಾಕಿ, ಮೆಣಸಿನಕಾಯಿ ಬಿತ್ತನೆ ಬೀಜವನ್ನು ರೈತರಿಗೆ ಕಡಿಮೆ ದರದಲ್ಲಿ ನೀಡಿರಿ ಎಂದು ಬೇಡಿಕೆಗೆ ಈಡೇರಿಕೆಗೆ ಆಗ್ರಹಿಸಿರುವುದಾಗಿ ಆರ್.ಕೆ.ಎಸ್ ನ ಜಿಲ್ಲಾ ಕಾರ್ಯದರ್ಶಿ ಈ.ಹನುಮಂತಪ್ಪ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.