ರೈತರಿಗೆ ಮೂಲ ಸೌಕರ್ಯ: ಜನಪ್ರತಿನಿಧಿಗಳ ಆದ್ಯ ಕರ್ತವ್ಯ

ಮಧುಗಿರಿ, ಜ. ೧೫- ರೈತಾಪಿ ವರ್ಗದವರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಆದ್ಯ ಕರ್ತವ್ಯ ಎಂದು ಶಾಸಕ ಎಂ.ವಿ.ವೀರಭದ್ರಯ್ಯ ತಿಳಿಸಿದರು.
ತಾಲ್ಲೂಕಿನ ಬಡವನಹಳ್ಳಿ ಗ್ರಾಮದ ಉಪ ಮಾರುಕಟ್ಟೆ ಪ್ರಾಂಗಣದಲ್ಲಿ ಆರ್.ಐ.ಡಿ.ಎಫ್ ೨೪ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿರುವ ಅಂಗಡಿ ಮಳಿಗೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಡವನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಎಪಿಎಂಸಿ ಮಳಿಗೆಗಳಿಂದ ಕೃಷಿ ಮಾರುಕಟ್ಟೆ ಸಮಿತಿಗೆ ಹೆಚ್ಚಿನ ಆದಾಯ ಬರಲಿದ್ದು ಇದರಿಂದ ರೈತಾಪಿ ವರ್ಗದ ಜನರಿಗೆ ಅನುಕೂಲವಾಗಲಿದೆ ಎಂದರು.
ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಕೃಷಿ ಚಟುವಟಿಕೆಗಳು ಸರಾಗವಾಗಿ ನಡೆಯುತ್ತಿವೆ. ರೈತರಿಗೆ ಬೇಕಾದ ಅಗತ್ಯತೆಗಳನ್ನು ಸರ್ಕಾರ ಪೂರೈಸಬೇಕು ಇದಕ್ಕೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಪಡಬೇಕು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಅರುಂಧತಿ, ಪುರಸಭಾಧ್ಯಕ್ಷ ತಿಮ್ಮರಾಜು, ಎಪಿಎಂಸಿ ಅಧ್ಯಕ್ಷ ಡಿ.ಶ್ರೀನಿವಾಸ್, ಉಪಾಧ್ಯಕ್ಷ ಕೆ.ಬಿ.ರಾಜಕುಮಾರ್, ಕಾರ್ಯದರ್ಶಿ ಹೆಚ್.ಎನ್.ಆಶಾ, ಸಹ ಕಾರ್ಯದರ್ಶಿ ಮಂಜುಳ, ನಿರ್ದೇಶಕರುಗಳಾದ ಪಿ.ಟಿ.ಗೋವಿಂದಯ್ಯ, ಪಿ.ಸಿ. ಕೃಷ್ಣಾರೆಡ್ಡಿ, ಡಿ.ಆರ್.ಬಸವರಾಜು, ಎಂ.ಬಿ.ಮರಿಯಣ್ಣ, ಆರ್.ಎನ್.ಚಂದ್ರಕುಮಾರ್, ಎಂ.ರಮಾಬಾಯಿ, ಅಶ್ವತ್ಥಮ್ಮ, ಜಿ.ಎನ್.ಶ್ರೀನಾಥ್, ಜಿ.ಕೆ.ತಿಪ್ಪೇಸ್ವಾಮಿ, ತಿಮ್ಮರಾಜು, ಮುಖಂಡರುಗಳಾದ ಸಿಡದರಗಲ್ಲು ಶ್ರೀನಿವಾಸ್, ಬಾಮಿಮನೆ ಕಾಂತರಾಜು, ಬೋರ್‌ವೆಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.