ರೈತರಿಗೆ ಮಾರಕವಾದ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಲು-ರೈತ ಸಂಘ ಒತ್ತಾಯ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.15: ದೇಶಕ್ಕೆ ಅನ್ನ ನೀಡುವ ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಇಂದು  ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಜೆಲ್ಲೆಯ ಸಂಡೂರು ಸೇರಿದಂತೆ  ನಾನಾ ಕಡೆಯಿಂದ ಆಗಮಿಸಿದ ರೈತರು, ಮುಖಂಡರು  ಘೋಷಣೆಗಳನ್ನು ಕೂಗಿದರು.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ,  ರೈತರಿಗೆ ಮಾರಕವಾದ ಎಪಿಎಂಸಿ ಕಾಯ್ದೆ, ಭೂಸ್ವಾಧೀನ ತಿದ್ದುಪಡಿ ಕಾಯ್ದೆ, ಜಾನುವಾರು ಹತ್ಯೆ ಪ್ರಬಂಧಕ ಹಾಗೂ ಸಂರಕ್ಷಣಾ ಕಾಯ್ದೆಗಳನ್ನು ಕೂಡಲೇ ಹಿಂಪಡೆಯಬೇಕು, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಬೇಕು, ರೈತ ಪರ‌ ನೀತಿಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ರೈತರಿಗೆ ನೀಡಿದ ಭರವಸೆಗಳಂತೆ, ಕೂಡಲೇ ರೈತರಿಗೆ ಮಾರಕವಾಗಿರುವ ಮೂರು ಕಾಯ್ದೆಗಳನ್ನು ಹಿಂಪಡೆಯಬೇಕು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಮೂರು ಕಾಯ್ದೆಗಳನ್ನು ರದ್ದುಗೊಳಿಸುವ ಎಂದು ಘೋಷಣೆ ಮಾಡಿದ್ದು, ಅದರಂತೆ ಸರ್ಕಾರ ನಡೆದುಕೊಳ್ಳುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕು, ನುಡಿದಂತೆ ನಡೆಯುವ ವಿಸ್ವಾಸವಿದೆ ಎಂದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಜಿ.ನಾಗರಾಜ್, ಪ್ರಧಾನ ಕಾರ್ಯದರ್ಶಿ ಜೆ.ಸಿದ್ರಾಮನಗೌಡ, ಉಪಾಧ್ಯಕ್ಷ ದಿವಾಕರ್, ವಿರುಪಾಕ್ಷಿ, ಖಜಾಂಚಿ ಜಿ.ನಾಗರಾಜ್, ಮುಖಂಡರಾದ ಕೊಟೇಶ್ ರೆಡ್ಡಿ, ದೊಡ್ಡ ಬಸಪ್ಪ, ಎಂ.ವಿಜಯಕುಮಾರ್ ಕರ್ಚಿಗನೂರ್, ದೊಡ್ಡಪ್ಪ ಬನ್ನಿಹಟ್ಟಿ, ರಮೇಶ್, ಪ್ರಕಾಶಸ್ವಾಮೀ, ಮಹೇಶ್ ರೆಡ್ಡಿ ಇತರರಿದ್ದರು.