ರೈತರಿಗೆ ಮಾರಕವಾದ ಕಾಯಿದೆ ವಾಪಸ್ ಪಡೆಯುವರೆಗೂ ಹೋರಾಟ

ಲಿಂಗಸುಗೂರು.ನ.೮-ದೇಶಾದ್ಯಂತ ನಡೆಯುತ್ತಿರುವ ರೈತರ ಹೋರಾಟ ಇನ್ನಷ್ಟು ಬಿಗಿಯಾದ ಹೋರಾಟ ಹಮ್ಮಿಕೊಳ್ಳಲಾಗುವದು ರೈತರಿಗೆ ಕೃಷಿ ಕಾಯಿದೆ ವಾಪಸ್ ಪಡೆಯುವರೆಗೂ ಹೋರಾಟ ಮುಂದುವರಿಯಲಿದೆ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ವಿರುದ್ಧ ನಮ್ಮ ಹೋರಾಟ ದೇಶಾದ್ಯಂತ ಪ್ರತಿಯೊಂದು ಗ್ರಾಮದಲ್ಲಿ ಹೋರಾಟದ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ದೇಹಲಿ ರೈತ ಹೋರಾಟಗಾರ ಹರ್ನೇಕ್ ಸಿಂಗ್ ಅವರು ಮಾತನಾಡಿದರು,
ನರೇಂದ್ರ ಮೋದಿ ಅಮೀತ್ ಶಾ ಅವರು ಮತ್ತು ಅವರ ಅವರ ಕೇಂದ್ರ ಮಂತ್ರಿ ಮಂಡಲ ಸದಸ್ಯರು ಕಾಪ್ರೋರೇಟ್ ಕಂಪನಿಗಳಿಗೆ ಮಾರಾಟವಾಗಿದ್ದಾರೆ
ಮತ್ತು ನರೇಂದ್ರ ಮೋದಿ ಅಮೀತ್ ಶಾ ಒಬ್ಬ ಸುಳ್ಳು ಗಾರ ಬಿಜೆಪಿ ಪಕ್ಷದ ಪ್ರಧಾನಿ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಮುಂಚೆ ರೈತರಿಗೆ ಕೃಷಿ ಕಾಯಿದೆ ತಾಂತ್ರಿಕತೆ ಹೆಚ್ಚು ಒತ್ತು ನೀಡುತ್ತದೆ ಎಂದು ಹೇಳಿದ್ದರು.
ಆದರೆ ದೇಶದ ಜನರಿಗೆ ನಾಗರಿಕರಿಗೆ ರೈತರಿಗೆ ಕೃಷಿ ಕಾಯಿದೆ ಜಾರಿಗೆ ತರಲು ಹೊರಟಿರುವ ಸರ್ಕಾರದ ವಿರುದ್ಧ ರೈತ ಮುಖಂಡ ಚಾಮರಾಜ ಪಾಟೀಲ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರವು ಸಬ್ಸಿಡಿ ಬೆಲೆಯ ಸಿಲಿಂಡರ್ ಕೂಡ ಬೇಲೆ ಏರಿಕೆ ಮಾಡಿ ಬಡ ಜನರ ಬದುಕಿನಲ್ಲಿ ಆಟವಾಡಲು ಪ್ರಾರಂಭಿಸಿದ್ದಾರೆ ಕೂಡಲೇ ಕೇಂದ್ರ ಸರ್ಕಾರ ಅಡುಗೆ ಅನಿಲ ಸಿಲಿಂಡರ್ ಬೆಲೆ ಇಳಿಕೆ ಮಾಡಬೇಕು ಎಂದು ಅಮರಣ್ಣ ಗುಡಿಹಾಳ ಸರ್ಕಾರದ ವಿರುದ್ಧ ಕಿಡಿಕಾರಿದರು ರೈತರಿಗೆ ಮಾರಕವಾದ ಕೃಷಿ ಕಾಯಿದೆ ಜಾರಿಗೆ ತರಲು ಹೊರಟಿರುವ ಸರ್ಕಾರದ ಮೇಲೆ ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಸಭೆ ಕರೆದು ಚರ್ಚೆ ನಡೆಸಿ ರೈತರಿಗೆ ಕೃಷಿ ಕಾಯಿದೆ ವಾಪಸ್ ಪಡೆಯಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ರೈತರ ಬಾಳಿಗೆ ಆಶಾಕಿರಣ ವಾಗಬೇಕು ಎಂದು ಅಮೀನ್ ಪಾಶಾ ದಿದ್ದಗಿ ಹೇಳಿದರು.
ನವೆಂಬರ್ ೨೬ ರಂದು ದೇಶಾದ್ಯಂತ ನಡೆಯಲಿರುವ ರೈತ ಚಳುವಳಿ ಮೂಲಕ ರಸ್ತಾರೋಕ್ ನಡೆಸಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಬೆಲೆ ಏರಿಕೆ ಹಾಗೂ ರೈತರ ಕೃಷಿ ಕಾಯಿದೆ ವಿರುದ್ಧ ಹೋರಾಟಕ್ಕೆ ಮುಂದಾಬೇಕಾಗುತ್ತದೆ ಪತ್ರಿಕಾ ಗೋಷ್ಠಿಯಲ್ಲಿ ಇಂದು ಲಿಂಗಸುಗೂರು ಪ್ರವಾಸಿ ಮಂದಿರದಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆ ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಮುಖಂಡ ನಾಗರಾಜ ಸಿರಿಮನೆ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.